ರಾಮಮಂದಿರದಿಂದ ಜಾತ್ಯಾತೀತ ಉತ್ತೇಜನ, ಮುಸ್ಲಿ ಲೀಗ್ ಮಾತಿಗೆ ಇಂಡಿಯಾ ಮೈತ್ರಿಯಲ್ಲಿ ಬಿರುಕು!
ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರ ವಿರುದ್ದ ಹೋರಾಟ ಅವಶ್ಯಕತೆ ಇಲ್ಲ, ರಾಮ ಮಂದಿರ ಜಾತ್ಯಾತೀತಕ್ಕೆ ಉತ್ತೇಜನ ನೀಡಲಿದೆ ಎಂದು ಇಂಡಿಯನ್ ಯೂನಿಯನ್ ಮಸ್ಲಿಂ ಲೀಗ್ ಪಕ್ಷದ ಹೇಳಿಕೆಯಿಂದ ಇದೀಗ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ.
ಮಲಪ್ಪುರಂ(ಫೆ.05) ಆಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿರುವ ರಾಮ ಮಂದಿರದ ವಿರುದ್ಧ ಹೆಜ್ಜೆ ಹೆಜ್ಜೆಗೂ ಹೋರಾಟ ಮಾಡುವ ಅಗತ್ಯವಿಲ್ಲ. ಕಾರಣ ರಾಮ ಮಂದಿರ ಹಾಗೂ ಆಯೋಧ್ಯೆಯಲ್ಲೇ ನಿರ್ಮಾಣವಾಗಲಿರುವ ಮಸೀದಿ ದೇಶದಲ್ಲಿ ಜಾತ್ಯಾತೀತಯೆನ್ನು ಉತ್ತೇಜಿಸಲಿದೆ. ಹಿಂದೂ ಮುಸ್ಲಿಮ್ ಧಾರ್ಮಿಕ ಕೇಂದ್ರಗಳು ದೇಶದಲ್ಲಿ ಸಾಮಾರಸ್ಯ ಮೂಡಿಸಲಿದೆ ಎಂದು ಇಂಡಿಯನ್ ಯೂನಿಯನ್ ಮಸ್ಲಿಂ ಲೀಗ್(IUML) ಅಧ್ಯಕ್ಷ ಪಾನಕ್ಕಾಡ್ ಸಯೈದ್ ಸಾದಿಕ್ ಅಲಿ ಸಾಹೀಬ್ ಹೇಳಿದ್ದಾರೆ. ಆದರೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಕೇರಳದಲ್ಲಿನ ಇಂಡಿಯಾ ಮೈತ್ರಿಯಲ್ಲಿ ಬಿರುಕು ಮೂಡಿದೆ.
ಕೇರಳದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮಸ್ಲಿಂ ಲೀಗ್(IUML) ನೀಡಿದ ಹೇಳಿಕೆಯನ್ನು ಖಂಡಿಸಿದೆ. ಪ್ರಮುಖವಾಗಿ ಕೇರಳದಲ್ಲಿ ಆಡಳಿತದಲ್ಲಿರುವ ಕಮ್ಯೂನಿಸ್ಟ್ ಪಾರ್ಟಿ ತೀವ್ರ ಅಸಮಾಧಾನ ಹೊರಹಾಕಿದೆ. ಈ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದೆ. ಮಲಪ್ಪುರಂನ ಮಂಜೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸೈಯೈದ್ ಸಾದಿಕ್ ಅಲಿ ಸಾಹೀಬ್ ಮಹತ್ವದ ಸಂದೇಶ ರವಾನಿಸಿದ್ದರು.
ರಾಹುಲ್ ಗಾಂಧಿ ವಯನಾಡು ಕ್ಷೇತ್ರ ಕೇಳಿದ ಮುಸ್ಲಿಂ ಲೀಗ್, ಮೈತ್ರಿಯಲ್ಲಿ ಸೀಟು ಹಂಚಿಕೆ ಕಸರತ್ತು!
ದೇಶದಲ್ಲಿ ಸಾಮರಸ್ಯ ಅತೀ ಅವಶ್ಯಕ. ಈ ಹಿಂದೆ ಬಾಬ್ರಿ ಮಸೀದಿಯನ್ನು ಕರಸೇವರು ಧ್ವಂಸಗೊಳಿಸಿದಾಗ ಕೇರಳದಲ್ಲಿ ಹೋರಾಟ, ಪ್ರತಿಭಟನೆಯನ್ನು ನಮ್ಮ ಪಕ್ಷ ಸಂಘಟಿಸಿತ್ತು. ಇದೀಗ ಮತ್ತೆ ಇತಿಹಾಸವನ್ನು ಕೆದಕುವ ಅಗತ್ಯವಿಲ್ಲ. ಮಂದಿರದ ಬೆನ್ನಲ್ಲೇ ಬಾಬ್ರಿ ಮಸೀದಿ ನಿರ್ಮಾಣದ ಕಾರ್ಯಗಳು ನಡೆಯುತ್ತಿದೆ. ಇದೀಗ ಎಲ್ಲರೂ ಸೇರಿ ಮಸೀದಿ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಸೈಯೈದ್ ಸಾದಿಕ್ ಅಲಿ ಸಾಹೀಬ್ ಹೇಳಿದ್ದಾರ.
IUMLಹಾಗೂ ಕಾಂಗ್ರೆಸ್ ಪಕ್ಷ ಈ ಹೇಳಿಕೆಯನ್ನು ಬೆಂಬಲಿಸಿದೆ. ಆದರೆ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ(ಐ) ತೀವ್ರವಾಗಿ ಖಂಡಿಸಿದೆ. ಸಯೈದ್ ಸಾದಿಕ್ ಅಲಿ ಸಾಹೀಬ್ ದೇಶದಲ್ಲಿ ಸೌಹಾರ್ಧಯುತ ವಾತಾವರಣ ನಿರ್ಮಾಣಕ್ಕಾಗಿ ಈ ಮಾತುಗಳನ್ನು ಹೇಳಿದ್ದಾರೆ. ಮಂದಿರ ನಿರ್ಮಾಣವಾಗಿದೆ, ಮಸೀದಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಇದು ಎರಡು ಪ್ರಮುಖ ಧರ್ಮದ ನುಡುವಿನ ಸಾಮರಸ್ಯದ ಕೊಂಡಿಯಾಗೆ ಗುರುತಿಸಿಕೊಳ್ಳಲಿದೆ. ಹೀಗಾಗಿ ಸಯೈದ್ ಸಾದಿಕ್ ಅಲಿ ಸಾಹೀಬ್ ಮಾತಿನಲ್ಲಿ ತಪ್ಪು ಹುಡುಕು ಪ್ರಯತ್ನ ಮಾಡಬೇಡಿ ಎಂದು ಕಾಂಗ್ರೆಸ್ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹೇಳಿದೆ.
'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್ ಜಾಥಾದಲ್ಲಿ ಘೋಷಣೆ!
ಸಿಪಿಎಂ(ಐ) ಹಾಗೂ ಕಮ್ಯೂನಿಸ್ಟ್ ಮಿತ್ರಪಕ್ಷಗಳಾದ ಇಂಡಿಯನ್ ನ್ಯಾಷನಲ್ ಲೀಗ್ ಸೇರಿದಂತೆ ಕೆಲ ಪಕ್ಷಗಳು ರಾಮ ಮಂದಿರ ಜಾತ್ಯಾತೀತೆ ಸಂಕೇತವಾಗಲು ಸಾಧ್ಯವಿಲ್ಲ. ಮಸೀದಿ ಒಡೆದು ಕಟ್ಟಿದ ಮಂದಿರ ಯಾವ ನಿಟ್ಟಿನಲ್ಲಿ ಜಾತ್ಯಾತೀತೆಯಾಗಲಿದೆ. ರಾಮ ಮಂದಿರ ಅನಧಿಕೃತ. ಬಾಬ್ರಿ ಮಸೀದಿಗಾಗಿ ನಾವು ಹೋರಾಟ ಮಾಡಿದ್ದೇವೆ. ಇದೀಗ ಜಾತ್ಯಾತೀತೆ ಪಾಠದ ಅವಶ್ಯಕತೆ ಇಲ್ಲ ಎಂದು ಕಮ್ಯೂನಿಸ್ಟ್ ಹಾಗೂ ಮಿತ್ರಪಕ್ಷಗಳು ಹೇಳಿದೆ.