ರಾಮ ಮಂದಿರಕ್ಕೆ ಹುತಾತ್ಮ ಯೋಧರ ಮನೆಯ ಮಣ್ಣು!

ರಾಮ ಮಂದಿರಕ್ಕೆ ಹುತಾತ್ಮ ಯೋಧರ ಮನೆಯ ಮಣ್ಣು ಸಂಗ್ರಹಿಸಿದ 10ರ ಬಾಲಕ| ಈ ವರೆಗೆ 1600 ಯೋಧರ ಮನೆಗಳಿಗೆ ಭೇಟಿ ನೀಡಿ ಮಣ್ಣು ಸಂಗ್ರಹ

Dev Parashar the 10 year old little soldier who visits martyrs homes to collect soil for ram temple bhoomi pujan

ನವದೆಹಲಿ(ಆ.03): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹುತಾತ್ಮ ಯೋಧರ ಮನೆಯಿಂದ ಸಂಗ್ರಹಿಸಿದ ಮಣ್ಣು ಬಳಕೆ ಆಗಲಿದೆ. ವಿಶೇಷವೆಂದರೆ ಈ ಮಣ್ಣನ್ನು ಸಂಗ್ರಹಿಸಿಕೊಟ್ಟಿರುವುದು 10 ವರ್ಷದ ಬಾಲಕ.

ದೇವ್‌ ಪರಾಶರ್‌ ಎಂಬಾತ ಈ ವರೆಗೆ 1600 ಯೋಧರ ಮನೆಗಳಿಗೆ ಭೇಟಿ ನೀಡಿ ಸಂಗ್ರಹಿಸಿದ ಮಣ್ಣನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾನೆ. ಭೂಮಿ ಪೂಜೆಯ ವೇಳೆ ಹುತಾತ್ಮ ಯೋಧರ ಮನೆಯಿಂದ ಸಂಗ್ರಹಿಸಿದ ಮಣ್ಣನ್ನು ಬಳಕೆ ಮಾಡಲಾಗುತ್ತದೆ ಎಂದು ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಮುಂಬರುವ ದಿನಗಳಲ್ಲಿ 11,000 ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡಿ ಮಣ್ಣು ಸಂಗ್ರಹಿಸಿ ರಾಮ ಮಂದಿರಕ್ಕೆ ಅರ್ಪಿಸುವ ಗುರಿಯನ್ನು ಬಾಲಕ ಹೊಂದಿದ್ದಾನೆ.

Latest Videos
Follow Us:
Download App:
  • android
  • ios