ವಿಮಾನ ಹಾರುತ್ತಿರುವಾಗಲೇ ಎಂಜಿನ್ ಆಫ್ ಮಾಡ್ತಿದ್ದ ಟಾಟಾ!

ದಿವಂಗತ ಉದ್ಯಮಿ ರತನ್ ಟಾಟಾ ಅವರು ವಿಮಾನ ಹಾರಾಟದ ವೇಳೆ ಎಂಜಿನ್ ಆಫ್ ಮಾಡುವ ವಿಚಿತ್ರ ಹವ್ಯಾಸ ಹೊಂದಿದ್ದರು. 'ರತನ್ ಟಾಟಾ ಎ ಲೈಫ್' ಪುಸ್ತಕದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. 

Ratan Tata A Life Book Exposes Tatas Daring Mid Air Engine Shutdown

ನವದೆಹಲಿ: ಅ.9ರಂದು ಇಹಲೋಕ ತ್ಯಜಿಸಿದ ದೇಶದ ಪ್ರಸಿದ್ದ ಉದ್ಯಮಿ ರತನ್ ಟಾಟಾ ಅವರಿಗೆ ವಿಚಿತ್ರ ಹವ್ಯಾಸವೊಂದು ಇತ್ತು. ಸ್ವತಃ ಪೈಲಟ್ ಆಗಿದ್ದ ಟಾಟಾ ಅವರು ವಿಮಾನ ಆಗಸದಲ್ಲಿರುವಾಗಲೇ ಅದರ ಎಂಜಿನ್ ಆಫ್ ಮಾಡಿ ಬಿಡುತ್ತಿದ್ದರು. ಈ ಮೂಲಕ ತಾವು ವಿಮಾನ ಹಾರಾಟ ನಡೆಸುವುದನ್ನು ನೋಡಲು ಜತೆಯಾದವರಿಗೆ ಭೀತಿ ಹುಟ್ಟಿಸುತ್ತಿದ್ದರು!

ರತನ್ ಟಾಟಾ ಅವರ ಜೀವನ ಕುರಿತು ಥಾಮಸ್ ಮ್ಯಾಥ್‌ ಅವರು ಬರೆದಿರುವ ಹಾಗೂ ಹಾರ್ಪರ್ ಕಾಲಿನ್ಸ್ ಪ್ರಕಾಶನ ಸಂಸ್ಥೆ ಹೊರತಂದಿರುವ 'ರತನ್ ಟಾಟಾ ಎ ಲೈಫ್' ಎಂಬ ಪುಸ್ತಕದಲ್ಲಿ ಈ ಮಾಹಿತಿ ಇದೆ.  ರತನ್ ಟಾಟಾ ಅವರ ಭಯಾನಕ ಹಾರಾಟ ಕೌಶಲ್ಯದ ಬಗ್ಗೆ ಹಲವಾರು ಕತೆಗಳು ಇವೆ. ವಿಮಾನವನ್ನು ಆಗಸದಲ್ಲಿ ಹಾರಾಡಿಸುತ್ತಾ ಖುಷಿಪಡುತ್ತಿದ್ದ ಟಾಟಾ, ದಿಢೀರನೆ ಎಂಜಿನ್ ಆಫ್ ಮಾಡಿ ಜತೆಗಾರರಿಗೆ ಆತಂಕ ಹುಟ್ಟಿಸುತ್ತಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ 1960ನೇ ಇಸ್ವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿಮಾನ ಹಾರಾಟ ಕಲಿತಿದ್ದ ಅವರು, ಅಮೆರಿಕದಲ್ಲಿದ್ದಾಗ ವಿಮಾನ ಚಾಲನೆ ಮಾಡುತ್ತಿದ್ದರು. 2007ರಲ್ಲಿ ಬೆಂಗಳೂರಿನ ಏ‌ರ್ ಶೋ ವೇಳೆ ಸಹ ಪೈಲಟ್ ಆಗಿ ಎಫ್-16 ವಿಮಾನ ಹಾರಿಸಿದ್ದರು.

Halekai House: ಸಮುದ್ರಮುಖಿಯಾಗಿರುವ ರತನ್‌ ಟಾಟಾ ₹150 ಕೋಟಿ ಮೌಲ್ಯದ ಮನೆಗೆ ಈಗ ಇವರೇ ಮಾಲೀಕರು!

10 ಸಾವಿರ ಕೋಟಿಯ ವಿಲ್‌ನಲ್ಲಿ ನಂಬಿಕಸ್ತ ಗೆಳೆಯ ಶಂತನು ನಾಯ್ಡುರನ್ನು ಮರೆಯದ ರತನ್‌ ಟಾಟಾ!

 

Latest Videos
Follow Us:
Download App:
  • android
  • ios