ಸ್ವಾಮಿ ಸ್ಮರಣಾನಂದ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ 

ಕೋಲ್ಕತಾ(ಮಾ.27): ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ (95) ಮಂಗಳವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರು ಮಂಗಳವಾರ ರಾತ್ರಿ 8.14 ಕ್ಕೆ ಮಹಾಸಮಾಧಿಯನ್ನು ತಲುಪಿದರು ಎಂದು ಮಿಷನ್‌ ಹೇಳಿಕೆ ತಿಳಿಸಿದೆ. ಅವರು 2017ರಲ್ಲಿ ಮಿಷನ್‌ 16ನೇ ಅಧ್ಯಕ್ಷರಾಗಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವಾಮಿ ಸ್ಮರಣಾನಂದ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಪ್ರಸಿದ್ಧ ಜೈನಮುನಿ ವಿದ್ಯಾಸಾಗರ ಮಹರಾಜ್ ಛತ್ತೀಸ್‌ಘಡದಲ್ಲಿ ನಿಧನ

ಸ್ಮರಣಾನಂದರನ್ನು ಮೂತ್ರನಾಳದ ಸೋಂಕಿನಿಂದಾಗಿ ಜನವರಿ 29 ರಂದು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಗಿತ್ತು. ನಂತರ ಅವರು ಉಸಿರಾಟದ ವೈಫಲ್ಯ ಅನುಭವಿಸಿದ್ದರು, ಇದಕ್ಕಾಗಿ ಅವರನ್ನು ಮಾರ್ಚ್ 3ರಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.