Asianet Suvarna News Asianet Suvarna News

ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ!

ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ| ದೆಹಲಿಯ 5 ಕೃಷ್ಣಾ ಮೆನನ್ ಮಾರ್ಗ್’ನಲ್ಲಿರುವ ಸರ್ಕಾರಿ  ಬಂಗಲೆ| ನಿವೃತ್ತರದ ಮೂರೇ ದಿನದಲ್ಲಿ ಅಧಿಕೃತ ಬಂಗಲೆಯಿಂದ ಹೊರಬಂದ ಗೊಗೊಯ್| ಕಡಿಮೆ ಅವಧಿಯಲ್ಲಿ ಬಂಗಲೆ ತೆರವುಗೊಳಿಸಿದ ಮೊದಲ ಸಿಜೆಐ ಎಂಬ ಹೆಗ್ಗಳಿಕೆ| ಅಯೋಧ್ಯೆ ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದ ಗೊಗೊಯ್|

Ranjan Gogoi Vacates Official home 3 Days After Retiring
Author
Bengaluru, First Published Nov 21, 2019, 5:54 PM IST

ನವದೆಹಲಿ(ನ.21): ಅಯೋಧ್ಯೆ ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿ ನಿವೃತ್ತರಾಗಿರುವ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನಿವೃತ್ತಾರದ ಮೂರೇ ದಿನದಲ್ಲಿ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.

ದೆಹಲಿಯ 5 ಕೃಷ್ಣಾ ಮೆನನ್ ಮಾರ್ಗ್’ನಲ್ಲಿರುವ ಸರ್ಕಾರಿ  ಬಂಗಲೆಯನ್ನು ರಂಜನ್ ಗೊಗೊಯ್ ನಿವೃತ್ತರಾದ ಮೂರೇ ದಿನದಲ್ಲಿ ತೆರವುಗೊಳಿಸಿದ್ದಾರೆ.

ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ಈ ಮೂಲಕ ನಿವೃತ್ತರಾದ ಕೇವಲ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆ ತೆರವುಗೊಳಿಸಿದ ಮೊದಲ ಸಿಜೆಐ ಎಂಬ ಹೆಗ್ಗಳಿಕೆಗೆ ರಂಜನ್ ಗೊಗೊಯ್ ಪಾತ್ರರಾಗಿದ್ದಾರೆ.

ಈ ಹಿಂದೆ ಮಾಜಿ ಸಿಜೆಐ ಜ. ಜೆಎಸ್ ಖೆಹರ್ ನಿವೃತ್ತರಾದ ಒಂದು ವಾರದಲ್ಲಿ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದರು.

ಇಂದು ರಂಜನ್ ಗೊಗೋಯ್ ನಿವೃತ್ತಿ: ಬಿಟ್ಟು ಹೊರಟರು ರಂಜನೀಯ ತೀರ್ಪುಗಳ ಬುತ್ತಿ!

ನಿಯಮದ ಪ್ರಕಾರ ಸಿಜೆಐ ನಿವೃತ್ತರಾದ ಒಂದು ತಿಂಗಳೊಳಗಾಗಿ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಬೇಕು. 

ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ತೀರ್ಪು, ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಲಿಂಗ ಕಾಮ ಅಪರಾಧವಲ್ಲ ಎಂಬಂತಹ ಹಲವು ಐತಿಹಾಸಿಕ ತೀರ್ಪನ್ನು ಗೊಗೊಯ್ ಪ್ರಕಟಿಸಿದ್ದರು.

ಎನ್‌ಆರ್‌ಸಿ ಭಾರತದ ಭವಿಷ್ಯಕ್ಕೆ ಒಳ್ಳೆಯದು ಎಂದ ಸಿಜೆಐ ಗಗೋಯ್!

Follow Us:
Download App:
  • android
  • ios