Asianet Suvarna News Asianet Suvarna News

ಅಯೋಧ್ಯೆಯ ಭವ್ಯ ರಾಮ ಮಂದಿರಕ್ಕಿಂದು ಅಡಿಪಾಯ!

ರಾಮಮಂದಿರಕ್ಕೆ ಇಂದು ಗುದ್ದಲಿ ಪೂಜೆ| ಅಯೋಧ್ಯೆಯಲ್ಲಿ ಬೆಳಗ್ಗೆ 8ರಿಂದಲೇ ಕಾರ್ಯಕ್ರಮ| 2022ರೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣ?

Ram temple construction in Ayodhya to begin on Wednesday
Author
Bangalore, First Published Jun 10, 2020, 8:05 AM IST

ಅಯೋಧ್ಯೆ(ಜೂ.10):  ‘ಮರ್ಯಾದಾ ಪುರುಷೋತ್ತಮ’ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ.

ಲಂಕೆಯ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಶಿವನಿಗೆ ಶ್ರೀರಾಮಚಂದ್ರ ರುದ್ರಾಭಿಷೇಕ ಮಾಡಿದ್ದ. ಅದರಂತೆ ರಾಮಜನ್ಮಭೂಮಿಯಲ್ಲಿರುವ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ. ನಂತರ ತಳಪಾಯಕ್ಕೆ ಇಟ್ಟಿಗೆ ಇಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

ರುದ್ರಾಭಿಷೇಕ, ಗುದ್ದಲಿಪೂಜೆ: ಬುಧವಾರದಿಂದ ರಾಮಮಂದಿರ ನಿರ್ಮಾಣ ಶುರು!

ಎರಡು ಅಂತಸ್ತಿನ ದೇಗುಲವನ್ನು ನಿರ್ಮಿಸುವ ಯೋಜನೆ ಇದೆ. 2022ಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಮೊದಲ ಅಂತಸ್ತನ್ನಾದರೂ ಪೂರ್ಣಗೊಳಿಸಬೇಕು ಎಂದು ಸಾಧು-ಸಂತರು ಬೇಡಿಕೆ ಇಟ್ಟಿದ್ದಾರೆ.

ಕನಸು ಸಾಕಾರ

ಅಯೋಧ್ಯೆ ರಾಮಜನ್ಮಭೂಮಿ ವಿವಾದ ದೇಶ ಕಂಡ ಅತ್ಯಂತ ಸುದೀರ್ಘ ಕಾನೂನು ಸಮರ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾಗುವುದರೊಂದಿಗೆ ರಾಮಮಂದಿರ ನಿರ್ಮಾಣ ವಿವಾದ ಜಗತ್ತಿನ ಗಮನಸೆಳೆಯಿತು. ರಾಮಮಂದಿರದ ಜಾಗಕ್ಕಾಗಿ ಹಿಂದು ಹಾಗೂ ಮುಸ್ಲಿಂ ಕಕ್ಷಿದಾರರ ನಡುವೆ ಬಹುದೊಡ್ಡ ಕಾನೂನು ಹೋರಾಟವೇ ನಡೆಯಿತು. ವಿವಾದಿತ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟು ಸುಪ್ರೀಂಕೋರ್ಟ್‌ 2019ರ ನ.9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಮುಸ್ಲಿಂ ಕಕ್ಷಿದಾರರಿಗೆ ಮಸೀದಿ ನಿರ್ಮಾಣ ಮಾಡಲು 5 ಎಕರೆ ನೀಡಲು ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರ ಮಂದಿ ನಿರ್ಮಾಣಕ್ಕೆ ಸಮಿತಿ ರಚಿಸಿತ್ತು.

ಹೇಗಿರಲಿದೆ ದೇಗುಲ?

67.7 ಎಕರೆ ಜಾಗದ ಮಧ್ಯೆ ರಾಮಮಂದಿರ ನಿರ್ಮಾಣವಾಗಲಿದೆ. ಒಂದು ಎಕರೆಯಷ್ಟುವಿಶಾಲ ಪ್ರದೇಶದಲ್ಲಿ ದೇಗುಲ ನಿರ್ಮಿಸುವ ಯೋಜನೆ ಇದೆ. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ ದೇಗುಲ ಎರಡು ಅಂತಸ್ತಿನ ದೇಗುಲ ಇದಾಗಿರಲಿದೆ. ಮೊದಲ ಮಹಡಿಯಲ್ಲಿ 106 ಕಂಬ ಹಾಗೂ ಎರಡನೇ ಮಹಡಿಯಲ್ಲಿ 106 ಕಂಬಗಳು ಇರಲಿವೆ. ಈ ಪೈಕಿ ಮೊದಲ ಮಹಡಿಯ ಕಂಬಗಳು ಪೂರ್ಣ ಸಿದ್ಧವಾಗಿದ್ದರೆ, ಎರಡನೆ ಮಹಡಿಯ ಅರ್ಧದಷ್ಟುಕಂಬಗಳು ತಯಾರಾಗಿವೆ. ಪ್ರತಿ ಕಂಬದ ಮೇಲೂ ದೇವರ 106 ಚಿತ್ರಗಳು ಇರಲಿವೆ. ಒಂದು ಕಂಬ ತಯಾರಿಸಲು ಒಂದು ವರ್ಷ ಹಿಡಿದಿದೆ. ಅಯೋಧ್ಯೆ ರಾಮಮಂದಿರಕ್ಕೆ ತೆರಳಲು 2 ಎಕರೆ ಜಾಗದಲ್ಲಿ ಕಾರಿಡಾರ್‌ ನಿರ್ಮಿಸಲಾಗುತ್ತದೆ. ಉಳಿದ ಜಾಗದಲ್ಲಿ ಭಜನಾ ಕೇಂದ್ರ, ರಂಗಮಂಟಪ, ಭಕ್ತಾದಿಗಳು ತಂಗುವುದಕ್ಕೆ ಧರ್ಮಶಾಲೆ, ಭೋಜನ ಕೋಣೆ ಮತ್ತಿತರ ಸೌಕರ್ಯಗಳು ಇರಲಿವೆ.

ರಾಮಲಲ್ಲಾ ಸ್ಥಳಾಂತರ?

ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ರಾಮಲಲ್ಲಾ ವಿಗ್ರಹವನ್ನು ತಾತ್ಕಾಲಿಕ ಸ್ಥಳಕ್ಕೆ ಮಾಚ್‌ರ್‍ 25ರಂದು ಶಾಸ್ತೊ್ರೕಕ್ತವಾಗಿ ಸ್ಥಳಾಂತರಿಸಲಾಗಿದೆ. ಭೂಮಿ ಸಮತಟ್ಟು ಕೆಲಸವೂ ಪೂರ್ಣಗೊಂಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ದೇಗುಲ ನಿರ್ಮಾಣ ಕೆಲಸಕ್ಕೆ 4.6 ಕೋಟಿ ರು. ದೇಣಿಗೆ ಹರಿದುಬಂದಿದೆ.

ರಾಮಮಂದಿರಕ್ಕೆ ಪಾಕ್‌ ತಕರಾರು: ಭಾರತದ ಭರ್ಜರಿ ತಿರುಗೇಟು

3 ದಶಕ ಮುಂಚೆಯೇ ದೇಗುಲ ವಿನ್ಯಾಸ ಪ್ಲ್ಯಾನ್‌ ಸಿದ್ಧ

ಅಯೋಧ್ಯೆ ರಾಮಮಂದಿರಕ್ಕೆ ವಿಶ್ವ ಹಿಂದು ಪರಿಷತ್‌ ದಶಕಗಳ ಹಿಂದೆ ಸಿದ್ಧಪಡಿಸಿರುವ ‘ನಗರ ಶೈಲಿ’ ಪ್ರಕಾರವೇ ದೇಗುಲ ನಿರ್ಮಿಸಲಾಗುತ್ತದೆ. ಇತ್ತೀಚೆಗೆ ಕೆಲ ಸಂತರು ವಿನ್ಯಾಸ ಬದಲಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಅದಕ್ಕೆ ಮನ್ನಣೆ ಸಿಕ್ಕಿಲ್ಲ. ವಿಶ್ವ ಹಿಂದು ಪರಿಷತ್‌ ವಿನ್ಯಾಸದಲ್ಲಿ ಕೆಲ ಸಣ್ಣಪುಟ್ಟಬದಲಾವಣೆಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios