Asianet Suvarna News Asianet Suvarna News

ಕರ್ನಾಟಕದ ಪ್ರಸಿದ್ಧ ಜೈನಮುನಿ ವಿದ್ಯಾಸಾಗರ ಮಹರಾಜ್ ಛತ್ತೀಸ್‌ಘಡದಲ್ಲಿ ನಿಧನ

ಕರ್ನಾಟಕದ ಪ್ರಸಿದ್ಧ ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹರಾಜ್ ಅವರು ಛತ್ತೀಸ್‍ಗಢದ ಡೊಂಗ್ರಾಘರ್‌ನಲ್ಲಿ ನಿಧನರಾಗಿದ್ದಾರೆ.

Karnataka famous Jain Muni Vidyasagar Maharaj of  passed away in Chhattisgarh sat
Author
First Published Feb 18, 2024, 6:04 PM IST

ಹೊಸದಿಲ್ಲಿ (ಫೆ.18): ಕಳೆದ ಮೂರು ದಿನಗಳಿಂದ ಸಲ್ಲೇಖನ ವ್ರತವನ್ನು ಆಚರಣೆ ಮಾಡುತ್ತಾ ಸಮಾಧಿ ಪ್ರಕ್ರಿಯೆಯನ್ನು ಆರಂಭಿಸಿದ್ದ ಕರ್ನಾಟಕ ಮೂಲದ ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹರಾಜ್ ಅವರು ಛತ್ತೀಸ್‍ಗಢದ ಡೊಂಗ್ರಾಘರ್‌ನಲ್ಲಿ ನಿಧನರಾಗಿದ್ದಾರೆ.

ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹರಾಜ್ ಅವರು, 1946ರ ಅಕ್ಟೋಬರ್ 10ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗ ಗ್ರಾಮದಲ್ಲಿ ಜನಿಸಿದ್ದರು. ಇವರು ಛತ್ತೀಸ್‍ಗಢದ ರಾಜನಂದಗಾವ್ ಜಿಲ್ಲೆಯಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರವಾದ ದೊಂಗ್ರಾಘರ್‌ನಲ್ಲಿ ಆಚಾರ್ಯರಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಸಲ್ಲೇಖನ ವ್ರತ ಆಚರಣೆ ಆರಂಭಿಸಿದ ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಈಗಾಗಲೇ ವಯಸ್ಸಾಗಿದ್ದರಿಂದ ದೀರ್ಘವಾದ ಸಲ್ಲೇಖನ ವ್ರತ ಆಚರಣೆ ಸಾಧ್ಯವಾಗದೇ ಫೆ.18ರ ಮುಂಜಾನೆ 2.35ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಡೆಡ್‌ಲೈನ್ ಕೊಟ್ಟ ಬಿಬಿಎಂಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ: ಇತ್ತೀಚೆಗೆ ನಡೆದಿದ್ದ ಛತ್ತೀಸ್‍ಗಢ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಛತ್ತೀಸ್‍ಗಢದ ರಾಜನಂದಗಾವ್ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರವಾದ ಡೊಂಗ್ರಾಘರ್‌ಗೆ ಭೇಟಿ ನೀಡಿ, ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದರು. ಈಗ ಜೈನ ಮುನಿಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಆಚಾರ್ಯ 108 ಶ್ರೀ ವಿದ್ಯಾಸಾಗರ ಮಹಾರಾಜ್ ಜೀ ಅವರ ಭಕ್ತರೊಂದಿಗೆ ನಾವಿದ್ದೇವೆ. ನಮ್ಮ ಸಮಾಜಕ್ಕೆ ಆಧ್ಯಾತ್ಮಿಕ ಸ್ಫೂರ್ತಿ, ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಸಲ್ಲಿಸಿದ ಗಣನೀಯ ಕೊಡುಗೆಗಳಿಗಾಗಿ ಅವರನ್ನು ಮುಂದಿನ ಪೀಳಿಗೆ ಕೂಡಾ ನೆನಪಿಟ್ಟುಕೊಳ್ಳುತ್ತದೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ.

ನರೇಂದ್ರಸ್ವಾಮಿಯನ್ನ ಮಂತ್ರಿ ಮಾಡಿ ಎಂದ ಜನತೆ, ಸೀಟು ಖಾಲಿಯಿಲ್ಲ ಕೂತ್ಕೊಳ್ಳಿ ಎಂದ ಸಿಎಂ ಸಿದ್ದರಾಮಯ್ಯ

ಇನ್ನು ಕರ್ನಾಟಕದಲ್ಲಿ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಪವಿತ್ರ ಸಲ್ಲೇಖನ ವ್ರತದ ಮೂಲಕ ಇಹಲೋಕ ತ್ಯಜಿಸಿದ ಜೈನ ಧರ್ಮದ ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಜೀ ಮಹಾರಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಇವರು ಆಧ್ಯಾತ್ಮಿಕತೆ, ಬಡತನ ನಿವಾರಣೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ ಎಂದು ಬಣ್ಣಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by B Y Raghavendra (@byrbjp)

Follow Us:
Download App:
  • android
  • ios