ಹೈದರಾಬಾದ್/ ಬೆಂಗಳೂರು(ಏ. 28) ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್  ಪೊಲೀಸ್ ಅಧೀಕಾರಿಕ ಚೇತರಿಕೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ದೇಶದ ಒಗ್ಗಟ್ಟು ಸಾರುವ ಮಾತುಗಳನ್ನಾಡಿದ್ದಾರೆ. 

ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳು ಹರ್ಜಿತ್ ಸಿಂಗ್ ಅವರಿಗೆ ಸೆಲ್ಯೂಟ್ ನೀಡಿದ್ದರು. ನಾನು ಹರ್ಜಿತ್ ಸಿಂಗ್‌ ಅಭಿಯಾನ ಆರಂಭಿಸಿ ಗೌರವ ಸಲ್ಲಿಸಿದ್ದರು.

2000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹರ್ಜಿತ್  ಸಿಂಗ್ ಹೆಸರು ಬರೆದು ಭಿತ್ತಿಪತ್ರದ ಮೂಲಕ ವಂದನೆ ಸಲ್ಲಿಸಿದ್ದರು.  ಹರ್ಜಿತ್ ಸಿಂಗ್ ನಮೆಗಲ್ಲ ಒಂದು ಸ್ಫೂರ್ತಿ. ಅವರ ಹೋರಾಟವನ್ನು ಮರೆಯಲು ಸಾಧ್ಯವೇ ಇಲ್ಲ. ಪೊಲೀಸ್ ಅಧಿಕಾರಿಯಾಗಿರುವುದು ನಮಗೆಲ್ಲ ಹೆಮ್ಮೆ ತರುವ ಸಂಗತಿ. ಜನರ ಸುರಕ್ಷತೆ ಮತ್ತು ಹಿತ ಕಾಯುವುದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಡಿಜಿಪಿ  ದಾಮೋದರ್ ಗೌತಮ್ ಸಾವಾಂಗ್ ಹೇಳುತ್ತಾರೆ.

ಲಾಕ್‌ಡೌನ್ ವೇಳೆ ಪೊಲೀಸ್‌ಗೆ ಮಚ್ಚಿನಿಂದ ಹಲ್ಲೆ, ಸತತ 7 ಗಂಟೆ ಸರ್ಜರಿಯಲ್ಲಿ ತುಂಡಾದ ಕೈ ಮರುಜೋಡಣೆ !...

ವೀರತ್ವ ಪ್ರದರ್ಶನ ಮಾಡಿದ ಸಿಂಗ್ ಅವರಿಗೆ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ  ನೀಡಿಲಾಗಿದೆ.  ದುಷ್ಕರ್ಮಿಗಳು ಏಪ್ರಿಲ್ 12 ರಂದು ಸಿಂಗ್ ಅವರ ಮೇಲೆ ದಾಳಿ ಮಾಡಿದ್ದರು.  ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು  ಸಿಂಗ್  ಕೈ ಕತ್ತರಿಸಿತ್ತು. ಅಧಿಕಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಕೈಯನ್ನು ಜೋಡಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದನು. ತಕ್ಷಣ ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಏಳೂವರೆ ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದ ಪೊಲೀಸ್ ಅಧಿಕಾರಿಯ ಕೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್  ತಿಳಿಸಿದ್ದರು.

ಪಂಜಾಬ್  ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು.

ಇಂಗ್ಲಿಷ್ ನಲ್ಲಿಯೂ ಓದಿ