Asianet Suvarna News Asianet Suvarna News

ಆಯೋಧ್ಯೆಯಿಂದ ಬಂತು ಗುಡ್ ನ್ಯೂಸ್, ರಾಮ ಲಲ್ಲಾ ಪ್ರತಿಷ್ಠಾಪನೆ ದಿನಾಂಕ ಘೋಷಣೆ!

ಸಿಎಂ ಯೋಗಿ ಆದಿತ್ಯನಾಥ್ ಕನ್ನಡಿಗರನ್ನು ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿದ ಬೆನ್ನಲ್ಲೇ ಆಯೋಧ್ಯೆಯಿಂದ ಗುಡ್ ನ್ಯೂಸ್ ಬಂದಿದೆ. ಭವ್ಯ ರಾಮ ಮಂದಿರಲ್ಲಿ ರಾಮ ಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನಾಂಕ ಘೋಷಣೆಯಾಗಿದೆ. 

Ram Lalla Pran Prathistha date announced after CM Yogi adityanath invited Kannadigas for Ayodhya Ram temple inauguration ckm
Author
First Published Apr 28, 2023, 1:32 PM IST | Last Updated Apr 28, 2023, 1:32 PM IST

ಆಯೋಧ್ಯೆ(ನ.28): ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಎರಡನೆ ಮಹಡಿ ಕಾರ್ಯಗಳು, ಕೆತ್ತನೆ ಕುಸುರಿ ಕೆಲಸಗಳು ನಡೆಯುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮ ಮಂದಿ ಉದ್ಘಾಟನೆಗೆ ಕನ್ನಡಿಗರನ್ನು ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನಾಂಕ ನಿಗದಿಪಡಿಸಲಾಗಿದೆ. 2024ರ ಜನವರಿ 22 ರಂದು ಆಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮಂದಿರ ನಿರ್ಮಾಣಮ ಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ. ಇತ್ತ ಶ್ರೀರಾಮಚಂದ್ರ ಹಾಗೂ ಸೀತಾ ಮಾತೆಯ ಮೂರ್ತಿ ಕೆತ್ತನೆ ಕಾರ್ಯವೂ ನಡೆಯುತ್ತಿದೆ. ಈ ಮೂಲಕ ಹಲವು ಶತಮಾನಗಳ ಬಳಿಕ ಮತ್ತೆ ಶ್ರೀರಾಮ ಆಯೋಧ್ಯೆಯಲ್ಲಿ ವಿರಾಜಮಾನರಾಗಲಿದ್ದಾನೆ. 

ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಬಾಲರಾಮ (ರಾಮಲಲ್ಲಾ)ನ ವಿಗ್ರಹ ನಿರ್ಮಿಸಲು ಕರ್ನಾಟಕದ ಕಾರ್ಕಳ ಮತ್ತು ಎಚ್‌.ಡಿ.ಕೋಟೆಯಿಂದ ತರಲಾಗಿರುವ ಕಪ್ಪು ಶಿಲೆಯನ್ನು ಬಳಸಲಾಗುತ್ತಿದೆ. ಜೊತೆಗೆ ನೂತನ ರಾಮನ ವಿಗ್ರಹ ಕೆತ್ತನೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಮಾಡುತ್ತಿದ್ದಾರೆ.  ರಾಮ ಲಲ್ಲಾ ವಿಗ್ರಹ ನಿರ್ಮಾಣಕ್ಕೆ ಈಗಾಗಲೇ ಕರ್ನಾಟಕದ ಕಾರ್ಕಳ ಮತ್ತು ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ಸೇರಿದಂತೆ ದೇಶ- ವಿದೇಶಗಳ ವಿವಿಧ ಭಾಗಗಳಿಂದ ಶಿಲೆಯನ್ನು ಆರಿಸಲಾಗಿತ್ತು. ಈ ಪೈಕಿ ಅಂತಿಮವಾಗಿ ಕಾರ್ಕಳ ಮತ್ತು ಎಚ್‌.ಡಿ.ಕೋಟೆಯ ಶಿಲೆ ಬಳಸಿ ಕೆತ್ತನೆ ಕಾರ್ಯ ನಡೆಯುತ್ತಿದೆ. 

ಹನುಮಾನ್ ಭಕ್ತರ ಆಹ್ವಾನಿಸಲು ಬಂದಿದ್ದೇನೆ, ಶ್ರೀರಾಮಂದಿರ ಉದ್ಘಾಟನೆಗೆ ಕನ್ನಡಿಗರಿಗೆ ಯೋಗಿ ಆಹ್ವಾನ!

ಇದುವರೆಗೂ ಅಯೋಧ್ಯೆಯಲ್ಲಿ ಇದ್ದ ಬಾಲರಾಮನ ವಿಗ್ರಹಕ್ಕಿಂತ ಸಂಪೂರ್ಣ ವಿಭಿನ್ನ ರೀತಿಯ ನೂತನ ವಿಗ್ರಹವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅದರನ್ವಯ, ‘ನೂತನ ರಾಮನ ಮೂರ್ತಿ 5ನೇ ವಯಸ್ಸಿನ ಅವತಾರದಲ್ಲಿ ನಿರ್ಮಾಣವಾಗಲಿದ್ದು, 5 ಅಡಿ ಎತ್ತರವಿರಲಿದೆ. ಕೈಯಲ್ಲಿ ಬಿಲ್ಲು ಮತ್ತು ಬಾಣ ಹಿಡಿದ ಮಾದರಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲು ಸೂಚಿಸಲಾಗಿದೆ ಎಂದು ಟ್ರಸ್ಟ್‌ ಹೇಳಿದೆ.

ಮಂದಿರಕ್ಕೆ ಹಾಸುಗಲ್ಲು ಹಾಕುವ ಕಾರ್ಯ ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಆಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಫ್ಲಾಟ್‌ಫಾರ್ಮ್ ನಿರ್ಮಾಣವಾಗಿದ್ದು, ಕಂಬಗಳು ನಿಂತು, ಗೋಡೆ ಕೂಡಿಸಲಾಗಿದೆ. ಕಮಾನುಗಳನ್ನು ಜೋಡಿಸಲಾಗಿದೆ. ಹಾಸುಗಲ್ಲು ಹಾಕುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ರಾಮಮಂದಿರ ನಿರ್ಮಾಣದ ಟ್ರಸ್ಟಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದ್ದಾರೆ. 

ಹ​ನು​ಮ ದೇಗುಲ ಇದ್ದೆಡೆ ರಾಮಮಂದಿರ ನಿರ್ಮಾಣ: ಯುಪಿ ಸಿಎಂ ಯೋಗಿ

ರಾಮ ಮಂದಿರ ನಿರ್ಮಾಣ ಕುರಿತು ಹಲವು ಟೀಕೆಗಳು ಕೇಳಿಬರುತ್ತಲೆ ಇದೆ. ಪ್ರತಿ ಭಾರಿ ಬಿಜೆಪಿ ನಾಯಕರು ಟೀಕೆಗೆ ತಿರುಗೇ ನೀಡಿದ್ದಾರೆ. ರಾಮ ಮಂದಿರ ಜಾಗದಲ್ಲಿ ಆಸ್ಪತ್ರೆ, ಶಾಲೆ, ಕೈಗಾರಿಕೆ ಸ್ಥಾಪಿಸಬೇಕು ಅನ್ನೋ ಕುಹಕ್ಕೆ ಇತ್ತೀಚೆಗೆ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದರು. ಭಗವಾನ್‌ ಶ್ರೀರಾಮ ದೇಶದ ಅಸ್ಮಿತೆ ಹಾಗೂ ಹೆಗ್ಗುರುತೇ ಹೊರತು ಕೇವಲ ಕಲ್ಲು ಅಥವಾ ಮರದ ಮೂರ್ತಿಯಲ್ಲ’ ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ರಾಮನನ್ನು ಅರ್ಥೈಸಿಕೊಳ್ಳದ, ಅಪ್ಪಿಕೊಳ್ಳದ ಜನರು. ರಾಮ ಕೇವಲ ಕಲ್ಲು, ಮಣ್ಣು, ಮರದ ಮೂರ್ತಿಯಲ್ಲ, ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಕೇಂದ್ರ ಹಾಗೂ ದೇಶದ ಹೆಗ್ಗುರುತು. ಆಸ್ಪತ್ರೆ, ಶಾಲೆ, ಕೈಗಾರಿಕೆಯ ಜೊತೆಗೆ ದೇವಾಲಯವನ್ನೂ ನಿರ್ಮಿಸುತ್ತೇವೆ’ ಎಂದು ಹೇಳಿದರು.
 

Latest Videos
Follow Us:
Download App:
  • android
  • ios