ನವದೆಹಲಿ(ಮಾ.17): ಅತ್ಯಾಚಾರ ಸಂತ್ರಸ್ತೆಯರು, ನಿಷಿದ್ಧ ಸಂಭೋಗದ ಸಂತ್ರಸ್ತೆಯರು, ಅಪ್ರಾಪ್ತೆಯರು, ಅಂಗವಿಕಲರು ಸೇರಿದಂತೆ ‘ವಿಶೇಷ ವರ್ಗದ ಮಹಿಳೆ’ಯರ ಗರ್ಭಪಾತದ ಗರಿಷ್ಠ ಮಿತಿಯನ್ನು 20 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಮಸೂದೆಗೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿದೆ.

‘ಗರ್ಫಪಾತ (ತಿದ್ದುಪಡಿ) ಮಸೂದೆ-2020’ ಮಸೂದೆಯು 1971ರ ಇದೇ ಕಾಯ್ದೆಯ ತಿದ್ದುಪಡಿ ರೂಪವಾಗಿದ್ದು, ಧ್ವನಿಮತದಿಂದ ಅಂಗೀಕಾರಗೊಂಡಿತು. ಕಳೆದ ವರ್ಷವೇ ಲೋಕಸಭೆ ಇದಕ್ಕೆ ಅಂಗೀಕಾರ ನೀಡಿತ್ತು.

ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಕಳಿಸಬೇಕು ಎಂಬ ಹಾಗೂ ಕೆಲವು ತಿದ್ದುಪಡಿ ಮಂಡಿಸಿದ ಕೋರಿಕೆಗಳು ಇದೇ ವೇಳೆ ತಿರಸ್ಕಾರಗೊಂಡವು. ‘ಮಹಿಳೆಯರ ಗೌರವ ಎತ್ತಿ ಹಿಡಿಯಲು ವಿಶ್ವದ ಮಾನದಂಡಕ್ಕೆ ಅನುಗುಣವಾಗಿ ಮಸೂದೆ ರೂಪಿಸಲಾಗಿದೆ. ವಿವಿಧ ವರ್ಗಗಳ ಜತೆ ಚರ್ಚಿಸಿಯೇ ಇದನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಇದೇ ವೇಳೆ ಆರೋಗ್ಯ ಸಚಿವ ಡಾ| ಹರ್ಷವರ್ಧನ ಹೇಳಿದರು.