ಅತೀ ದೊಡ್ಡ ತಪ್ಪು ಮಾಡಿದ ಚೀನಾ, ಒಗ್ಗಟ್ಟಾಗಿ ಹೋರಾಡಲು ಸಂಸದ ರಾಜೀವ್ ಚಂದ್ರಶೇಖರ್ ಕರೆ!
ಲಡಾಖ್ ಗಡಿಯಲ್ಲಿ ಭಾರತೀಯ ಯೋಧರ ಜೊತೆ ಕೈಕೈ ಮಿಲಾಯಿಸಿದ ಚೀನಾ, ಪ್ರತಿ ದಿನ ಒಂದಲ್ಲಾ ಒಂದು ತಕರಾರು ತೆಗೆಯುತ್ತಿತ್ತು. ಹಲವು ಸುತ್ತಿನ ಮಾತುಕತೆ ವಿಫಲವಾಗಿತ್ತು. ಇದರ ಬೆನ್ನಲ್ಲೇ ಚೀನಾ ಏಕಾಏಕಿ ದಾಳಿಗೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ಭಾರತೀಯರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಬೆಂಗಳೂರು(ಜೂ.16): ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೆಡೆ ಮಾತುಕತೆ, ಶಾಂತಿ ಮಂತ್ರ ಪಠಿಸುವ ಚೀನಾ, ಹಿಂಭಾಗಿಲ ಮೂಲಕ ನರಿ ಬುದ್ದಿ ತೋರಿಸುತ್ತಿದೆ. ಭಾರತೀಯ ಯೋಧರನ್ನು ತಳ್ಳಿ, ಕೈಕೈ ಮಿಲಾಯಿಸಿದ್ದ ಚೀನಾ ಪಡೆ, ಇದ್ದಕ್ಕಿದ್ದಂತೆ ಗುಂಡಿನ ಮಳೆ ಸುರಿಸಿದೆ. ಚೀನಾ ದಾಳಿಯಿಂದ ಭಾರತೀಯ ಸೇನಾ ಕಮಾಂಡರ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಚೀನಾ ನಡೆಯನ್ನು ಸಂಸದ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಇಷ್ಟೇ ಅಲ್ಲ ಒಗ್ಗಟ್ಟಾಗಿ ಹೋರಾಡಲು ಭಾರತೀಯರಿಗೆ ಕರೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ: ರಾಜೀವ್ ಚಂದ್ರಶೇಖರ್
ಪ್ರತಿಯೊಬ್ಬ ಭಾರತೀಯ ಒಗ್ಗಟ್ಟಾಗಿ, ತಾಳ್ಮೆಯಿಂದ ಇರಬೇಕು. ಭಾರತೀಯ ಸೇನೆ ಮಿಲಿಟರಿ ಶಕ್ತಿ ಮೂಲಕ ಚೀನಾಗೆ ಉತ್ತರ ನೀಡಲಿದೆ. ನಾಗರೀಕರು ಚೀನಾವನ್ನು ಆರ್ಥಿಕವಾಗಿ ಸೋಲಿಸಬೇಕಿದೆ ಎಂದು ರಾಜೀವ್ ಚಂದ್ರಶೇಖರ್ ಟ್ವಿಟರ್ ಮೂಲಕ ಹೇಳಿದ್ದಾರೆ.
ಚೀನಾ ಇತಿಹಾಸದಲ್ಲಿ ಕಾಮ್ರೆಡ್ ಕ್ಸಿ ಜಿನ್‌ಪಿಂಗ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ ಹಾಗೂ ಪೀಪಲ್ ಲಿಬರೇಶನ್ ಆರ್ಮಿ ಮಾಡಿದ ಅತೀ ದೊಡ್ಡ ತಪ್ಪಿದು. ಚೀನಾ ದಾಳಿಗೆ ಮೂವರು ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಚೀನಾ ಹಾಗೂ ಚೀನಾ ಸೇನೆ ಇದೀಗ ಭಾರತ ಹಾಗೂ ಭಾರತೀಯರಿಗೆ ಅಧೀಕೃತ ಶತ್ರು. ಎಲ್ಲಾ ಭಾರತೀಯರು ತಾಳ್ಮೆಯಿಂದ ಹಾಗೂ ಒಗ್ಗಟ್ಟಾಗಿ ಹೋರಾಟಬೇಕು. ಚೀನಾ ಸೇನೆಯ ಉದ್ಧಟತವನ್ನು ಭಾರತ ಮಿಲಿಟರಿ ಶಕ್ತಿ ಹಾಗೂ ಆರ್ಥಿಕತೆ ಮೂಲಕ ಸೋಲಿಸಬೇಕಿದೆ ಎಂದು ರಾಜೀವ್ ಚಂದ್ರಶೇಕರ್ ಕರೆ ನೀಡಿದ್ದಾರೆ.
ಕೇರಳದಂತಹ ಘಟನೆ ಕರ್ನಾಟಕದಲ್ಲಿ ನಡೆಯದಿರಲಿ: ಸಿಂಎಗೆ ಸಂಸದ ರಾಜೀವ್ ಪತ್ರ
ಚೀನಾ ತಕರಾರು
ಚೀನಾ ಜೊತೆ ಗಡಿ ಭಾಗ ಹಂಚಿಕೊಂಡಿರುವ ಲಡಾಖ್ ವಲಯದಲ್ಲಿ ಭಾರತ ರಸ್ತೆ ಕಾಮಗಾರಿ ಆರಂಭಿಸಿತ್ತು. ಭಾರತದ ಭೂ ಪ್ರದೇಶದಲ್ಲಿನ ಕಾಮಗಾರಿ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರತಿ ದಿನ ಭಾರತೀಯ ಯೋಧರ ಜೊತೆ ತಕರಾರು ತೆಗೆದಿತ್ತು. ಹಲವು ಸುತ್ತಿನ ಮಾತುಕತೆ ವಿಫಲವಾಗಿತ್ತು. ಅಂತಿಮವಾಗಿ ಉನ್ನತ ಮಟ್ಟದ ಸಭೆಯಲ್ಲಿ ಚೀನಾ ಶಾಂತಿ ಮಂತ್ರ ಪಠಿಸಿತ್ತು. ಆದರೂ ಗಡಿಯಲ್ಲಿ ಹೆಚ್ಚುವರಿ ಸೇನೆ, ಯುದ್ದ ವಿಮಾನ ನಿಯೋಜಿಸುವ ಮೂಲಕ ತಯಾರಿ ಮಾಡಿಕೊಂಡಿತ್ತು.
"
ಚೀನಾ ದಾಳಿ:
ಪ್ರತಿ ದಿನ ಚೀನಾ ಖ್ಯಾತೆ ತೆಗೆಯುತ್ತಿದ್ದ ಕಾರಣ ಭಾರತೀಯ ಸೇನೆ ಕೂಡ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸುತ್ತಿತ್ತು. ಸೋಮವಾರ(ಜೂ.15) ರಾತ್ರಿ ವೇಳೆ ಚೀನಾ ನೇರವಾಗಿ ಗುಂಡಿನ ಸುರಿಮಳೆಗೈದಿದೆ. ದಿಢೀರ್ ದಾಳಿಯಿಂದ ಭಾರತೀಯ ಸೇನಾ ಕಮಾಂಡರ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ತಕ್ಷಣವೇ ಭಾರತೀಯ ಸೇನೆ ತಿರುಗೇಟು ನೀಡಿದೆ. ಭಾರತದ ದಾಳಿಯಿಂದ ಚೀನಾ ಸೇನೆಯ ಐವರು ಹತ್ಯೆಯಾಗಿದ್ದರೆ, 11 ಸೈನಿಕರು ಗಾಯಗೊಂಡಿದ್ದಾರೆ ಎಂದು ಚೀನಾ ಮಾಧ್ಯಮಗಳು ಹೇಳಿವೆ.