ರಾಜ್ಯಸಭಾ MP ಮೋಹಪಾತ್ರ ನಿಧನದ ಬೆನ್ನಲ್ಲೇ ಪುತ್ರರಿಬ್ಬರು ಕೊರೋನಾಗೆ ಬಲಿ!

  • ಕೊರೋನಾ ಭೀಕರತೆ ನಲುಗಿದ ರಘುನಾಥ್ ಮೋಹಪಾತ್ರ ಕುಟುಂಬ
  • 10 ದಿನದಲ್ಲಿ ತಂದೆ, ಮಕ್ಕಳಿಬ್ಬರೂ ಕೊರೋನಾಗೆ ಬಲಿ
  • ಶೋಕಸಾಗರದಲ್ಲಿ ಮೋಹಪತ್ರ ಕುಟುಂಬ
Rajya Sabha MP late Raghunath Mohapatra Two sons succumb to coronavirus after father ckm

ಒಡಿಶಾ(ಮೇ.20):  ಕೊರೋನಾ ವೈರಸ್ ಕೆಲವು ಕುಟುಂಬದ ಮೇಲೆ ನಡೆಸಿದ ಭೀಕರ ಪ್ರಹಾರ ಊಹಿಸಲೂ ಸಾಧ್ಯವಿಲ್ಲ. ಇದರಲ್ಲಿ ರಾಜ್ಯಸಭಾ MP, ಶಿಲ್ವಿ ರಘುನಾಥ್ ಮೋಹಪತ್ರ ಕುಟುಂಬ ಸೇರಿದೆ. ಮೇ.09 ರಂದು ರಘುನಾಥ್ ಮೋಹಪಾತ್ರ(72) ಕೊರೋನಾ ವೈರಸ್‌ಗೆ ಬಲಿಯಾಗಿದ್ದರು. ಇದಾದ 10 ದಿನದಲ್ಲಿ ರಘುನಾಥ್ ಇಬ್ಬರು ಪುತ್ರರೂ ಕೊರೋನಾಗೆ ಬಲಿಯಾಗಿದ್ದಾರೆ.

ಕೊರೋನಾಗೆ ರಾಜ್ಯಸಭಾ MP ರಘುನಾಥ್ ಮೊಹಪತ್ರ ನಿಧನ; ಪ್ರಧಾನಿ ಮೋದಿ ಸಂತಾಪ!

ಕೊರೋನಾ ವೈರಸ್ ಕಾರಣ ರಾಜ್ಯಸಭಾ ಎಂಪಿ, ಪದ್ಮಭೂಷಣ ಪ್ರಶಸ್ತಿ ವಿಜೇಯ ಶಿಲ್ಪಿ ರಘುನಾಥ್ ಮೋಹಪಾತ್ರ 17 ದಿನಗಳ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗೆ ನಿಧನರಾಗಿದ್ದರು. ಈ ನೋವಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮೋಹಪಾತ್ರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ರುಘನಾಥ್ ಮೋಹಪಾತ್ರ ಪುತ್ರ, ಒಡಿಶಾ ರಣಜಿ ತಂಡ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೊರೋನಾಗೆ ಬಲಿಯಾಗಿದ್ದಾರೆ.

ಕೊರೋನಾಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಲಿ: ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಬದುಕು ಕೊನೆ.

ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿ ಪ್ರಶಾಂತ್ ಮೇ.19ರಂದು ನಿಧನರಾಗಿದ್ದಾರೆ. ಇಂದು(ಮೇ.20) ರಘುನಾಥ್ ಮೋಹಪಾತ್ರ ಅವರ ಕಿರಿಯ ಪುತ್ರ ಜಶೋಬಾಂತ್ ಮೋಹಪಾತ್ರ ಕೊರೋನಾಗೆ ಬಲಿಯಾಗಿದ್ದಾರೆ. ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಶಿಲ್ಪಿ ಜಶೋಬಾಂತ್ ಮೋಹಪಾತ್ರ ಅವರನ್ನು ಬುವನೇಶ್ವರ ಏಮ್ಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ SUM ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಕೇವಲ 10 ದಿನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಶಿಲ್ಪಕಾರ ಕುಟುಂಬ ಕೊರೋನಾಗೆ ಬಲಿಯಾಗಿದೆ.

Latest Videos
Follow Us:
Download App:
  • android
  • ios