ಸುಭಾಷ್ ಚಂದ್ರ ಬೋಸ್ 128ನೇ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗಿದೆ. ಇದೇ ವೇಳೆ ಸುಭಾಷ್ ಚಂದ್ರ ಬೋಸ್ ಬ್ರಿಟೀಷರ ಬಂಧನದಿಂದ ತಪ್ಪಿಸಿಕೊಂಡು ದೇಶ ತೊರೆಯುವ ಮೊದಲು ಬಳಿಸದ ಕಾರು ಇದೀಗ ರಾಂಚಿಯಲ್ಲಿರುವ ಚಟರ್ಜಿ ಕುಟುಂಬದಲ್ಲಿದೆ. ಇಷ್ಟೇ ಅಲ್ಲ ಈ ಕಾರು ಹಾಗೂ ಕುಟುಂಬದ ನಡುವೆ ರೋಚಕ ಕತೆ ಇದೆ.

ರಾಂಚಿ(ಜ.24) ಸ್ವಾತಂತ್ರ ವೀರ ಸೇನಾನಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಭಾರತ ಪರಾಕ್ರಮ ದಿವಸ ಎಂದು ಆಚರಿಸುತ್ತಿದೆ. ಜನವರಿ 23ರಂದು ದೇಶ ನೇತಾಜಿಯ 128ನೇ ಜಯಂತಿ ಆಚರಿಸಿದೆ. ಸುಬಾಷ್ ಚಂದ್ರ ಬೋಸ್ ಕೊನೆಯ ದಿನಗಳು ನಿಗೂಢವಾಗಿತ್ತು. ಈ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ನೇತಾಜಿ ಸಾವು ಈಗಲೂ ಬಿಡಿಸಲಾಗದ ಗುಟ್ಟು. ಇದರ ನಡುವೆ ನೇತಾಜಿ ಕೊನೆಯ ಬಾರಿಗೆ ಭಾರತದಲ್ಲಿ ಬಳಸಿದ ಫೋರ್ಡ್ 514 ಕಾರು ರಾಂಚಿಯ ಚಟರ್ಜಿ ಕಟುಂಬದಲ್ಲಿದೆ. ಈ ಕಾರನ್ನು ಚಟರ್ಜಿ ಕುಟುಂಬ ಅತ್ಯಂತ ಜೋಪಾನವಾಗಿ ಹಾಗೂ ಅತ್ಯಂತ ಸವಾಲಿನಿಂದ ಕಾಪಾಡಿಕೊಂಡು ಬರುತ್ತಿದೆ.

1932ರಲ್ಲಿ ಡಾ. ಫಣೀಂದ್ರನಾಥ್ ಚಟರ್ಜಿ ಈ ಕಾರನ್ನು ಖರೀದಿಸಿದ್ದರು. ವೈದ್ಯರಾಗಿದ್ದ ಫಣೀಂದ್ರನಾಥ್ ಖರೀದಿಸಿದ ಕಾರು ಇದೀಗ ತಲೆ ತಲೆಮಾರುಗಳಿಂದ ನಿರ್ವಹಣೆ ಮಾಡುತ್ತಾ ಬರಲಾಗುತ್ತಿದೆ. ಕಾರಣ ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಕೊನೆಯ ಬಾರಿಗೆ ಬಳಸಿದ ಕಾರು. 1940ರ ವೇಳೆಗೆ ಸುಭಾಷ್ ಚಂದ್ರ ಬೋಸ್ ಬ್ರಿಟೀಷರಲ್ಲಿ ನಡುಕು ಹುಟ್ಟಿಸಿದ್ದರು. ನೇತಾಜಿಗೆ ಭಾರತದ ಇತರ ಪ್ರಮುಖ ನಾಯಕರ ಸಾಥ್ ಸಿಕ್ಕಿದ್ದರೆ 1940-41 ಆಸುಪಾಸಿನಲ್ಲೇ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು. ಬ್ರಿಟಿಷರು ಎಲ್ಲವನ್ನು ಅರ್ಧಕ್ಕೆ ಬಿಟ್ಟು ಓಡಿ ಹೋಗುತ್ತಿದ್ದರು. ಆದರೆ ಹಾಗಾಗಲಿಲ್ಲ. ಸುಭಾಷ್ ಚಂದ್ರ ಬೋಸ್ ಅರೆಸ್ಟ್ ಮಾಡಲು ಬ್ರಿಟಿಷರು ಹೊಂಚು ಹಾಕಿದ್ದರು. ಹೀಗಾಗಿ ಸುಭಾಷ್ ಚಂದ್ರ ವಾಸವಿದ್ದ ಕೋಲ್ಕತಾದ ಮನೆ, ಅವರ ಪ್ರಯಾಣ ಎಲ್ಲದ ಮೇಲೂ ಬ್ರಿಟಿಷರ್ ಹದ್ದಿನ ಕಣ್ಣಿಟ್ಟಿದ್ದರು.

ಬ್ರಿಟಿಷರ ಕಣ್ತಪ್ಪಿಸಿ ಸುಭಾಷ್ ಚಂದ್ರ ಬೋಸ್ ಚಕ್ರದಪುರ ರೈಲು ನಿಲ್ದಾಣಕ್ಕೆ ತಲುಪಿದ್ದರು. ಅಂದು ಬೋಸ್ ಆಪ್ತರೊಬ್ಬರು ರಾಂಚಿಯಲ್ಲಿ ನೆಲೆಸಿದ್ದರು. ಬ್ರಿಟಿಷರಿಂದ ತಪ್ಪಿಸಿಕೊಂಡು, ಸುಳಿವು ಸಿಗದಂತೆ ರಾಂಚಿಗೆ ಬರುವ ಮೊದಲೇ ಬೋಸ್, ಆಪ್ತರಿಗೆ ಮಾಹಿತಿ ನೀಡಿದ್ದರು. ನೇತಾಜಿಯನ್ನು ಯಾರಿಗೂ ತಿಳಿಯದಂತೆ ಜೊತೆಗೆ ವೇಗವಾಗಿ ಕರೆ ತರಬೇಕಿತ್ತು. ನೇತಾಜಿ ಪ್ರಮುಖ ಸಭೆಯಲ್ಲೂ ಪಾಲ್ಗೊಳ್ಳಬೇಕಿತ್ತು. ಎತ್ತಿನ ಗಾಡಿ, ಕುದುರೆ ಗಾಡಿಗಳು ಲಭ್ಯವಿತ್ತು. ಆದರೆ ಬ್ರಿಟಿಷರಿಗೆ ತಿಳಿದರೆ ನೇತಾಜಿಯನ್ನು ಅರೆಸ್ಟ್ ಮಾಡುವುದು ಸುಲಭವಾಗಿತ್ತು. ಹೀಗಾಗಿ ಕಾರಿನಲ್ಲಿ ತರೆತರಲು ಪ್ಲಾನ್ ಮಾಡಿದ್ದರು. ಈ ವೇಳೆ ಫಣೀಂದ್ರನಾಥ್ ಚಟರ್ಜಿ ಕರೆದುಕೊಂಡು ಕಾರಿನಲ್ಲಿ ತೆರಳಿದ್ದರು. ಇದೇ ಕಾರಿನಲ್ಲಿ ನೇತಾಜಿಯನ್ನು ಕರೆದುಕೊಂಡು ರಾಮಘಡಕ್ಕೆ ಆಗಮಿಸಿದ್ದರು. 

1940ರ ಮಾರ್ಚ್ 18 ಹಾಗೂ 19 ರಂದು ನೇತಾಜಿ ರಾಂಚಿಯಲ್ಲಿ ತಂಗಿದ್ದರು. ಮಾರ್ಚ್ 20 ರಂದು ಮತ್ತೆ ರಾಮಘಡಕ್ಕೆ ಇದೇ ಕಾರಿನಲ್ಲಿ ನೇತಾಜಿಯನ್ನು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಫಣಿಂದ್ರನಾಥ್ ಚಟರ್ಜಿ ಕಾರು ಡ್ರೈವಿಂಗ್ ಮಾಡಿದ್ದರು. ಬಳಿಕ 60 ಕಿಲೋಮೀಟರ್ ರಸ್ತೆ ಮೂಲಕ ರಾಂಚಿ ರೈಲ್ವೇ ನಿಲ್ದಾಣಕ್ಕೆ ತಂದು ಬಿಡಲಾಗಿತ್ತು. ಇಲ್ಲಿಂದ ನೇತಾಜಿ ಕೋಲ್ಕತ್ತಾಗೆ ಮರಳಿದ್ದರು. 

ನೇತಾಜಿ ಬಳಸಿದ ಕಾರನ್ನು ಫಣೀಂದ್ರನಾಥ್ ಚಟರ್ಜಿ ಮೊಮ್ಮಗ ಅರೂಪ್ ಚಟರ್ಜಿ ಈ ಕಾರನ್ನು ಉತ್ತವಾಗಿ ನಿರ್ವಹಣೆ ಮಾಡಿದ್ದಾರೆ. ಇದರ ಬಿಡಿ ಭಾಗಗಳು ಅಲಭ್ಯವಾಗಿದೆ. ಹೀಗಾಗಿ 1968ರಲ್ಲಿ ಇದೇ ರೀತಿಯ ಮತ್ತೊಂದು ಹಳೇ ಕಾರನ್ನು ಖರೀದಿಸಿ ಅದರ ಬಿಡಿ ಭಾಗಗಳನ್ನು ಬಳಸಿದ್ದಾರೆ. ಇದೀಗ ಪ್ರತಿ ದಿನ ಈ ಕಾರು ಬಳಸುತ್ತಾರೆ. ಇದೀಗ ಇದರ ಬಿಡಿಭಾಗಗಳು ಎಲ್ಲೂ ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಚಾಗಿ ಈ ಕಾರು ಬಳಸುವುದಿಲ್ಲ. ಪ್ರತಿ ದಿನ ಈ ಕಾರು ಸ್ಟಾರ್ಟ್ ಮಾಡಿ ಬಳಿ ಎಂಜಿನ್ ಆಫ್ ಮಾಡುತ್ತಾರೆ. ಈ ಮೂಲಕ ನೇತಾಜಿ ನೆನಪನ್ನು, ಸ್ಮರಣೀಯವಾಗಿಸಿದ್ದಾರೆ.