ಅಯೋಧ್ಯೆ(ಜೂ.04)  ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದರೆ ರಾಮಮಂದಿರ ಯಾವ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ?

ವಿಶ್ವ ಹಿಂದೂ ಪರಿಷತ್ ಈ ಹಿಂದೆ ನೀಡಿದ್ದ ಮಾದರಿಯಂತೆ ರಾಮಮಂದಿರ ನಿರ್ಮಾಣವಾಗಲಿದೆ.  ವಿಶ್ವ ಹಿಂದೂ ಪರಿಷತ್ ಮಾದರಿಯನ್ನು ಇಡೀ ರಾಷ್ಟ್ರವೇ ಒಪ್ಪಿಕೊಂಡಿದೆ. ಇದಕ್ಕೆ ಜನರು ಹಣವನ್ನು ನೀಡಿದ್ದರು ಎಂದು  ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ. 

ವು ಈ ಸಂದರ್ಭದಲ್ಲಿ ಯೋಜನೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಈಗಾಗಲೇ ಕಲ್ಲಿನ ಕೆತ್ತನೆಗಳು ಪೂರ್ಣಗೊಂಡಿವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.  ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ್ ಗೋಪಾಲ್  ದಾಸ್ ಅವರ ಜನ್ಮದಿನಕ್ಕೆ ಸಂಬಂಧಿಸಿ ಸಾವಿರಾರು ಸಂತರು ಅಯೋಧ್ಯೆಗೆ ಆಗಮಿಸಿದ್ದಾರೆ. 

ಮೋದಿ ಒಂದು ವರ್ಷ ಮತ್ತು ರಾಮಂದಿರ ಸ್ಥಾಪನೆ

ನಾವು ರಾಮಮಂದಿರದ ಮೊದಲ ಹಂತವನ್ನು ಯೋಗಿ ಸರ್ಕಾರ ಇರುವಾಗಲೇ ಮಾಡಿ ಮುಗಿಸಲಿದ್ದೇವೆ.  ಬೇರೆ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ರಾಮಮಂದಿರ ವಿಚಾರದಲ್ಲಿ ಮಾತನಾಡುತ್ತಿರುವ ಪಾಕಿಸ್ತಾನದ ಕಿವಿಯನ್ನು ಕೇಂದ್ರ ಸರ್ಕಾರ ಹಿಂಡಬೇಕಿದೆ. ಪಾಕ್ ಕುತಂತ್ರಿ ಬುದ್ಧಿ ತೋರಿಸಿದರೆ ಇಸ್ಲಾಮಾಬಾದ್ ನಲ್ಲಿಯೂ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಸಾಧುಗಳು ಎಚ್ಚರಿಸಿದ್ದಾರೆ. ರಾಮ್ ಲಲ್ಲಾ ಮೂರ್ತಿ ಸ್ಥಳಾಂತರ ಮಾಡಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.