ಅಯೋಧ್ಯೆ(ಡಿ.15): ಸರ್ಕಾರದಿಂದ ಅನುದಾನ ಪಡೆಯದೇ ಜನರಿಂದ ದೇಣಿಗೆ ಪಡೆದು ಸ್ವಂತ ಖರ್ಚಿನಿಂದ ರಾಮಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್‌ಟ್ ನಿರ್ಧರಿ ಸಿದೆ.

ದೇಣಿಗೆ ಸಂಗ್ರಹ ಕಾರ್ಯ ಸಂಕ್ರಮಣದಿಂದ ಶುರುವಾಗಲಿದೆ. ಟ್ರಸ್‌ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೋಮವಾರ ಈ ವಿಷಯ ತಿಳಿಸಿ ದರು. ಟ್ರಸ್‌ಟ್ನಿಂದ ನಿಯೋಜಿತರಾಗಿರುವ ಲಕ್ಷಾಂತರ ಜನರು ದೇಶಾದ್ಯಂತ ಜನರನ್ನು ಸಂಪರ್ಕಿಸಲಿದ್ದಾರೆ.

ಜನರಿಂದ ಯಾವುದೇ ದೇಣಿಗೆ ಬರಲಿ, ಅದನ್ನು ಸಂಗ್ರಹಿಸಿ ಟ್ರಸ್‌ಟ್ಗೆ ಒಪ್ಪಿಸಲಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳಲು 10 ರು., 100 ರು. ಹಾಗೂ 1000 ರು. ಟೋಕನ್ ಹಾಗೂ ರಸೀದಿ ಮುದ್ರಿಸಲಿರುವ ಟ್ರಸ್‌ಟ್ ಅದನ್ನು ದೇಣಿಗೆ ಸಲ್ಲಿಸಿದವರಿಗೆ ನೀಡಲಿದೆ. ಈ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು’

ಎಪ್ಪತ್ತು ಎಕರೆ ಅಲ್ಲ, ರಾಮ ಮಂದಿರ ನಿರ್ಮಾಣ ಪ್ರದೇಶ ವಿಸ್ತರಿಸಲು ಚಿಂತನೆ

ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಸಂಬಂಧ ಹಲವಾರು ಸುತ್ತಿನ ಚರ್ಚೆ, ಮಾತುಕತೆಯ ಬಳಿಕ ಇಡೀ ಕ್ಯಾಂಪಸ್ ಅನ್ನು ಹೊಸದಾಗಿ ವಿಸ್ತರಿಸಲು ಈಗ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಯೋಚಿಸಿದ್ದ ಮಂದಿರದ ಆವರಣವನ್ನು 108 ಎಕರೆ ಪ್ರದೇಶಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.  ಇದಕ್ಕಾಗಿ ದೇಗುಲದ ಆಸುಪಾಸಿನ ಈ ಪ್ರದೇಶದಲ್ಲಿರುವ ಮನೆ, ಜಮೀನನ್ನು ಖರೀದಿಸುವ ಹಾಗೂ ದಾನವಾಗಿ ಪಡೆದುಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಕಮಿಷನರ್, ಡಿಎಂ, ಎಸ್‌ಡಿಎಂ, ಮೇಯರ್, ನಗರ ಆಯುಕ್ತ ಹಾಗೂ ರಾಮ್‌ಕೋಟ ಕ್ಷೇತ್ರದ ಕೌನ್ಸಿಲರ್ ರಮೇಶ್ ದಾಸ್ ತಪಾಸಣೆ ಆರಂಭಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕೋಶಾಧಿಕಾರಿ ಸ್ವಾಮಿ ಗೋವಿಂದ ದೇವ್‌ಗಿರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಾಸ್ತು ಅನ್ವಯ ಪ್ಲಾಟ್‌ ಒಂದು ಸಮತಟ್ಟಾಗಿರಬೇಕು. ಆದರೀಗ ಈ ಪ್ಲಾಟ್ ಹಾಗಿಲ್ಲ., ಹೀಗೆ ಎಲ್ಲಾ ದಿಕ್ಕುಗಳಿಂದ ಇದನ್ನು ಸಮತಟ್ಟು ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ. ದೇವಾಲಯದ ಸರ್ಕ್ಯೂಟ್ ಕೆಲಸ ಮೊದಲ ಹಂತದಲ್ಲಿ ನಡೆಯಲಿದೆ. ಇದರ ಹೊರಗಿನ ಎಪ್ಪತ್ತು ಎಕರೆ ಪ್ರದೇಶದ ಅಭಿವೃದ್ಧಿ ಎರಡನೇ ಹಾಗೂ ಮೂರನೇ ಹಂತದಲ್ಲಿ ನಡೆಡಯಲಿದೆ ಎಂದಿದ್ದಾರೆ.