ನವದೆಹಲಿ (ಆ 26)  ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚರ್ಚೆ ಒಂದು ಹಂತದಲ್ಲಿ ಮುಗಿದಿದ್ದರೆ ಇದೀಗ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ, ಪ್ರಧಾನಿ ಮೋದಿಯವರ ಮೇಲೆ ಮತ್ತೊಂದು ಸುತ್ತಿನ ವಾಗ್ದಾಳಿ ಮಾಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಎಚ್ಚರಿಕೆಯನ್ನು ಆಧಾರವಾಗಿಟ್ಟುಕೊಂಡು ಮಾತನಾಡಿದ್ದಾರೆ. ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದ್ಯಮಿಗಳ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ ಎಂಬ ಸಲಹೆ ನೀಡಿದ್ದಾರೆ.

'ಯಾರೇ ಬಂದರೂ ಕಾಂಗ್ರೆಸ್ ಬಚಾವ್ ಮಾಡಲು ಸಾಧ್ಯವಿಲ್ಲ'

ಮಾಧ್ಯಮಗಳಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ಆರ್ಥಿಕ ಸಮಸ್ಯೆ ಕಣ್ಮರೆಯಾಗುವುದಿಲ್ಲ. ಇದನ್ನು  ಕೇಂದ್ರ ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ನಾನು ಏನು ಹೇಳುತ್ತ ಬಂದಿದ್ದೆನೋ ಅದೇ ಎಚ್ಚರಿಕೆಯನ್ನು ಆರ್‌ಬಿಐ ಸಹ ನೀಡಿದೆ. ಹಣ ಹೂಡಿಕೆ ಮಾಡುವ ಬದಲು ಹಂಚಿ ಎಂಬ ಆರ್ಥಿಕ ಸಲಹೆಯನ್ನು ರಾಹುಲ್ ನೀಡಿದ್ದಾರೆ.

ಆರ್ಥಿಕತೆಗೆ ಪೆಟ್ಟು ನೀಡಲು ಕೋಟಿ ಕೋಟಿ ಚಿನ್ನ ಸಾಗಿಸಿದ್ದರಾ ಸ್ವಪ್ನ?

ಕೊರೋನಾ  ಸೇರಿದಂತೆ ವಿವಿಧ ಕಾರಣಗಳಿಂದ ಅರ್ಥ ವ್ಯವಸ್ಥೆ ಅಪಾಯದ ಕಡೆ ಸಾಗುತ್ತಿದೆ ಎಂದು ಆರ್‌ ಬಿಐ ಹೇಳಿತ್ತು. ಆರ್ಥಿಕತೆಯ ಬೇಡಿಕೆ ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.  ಈ ವರ್ಷದ ಅಂಕಿ ಅಂಶಗಳು ಆಘಾತ ತರುವಂತೆ ಇದೆ ಎಂದು ಕೇಂದ್ರ ಬ್ಯಾಂಕ್ ಹೇಳಿತ್ತು.

ಈ ಅಂಶಗಳನ್ನೇ ಇಟ್ಟುಕೊಂಡು ವಾಗ್ದಾಳಿ ಮಾಡಿದ ರಾಹುಲ್ ಗಾಂಧಿ, ನಾನು ಹಲವು ತಿಂಗಳುಗಳಿಂದ ನೀಡುತ್ತಿದ್ದ ಎಚ್ಚರಕೆಯನ್ನು ಆರ್ ಬಿ ಐ ಈಗ ದೃಢಪಡಿಸಿದೆ, ಬಡವರಿಗೆ ಹಣವನ್ನು ನೀಡಿ, ಕೈಗಾರಿಕೋದ್ಯಮಿಗಳಿಗೆ ತೆರಿಗೆ ಕಡಿತ ಮಾಡಬೇಡಿ.  ಸುಸ್ಥಿರ ಆರ್ಥಿಕ ಹಾದಿಗೆ ಮರಳಲು ಹಲವು ಬದಲಾವಣೆ  ಇಂದಿನ ಅಗತ್ಯ ಎಂದಿದ್ದಾರೆ.