ನವದೆಹಲಿ(ಜೂ.22): ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಮುಂದುವರೆದಿರುವಾಗಲೇ, ತುರ್ತು ಅಗತ್ಯವನ್ನು ಪೂರೈಸಲು 500 ಕೋಟಿ ರು.ವರೆಗಿನ ಯಾವುದೇ ಶಸ್ತಾ್ರಸ್ತ್ರ ವ್ಯವಸ್ಥೆ ಅಥವಾ ಅಸ್ತ್ರ ಖರೀದಿಗೆ ಸೇನೆಯ ಮೂರೂ ವಿಭಾಗಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ತುರ್ತು ಅಗತ್ಯ ಯೋಜನೆಯಡಿ ಸೇನೆಯ ಮೂರೂ ವಿಭಾಗಗಳು ಕೇಂದ್ರ ಮಿಲಿಟರಿ ವ್ಯವಹಾರಗಳ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ ತಮಗೆ ಅಗತ್ಯವಿರುವ ಖರೀದಿ ನಡೆಸಬಹುದು. ಈ ಹಿನ್ನೆಲೆಯಲ್ಲಿ ಈಗಾಗಲೇ ಮೂರೂ ವಿಭಾಗಗಳು ತಮಗೆ ತುರ್ತು ಅಗತ್ಯವಿರುವ ಅಸ್ತ್ರ ಮತ್ತು ಸಲಕರಣೆಗಳ ಪಟ್ಟಿತಯಾರಿಸುವ ಪ್ರಕ್ರಿಯೆ ಕೂಡ ಆರಂಭಿಸಿವೆ.

ನೇಪಾಳ ರೇಡಿಯೋಗಳಿಂದ ಭಾರತ ವಿರೋಧಿ ಪ್ರೋಗ್ರಾಂ!

ಭಾನುವಾರ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಸೇನಾ ಮಹಾದಂಡನಾಯಕ ಮತ್ತು ಸೇನೆಯ ಮೂರು ವಿಭಾಹಗಳ ಮುಖ್ಯಸ್ಥರ ಜತೆ ನಡೆಸಿದ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ಉರಿಯಲ್ಲಿ ನಡೆದ ದಾಳಿ ಬಳಿಕ ಸೇನಾ ಪಡೆಗಳು ತಮಗೆ ಬೇಕಾದ ಶಸ್ತಾ್ರಸ್ತ್ರ, ಕ್ಷಿಪಣಿ ಸೇರಿದಂತೆ ಅಗತ್ಯ ವಸ್ತುಗಳ ಸಾಕಷ್ಟುದಾಸ್ತಾನು ಮಾಡಿಕೊಂಡಿದೆ. ಅದಕ್ಕೆ ಹೊರತಾಗಿ ಇದೀಗ ತುರ್ತು ಅಗತ್ಯ ಬಿದ್ದರೆ ಬೇಕಾಗಬಹುದಾದ ಶಸ್ತಾ್ರಸ್ತ್ರಗಳ ಖರೀದಿಗೆ ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಸ್ವಾತಂತ್ರ:

ಈ ನಡುವೆ ಗಡಿಯಲ್ಲಿ ಚೀನಾ ತೋರುವ ಯಾವುದೇ ಅಕ್ರಮಣಕಾರಿ ವರ್ತನೆಗೆ ಪ್ರತಿಯಾಗಿ ಸೂಕ್ತ ತಿರುಗೇಟು ನೀಡಲು ಸೇನೆಗೆ ಕೇಂದ್ರ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ.