Asianet Suvarna News Asianet Suvarna News

ಅನ್‌ಲಾಕ್‌ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಪ್ರಸರಣ ಹೆಚ್ಚಳ!

* ‘ಆರ್‌- ನಂಬರ್‌’ 0.78%ರಿಂದ 0.88ಕ್ಕೆ ಜಿಗಿತ: ಅಧ್ಯಯನ

* ಅನ್‌ಲಾಕ್‌ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಪ್ರಸರಣ ಹೆಚ್ಚಳ

* 100 ಸೋಂಕಿತರಿಂದ 78 ಜನಕ್ಕೆ ಹಬ್ಬುತ್ತಿದ್ದ ವೈರಸ್‌ 88ಕ್ಕೇರಿಕೆ

* ದೇಶದಲ್ಲಿ 3ನೇ ಅಲೆ ಪ್ರಾರಂಭದ ಮತ್ತಷ್ಟುಸುಳಿವು?

Rapid Surge in Covid R Number from June-End Hints at Fresh Spurt pod
Author
Bangalore, First Published Jul 12, 2021, 8:36 AM IST

ನವದೆಹಲಿ(ಜು.12): ಕೇರಳ, ಮಹಾರಾಷ್ಟ್ರದಲ್ಲಿನ ಸೋಂಕು, ಸಾವು ಉಲ್ಬಣ 3ನೇ ಅಲೆ ಇರಬಹುದು ಎಂಬ ಆತಂಕದ ಬೆನ್ನಲ್ಲೇ, ಅದು ಮೂರನೇ ಅಲೆಯಾಗಿರುವ ಸಾಧ್ಯತೆ ಹೆಚ್ಚು ಎಂದು ಸುಳಿವು ನೀಡುವ ಮತ್ತಷ್ಟುಅಂಕಿ- ಅಂಶಗಳು ಹೊರಬಿದ್ದಿವೆ. ಸೋಂಕು ಹೆಚ್ಚಳದ ಸ್ಪಷ್ಟಸುಳಿವು ನೀಡುವ ಆರ್‌-ನಂಬರ್‌ (ಒಬ್ಬ ಸೋಂಕಿತ ವ್ಯಕ್ತಿಯಿಂದ ಇನ್ನೆಷ್ಟುಜನರಿಗೆ ಸೋಂಕು ಹಬ್ಬುತ್ತಿದೆ ಎಂದು ಅಳೆಯುವ ಪ್ರಮಾಣ) ಪ್ರಮಾಣವು ಮೇ 15ರ ಅವಧಿಗೆ ಹೋಲಿಸಿದರೆ ಜೂ.26ರ ವೇಳೆಗೆ ಹೆಚ್ಚಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಜೂನ್‌ ಕಡೆಯ ವಾರಕ್ಕೂ ಮುಂಚಿನ ಸಮಯದವರೆಗೂ ಆರ್‌-ನಂಬರ್‌ ಹಂತಹಂತವಾಗಿ ಇಳಿಕೆಯಾಗುತ್ತಲೇ ಇತ್ತು. ಆದರೆ ಜೂ.20ರಿಂದ ಜುಲೈ 7ರ ಅವಧಿಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮೆಟಿಕಲ್‌ ಸೈನ್ಸಸ್‌ನ ಸಿತಾಬ್ರಾ ಸಿನ್ಹಾ ನೇತೃತ್ವದ ತಂಡದ ವಿಶ್ಲೇಷಣೆ ಹೇಳಿದೆ.

"

ಇದು ಅನ್‌ಲಾಕ್‌ ಆಗುತ್ತಲೇ ಜನರು ಮಾರುಕಟ್ಟೆ, ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳಿಗೆ ನುಗ್ಗಿದ ಸಮಯ ಎಂಬುದು ಗಮನಾರ್ಹ.

ಹೆಚ್ಚಳ ಹೇಗೆ?:

ಇತ್ತೀಚಿನ ಅಂಕಿ- ಅಂಶಗಳ ಅನ್ವಯ ಮೇ 15ರ ಆಸುಪಾಸಿನಲ್ಲಿ ಆರ್‌-ನಂಬರ್‌ ಶೇ.0.78 ಇತ್ತು. ಅದು ಈಗ ಜೂನ್‌ 26ರ ವೇಳೆಗೆ ಶೇ.0.88ಕ್ಕೆ ಏರಿಕೆಯಾಗಿದೆ. ಇದರರ್ಥ 100 ಜನರ ಸೋಂಕಿತರು ಮೊದಲಿಗೆ ಸರಾಸರಿ 78 ಜನರಿಗೆ ಸೋಂಕು ಹಬ್ಬಿಸುತ್ತಿದ್ದರೆ, ಇದೀಗ ಆ ಪ್ರಮಾಣ 88ಕ್ಕೆ ಹೆಚ್ಚಳವಾಗಿದೆ.

ಕೇರಳ, ಮಹಾರಾಷ್ಟ್ರ ಡೇಂಜರ್‌:

ಒಂದು ವೇಳೆ ಆರ್‌-ನಂಬರ್‌ 1ಕ್ಕಿಂತ ಹೆಚ್ಚಿದ್ದರೆ ಅದು ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಇದ್ದಿದ್ದರಲ್ಲಿ ಸಮಾಧಾನಕರ ವಿಷಯವೆಂದರೆ ಹಾಲಿ ಕೇರಳ ಮತ್ತು ಮಹಾರಾಷ್ಟ್ರ ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಆರ್‌-ನಂಬರ್‌ ಶೇ.1ಕ್ಕಿಂತ ಕಡಿಮೆ ಇದೆ. ಇನ್ನು ಕೇರಳದಲ್ಲಿ ಶೇ.1.1 ಮತ್ತು ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಶೇ.1ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಏನಿದು ಆರ್‌-ನಂಬರ್‌?

ಒಬ್ಬ ಕೊರೋನಾ ಸೋಂಕಿತನಿಂದ ಎಷ್ಟುಜನರಿಗೆ ಸೋಂಕು ಹಬ್ಬುತ್ತಿದೆ ಎಂದು ಅಳೆಯವ ಪ್ರಮಾಣ. ಮೇ 15ರ ಆಸುಪಾಸಿನಲ್ಲಿ ಇದು ಶೇ.0.78ರಷ್ಟಿತ್ತು. ಅಂದರೆ ಪ್ರತಿ 100 ಮಂದಿಯಿಂದ 78 ಜನರಿಗೆ ಸೋಂಕು ಹಬ್ಬುತ್ತಿತ್ತು. ಆದರೆ ಜೂ.26ರ ವೇಳೆಗೆ ಇದು ಶೇ.0.88ಕ್ಕೆ ಏರಿಕೆಯಾಗಿದೆ. ಅಂದರೆ 100 ಸೋಂಕಿತರಿಂದ 88 ಜನರಿಗೆ ಸೋಂಕು ಹರಡುತ್ತಿದೆ. ಚೆನ್ನೈ ಸಂಸ್ಥೆಯ ಅಧ್ಯಯನದಿಂದ ಇದು ಪತ್ತೆ.

Follow Us:
Download App:
  • android
  • ios