Asianet Suvarna News Asianet Suvarna News

'ಯಾರೇ ಬಂದರೂ  ಕಾಂಗ್ರೆಸ್ ಬಚಾವ್ ಮಾಡಲು ಸಾಧ್ಯವಿಲ್ಲ'

ಕಾಂಗ್ರೆಸ್ ನಂತಹ ಪಕ್ಷವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ/ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯ/ ಸ್ವದೇಶಿ ಗಾಂಧಿಗಳ ಕೈಗೆ ಚುಕ್ಕಾಣಿ ನೀಡಿ ಎಂದ ಉಮಾಭಾರತಿ

No one can save Congress says MP CM Shivraj Singh Chouhan
Author
Bengaluru, First Published Aug 24, 2020, 10:33 PM IST

ಭೋಪಾಲ್‌ (ಆ. 24)  ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬದಲಾವಣೆ ಒಂದು ಹಂತದ ಚರ್ಚೆ ನಡೆದು ಅಂತಿಮವಾಗಿ ಸೋನಿಯಾ ಗಾಂಧಿಯವರೇ ಮುಂದುವರಿಯುವ ನಿರ್ಧಾರ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ನೀಡುತ್ತಿರುವ ಭಿನ್ನ ಭಿನ್ನ ಹೇಳಿಕೆಗಳನ್ನು ಬಿಜೆಪಿ ತನ್ನದೇ ಆಯಾಮದಲ್ಲಿ ವಿಶ್ಲೇಷಿಸಿದೆ.

ಕಾಂಗ್ರೆಸ್ ನಂತಹ ಪಕ್ಷವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ ಎಂದು  ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌  ಹೇಳಿದ್ದಾರೆ. 

'ಹಿಟ್ಟು ಹಳಸಿತ್ತು..ಡ್ಯಾಶ್ ಹಸಿದಿತ್ತು'  ರವಿ ವ್ಯಂಗ್ಯ

ಜ್ಯೋತಿರಾಧಿತ್ಯ ಸಿಂಧಿಯಾ  ಕಾಂಗ್ರೆಸ್ ವಿರುದ್ಧ ದನಿ ಎತ್ತಿದಾಗ ಅಲ್ಲಿಯೂ ಬಿಜೆಪಿ ಪಿತೂರಿ ಎಂದು ಹೇಳಿದ್ದರು. ಈಗ ಆ ಪಕ್ಷದ ನಾಯಕರೇ ಬರೆದಿರುವ ಪತ್ರದ ಅಸಲಿತನ ಒಪ್ಪಿಕೊಳ್ಳಲು ಸಾಧ್ಯವಿಲ್ಲದೇ ಬೇರೆಯವರ ಮೇಲೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಚೌಹಾಣ್ ಹೇಳಿದರು.

ಕಾಂಗ್ರೆಸ್‌ನಲ್ಲಿ ನೆಹರು-ಗಾಂಧಿ ಕುಟುಂಬದ ಪ್ರಾಬಲ್ಯ ಕುಗ್ಗಿದ್ದು, ಪಕ್ಷ ಅಂತ್ಯ ಕಾಲದಲ್ಲಿದೆ ಎಂದು ಇನ್ನೊಂದು ಕಡೆ ಉಮಾ ಭಾರತಿ ಸಹ ಹೇಳಿಕೆ ನೀಡಿದ್ದಾರೆ. ಸ್ವದೇಶಿ ಗಾಂಧಿಗಳ ಕೈಗೆ ಆಡಳಿತ ನೀಡಿದರೆ ಬದಲಾವಣೆ ಕಾಣಬಹುದು ಎಂಬ ಸಲಹೆಯನ್ನು ಉಮಾ ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ಸೀನಿಯರ್ಸ್ ಮತ್ತು ಜೂನಿಯರ್ಸ್ ನಡುವೆ ಜಟಾಪಟಿ ಆರಂಭವಾಗಿರುವುದು ಗುಟ್ಟಿನ ವಿಚಾರವಾಗೇನೂ ಉಳಿದುಕೊಂಡಿಲ್ಲ.  ಪಕ್ಷದ ನೇತೃತ್ವ ವಹಿಸುವ ವಿಚಾರ  ಕಾಂಗ್ರೆಸ್ ನಲ್ಲಿ ಮತ್ತೊಂದಿಷ್ಟು ಗೊಂದಲಗಳನ್ನು ಹುಟ್ಟುಹಾಕಿದೆ. 

 

Follow Us:
Download App:
  • android
  • ios