ಅಯೋಧ್ಯೆ(ಜೂ. 01)   ರಾಮಮಂದಿರ ನಿರ್ಮಾಣ ಕಾರ್ಯ ಯಾವುದೆ ಅಡೆತಡೆ ಇಲ್ಲದೆ ಸಾಗಿದೆ. ದೇವಾಲಯದ ಅಡಿಪಾಯ ನಿರ್ಮಾಣ ಕಾರ್ಯನಡೆಯುತ್ತಿದ್ದು ಅಕ್ಟೋಬರ್  ವೇಳೆಗೆ ಅಂತ್ಯವಾಗಲಿದೆ ಎಂದು ಶ್ರಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿರುವ ಟ್ರಸ್ಟ್ ಇಲ್ಲಿ ಕೆಲಸ ಮಾಡುತ್ತಿರುವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೊರೋನಾ ಎಚ್ಚರಿಕೆ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ರಾಮಮಂದಿರ ಹೇಗಿರಲಿದೆ? ಸಂಪೂರ್ಣ ವಿವರ

ನಾಲ್ಕು ಲೇಯರ್ ಅಡಿಪಾಯ ಹಾಕಲಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿತ್ತಿದೆ.  ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ನಾಗರಿಕರು ದೇಣಿಗೆ ನೀಡಿದ್ದರು.

ದಶಕಗಳ ಕಾಲ ಸುಪ್ರೀಂ ಕೋರ್ಟ್ ನಲ್ಲಿ ರಾಮಜನ್ಮಭೂಮಿ ಜಾಗದ ವಿವಾದ ಇತ್ತು. 2019 ರಲ್ಲಿ ಐತಿಹಾಸಿಕ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ದೇವಾಲಯ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು.

ರಾಮಮಂದಿರ ಮಹಾತೀರ್ಪು