ಕೊರೋನಾಗೆ ರಾಜ್ಯಸಭಾ MP ರಘುನಾಥ್ ಮೊಹಪತ್ರ ನಿಧನ; ಪ್ರಧಾನಿ ಮೋದಿ ಸಂತಾಪ!
- ಕೊರೋನಾಗೆ ಮತ್ತೊಬ್ಬ ನಾಯಕ ಬಲಿ
- ರಾಜ್ಯಸಭಾ ಎಂಪಿ ರಘುನಾಥ್ ಮೊಹಪತ್ರ ನಿಧನ
- ಪ್ರಧಾನಿ ನರೇಂದ್ರ ಮೋದಿ ಸಂತಾಪ
ನವದೆಹಲಿ(ಮೇ.09): ಕೊರೋನಾ ವೈರಸ್ ದೇಶದಲ್ಲಿ ಹಲವು ಜೀವನಗಳನ್ನು ಬಲಿತೆಗೆದುಕೊಳ್ಳುತ್ತಿದೆ. ಇದೀಗ ರಾಜ್ಯಸಭಾ ಎಂಪಿ, ಪದ್ಮಭೂಷಣ ಪ್ರಶಸ್ತಿ ವಿಜೇತ ರಘುನಾಥ್ ಮೊಹಪತ್ರ ಕೊರೋನಾಗೆ ಬಲಿಯಾಗಿದ್ದಾರೆ. ಎಪ್ರಿಲ್ 22 ರಂದು ಕೊರೋನಾ ಕಾರಣ ಭುವನೇಶ್ವರ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಕರ್ನಾಟಕದ ಮಾಜಿ ಸಚಿವ ಕೊರೋನಾಗೆ ಬಲಿ, ಬಿಎಸ್‌ವೈ ಸಂತಾಪ...
78 ವರ್ಷದ ರಘುನಾಥ್ ಮೊಹಪತ್ರ ಕಳೆದ 17 ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುಘನಾಥ್, ಸೋಂಕು ತೀವ್ರವಾದ ಕಾರಣ ನಿಧನರಾಗಿದ್ದಾರೆ. ರುಘುನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಸಂಸದ ರಘುನಾಥ್ ಮೊಹಪಾತ್ರಜಿ ಅವರ ನಿಧನದಿಂದ ತೀವ್ರ ಬೇಸರತಂದಿದೆ. ರಘುನಾಥ್ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಮೂಲಕ ಜಗತ್ತಿಗೆ ಅನನ್ಯ ಕೊಡುಗೆಗಳನ್ನು ನೀಡಿದರು. ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸಲು ಅವರು ನೀಡಿದ ಕೊಡುಗೆ ಅಪಾರ. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಚೇತರಿಕೆಯಲ್ಲಿದ್ದ ಮೊಹಪಾತ್ರ ಆರೋಗ್ಯ ದಿಢೀರ್ ಕ್ಷೀಣಿಸಿತ್ತು. ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಘುನಾಥ್ ನಿಧನರಾಗಿದ್ದಾರೆ ಎಂದು ಭವನೇಶ್ವರ್ ನಿರ್ದೇಶಕ ಡಾ.ಗೀತಾಂಜಲಿ ಬಟ್ಮನಬಾನೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಲೆ ವಾಸ್ತುಶಿಲ್ಪದ ಅಪಾರ ಕೊಡುಗೆ ಪರಿಗಣಿಸಿ ಭಾರತ ಸರ್ಕಾರ 2001ರಲ್ಲಿ ಪದ್ಮಭೂಷಣ ಹಾಗೂ 2013ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು 1876ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 1964ರಲ್ಲಿ ರಾಷ್ಟ್ರೀಯ ಶಿಲ್ಪ ಕಲೆ ಪ್ರಶಸ್ತಿ ಪಡೆದಿದ್ದಾರೆ.