1989ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಕಾಮೇಶ್ವರ್ ಚೌಪಾಲ್ (68) ಶುಕ್ರವಾರ ನಿಧನರಾದರು. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅಯೋಧ್ಯೆ (ಫೆ.8): 1989ರಲ್ಲಿ ಅಯೋಧ್ಯೆಯಲ್ಲಿ ಪ್ರಸಿದ್ಧ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್‌ ನಾಯಕ ಕಾಮೇಶ್ವರ್‌ ಚೌಪಾಲ್‌ (68) ಶುಕ್ರವಾರ ನಿಧನರಾದರು. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಚೌಪಾಲ್‌ ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್‌ ಆಸ್ಪತ್ರೆಗೆ ದಾಖಲಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅವರು ಕೊನೆಯುಸಿರೆಳೆದಿದ್ದಾರೆ.1989ರಲ್ಲಿ ರಾಮಮಂದಿರ ನಿರ್ಮಾಣದ ಉದ್ದೇಶದಿಂದ ಆರಂಭಿಸಿದ್ದ ಕಾಮಗಾರಿಗೆ ಮೊದಲ ಇಟ್ಟಿಗೆಯನ್ನು ಚೌಪಾಲ್‌ ಇಟ್ಟಿದ್ದರು. ಹೀಗಾಗಿ ಅವರನ್ನು ಮೊದಲ ಕರಸೇವಕ ಎಂದು ಆರ್‌ಎಸ್‌ಎಸ್‌ ಗೌರವಿಸಿತ್ತು.ಚೌಪಾಲ್‌ ಅಗಲಿಕೆಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಭು ರಾಮನ ಅನನ್ಯ ಭಕ್ತರಾಗಿದ್ದ ಚೌಪಾಲ್‌ ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ದಲಿತ ಹಿನ್ನೆಲೆಯಿಂದ ಬಂದ ಅವರು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದನ್ನು ಸದಾ ಸ್ಮರಿಸಲಾಗುವುದು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಿಎಂ ಯೋಗಿ ಕೂಡ, ‘ತಮ್ಮ ಸಂಪೂರ್ಣ ಜೀವನವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗಾಗಿ ಚೌಪಾಲ್‌ ಮುಡುಪಾಗಿಟ್ಟಿದ್ದರು’ ಎಂದು ಸಂತಾಪ ಸೂಚಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಮತ್ತು ಬಿಹಾರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕಾಮೇಶ್ವರ್ ಅವರನ್ನು ಸ್ವಲ್ಪ ಸಮಯದವರೆಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ದಲಿತ ಸಮುದಾಯದ ಕಾಮೇಶ್ವರ ಚೌಪಾಲ್ ಅವರು 1989ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದರು.

ಇಂದು ಅವರ ಹುಟ್ಟೂರು ಕಮರೀಲ್‌ನಲ್ಲಿ ಅಂತ್ಯಕ್ರಿಯೆ: ಕಾಮೇಶ್ವರ ಚೌಪಾಲ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ದೆಹಲಿಯಿಂದ ಪಾಟ್ನಾಗೆ ಕೊಂಡೊಯ್ಯಲಾಯಿತು ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಅವರ ಹುಟ್ಟೂರು ಕಮರೀಲ್‌ನಲ್ಲಿ ಅಂತ್ಯಕ್ರಿಯೆ ನಡೆದಿದೆ.

ರಾಮ ಮಂದಿರದ 2,000 ಅಡಿ ಆಳದಲ್ಲಿ ಇಡಲಾಗುತ್ತೆ ಟೈಂ ಕ್ಯಾಪ್ಸೂಲ್!

'ರಾಮನೊಂದಿಗೆ ರೋಟಿ' ಎಂಬ ಘೋಷಣೆಯನ್ನು ನೀಡಿದ ಬಿಹಾರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕಾಮೇಶ್ವರ ಚೌಪಾಲ್, 1989 ರ ನವೆಂಬರ್ 9 ರಂದು ಶ್ರೀ ರಾಮ ದೇವಾಲಯದ ಅಡಿಪಾಯದಲ್ಲಿ ಮೊದಲ ಇಟ್ಟಿಗೆಯನ್ನು ಹಾಕುವ ಮೂಲಕ ದೇಶಾದ್ಯಂತ ಪ್ರಸಿದ್ಧರಾದರು. ಆದರೆ ಮೊದಲ ಇಟ್ಟಿಗೆಯನ್ನು ಹಾಕಿದವರು ತಾವೇ ಎಂದು ಅವರಿಗೆ ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ.

72 ಗಂಟೆಗಳಲ್ಲಿ ಅಯೋಧ್ಯೆ ತಲುಪಿದ 50 ಲಕ್ಷಕ್ಕೂ ಹೆಚ್ಚು ಭಕ್ತರು