ನವದೆಹಲಿ[ಮಾ. 10]  ಪ್ರಿಯಾಂಕಾ ವಾದ್ರಾ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಡುವಿನ ಲಿಂಕ್ ಬಗ್ಗೆ ಒಂದೊಂದೆ ವಿಚಾರಗಳು ಬಹಿರಂಗವಾಗುತ್ತಿವೆ. ದೊಡ್ಡ ಮೊತ್ತಕ್ಕೆ ಎಂಎಫ್ ಹುಸೇನ್ ಅವರ ಪೇಂಟಿಂಗ್ ಖರೀದಿ ಮಾಡಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಕುಟುಂಬ ಮತ್ತು ಸಂಬಂಧಿಕರ ವಿರೋಧದ ನಡುವೆಯೂ ರಾಣಾ ಕಪೂರ್ ರಾಜೀವ್ ಗಾಂಧಿ ಪೇಂಟಿಂಗ್ ಖರೀದಿ ಮಾಡಿದ್ದರು ಎಂಬುದು ಅವರದ್ದೇ ಹೇಳಿಕೆಯಿಂದ ಬಹಿರಂಗವಾಗಿದೆ.

ಕೇಂದ್ರದ ಮಾಜಿ ಸಚಿವ ಮಿಲಿಂದ್ ದೋರಾ ಈ ಪೇಂಟಿಂಗ್ ಖರೀದಿ ಮಾಡಲು ನನ್ನ ಮೇಲೆ ಒತ್ತಡ ತಂದಿದ್ದರು ಎಂದು ರಾಣಾ ಕಪೂರ್ ಒಂದು ಕಡೆ ಹೇಳಿದ್ದಾರೆ.

ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದಾಗ ರಾಜಕೀಯ ವಿಚಾರಗಳು ಹರಿದು ಬಂದಿದ್ದವು. ವಾದ್ರಾ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಡುವಿನ ವಿಚಾರ ಇಟ್ಟುಕೊಂಡು ಬಿಜೆಪಿ ವಿಚಾರವನ್ನು ಬೇರೆ ಕಡೆ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.  ಪೇಂಟಿಂಗ್ ಸೇಲ್ ಆಗಿದ್ದು 2010ರಲ್ಲಿ ಆದರೆ 2014ರಲ್ಲಿ 50 ಸಾವಿರ ಕೋಟಿ ಸಾಲ ಇದ್ದಿದ್ದು  2019ರ ವೇಳೆಗೆ 2 ಲಕ್ಷ ಕೋಟಿ ರೂ. ಗೆ ಏರಿದ್ದು ಹೇಗೆ ಎಂದು ಕಾಂಗ್ರೆಸ್ ವಾದ ಮುಂದಿಡುತ್ತದೆ.

ಕೇಳಿದವರಿಗೆಲ್ಲ ಯೆಸ್ ಎಂದು ಸಾಲ ಕೊಟ್ಟಿದ್ದೆ ಇದಕ್ಕೆಲ್ಲ ಕಾರಣ

ರಾಣಾ ಕಪೂರ್‌ ಗೆ ದೋರಾ ಪತ್ರ: ಕಾಂಗ್ರೆಸ್ ನಾಯಕ ಮಿಲಿಂದ್ ದೋರಾ ರಾಣಾ ಕಪೂರ್ ಗೆ 2010 ಪತ್ರ ಬರೆದಿದ್ದಾರೆ ಎನ್ನಲಾಗಿದ್ದು  ಎಂಎಫ್ ಹುಸೇನ್ ರಚಿಸಿರುವ ರಾಜೀವ್ ಗಾಂಧಿ ಕಲಾಕೃತಿ  ಖರೀದಿ ಮಾಡಿ ಈ ಬಗ್ಗೆ ಪ್ರಿಯಾಂಕಾ ವಾದ್ರಾ ಅವರನ್ನು ಸಂಪರ್ಕಿಸಿ ಎಂದು ಕೋರಿರುವ ವಿಚಾರವೂ ಬೆಳಕಿಗೆ ಬಂದಿದೆ.

ರಾಣಾ ಕಪೂರ್ ಗೆ ಇಡಿ ಡ್ರಿಲ್: ಇನ್ನೊಂದು ಕಡೆ  ಜಾರಿ ನಿರ್ದೇಶನಾಲಯ ರಾಣಾ ಕಪೂರ್ ವಿಚಾರಣೆ ಮಾಡುತ್ತಿದ್ದು ಶೆಲ್ ಕಂಪನಿಯಿಂದ 600 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ವಿಚಾರವನ್ನು ಎತ್ತಿಕೊಂಡ್ರಿ. ಡಿಎಚ್‌ಎಫ್ ಎಲ್ ಕಂಪನಿಗೆ ದೊಡ್ಡ ಮೊತ್ತದ ಸಾಲ ಮಂಜೂರು ಮಾಡಿದ್ದು, ಈ  ಹಣ ಅಲ್ಲಿಂದ 79 ಡಮ್ಮಿ ಕಂಪನಿಗಳಿಗೆ ವರ್ಗಾವಣೆಯಾಗಿದ್ದು ಸೇರಿದಂತೆ ಅನೇಕ  ವಿಚಾರಗಳನ್ನು ತನಿಖೆಗೆ ಕೖಗೆತ್ತಿಕೊಂಡಿದೆ.