ರಾಜ್ಯಸಭಾ ಸದಸ್ಯರು ತಮ್ಮ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಮಾರ್ಟ್ ಟಿವಿ, ಸ್ಮಾರ್ಟ್ ಪ್ರಾಜೆಕ್ಟರ್ ಸೇರಿದಂತೆ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ನವದೆಹಲಿ (ಮೇ.31): ರಾಜ್ಯಸಭಾ ಸದಸ್ಯರು ತಮ್ಮ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಮಾರ್ಟ್ ಟಿವಿ, ಸ್ಮಾರ್ಟ್ ಪ್ರಾಜೆಕ್ಟರ್ ಸೇರಿದಂತೆ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಸಭಾ ಸದಸ್ಯರು ಈಗಾಗಲೇ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಪೆನ್ ಡ್ರೈವ್, ಪ್ರಿಂಟರ್, ಸ್ಕ್ಯಾನರ್, ಯುಪಿಎಸ್ ಮತ್ತು ಸ್ಮಾರ್ಟ್ ಫೋನ್‌ನಂತಹ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನು ಮುಂದೆ ಆಂಟಿ-ವೈರಸ್ ಸಾಫ್ಟ್‌ವೇಸ್‌ ಸ್ಪೀಕರ್‌ಗಳು, ಹೆಡ್‌ಫೋನ್, ಮೈಕ್ರೋಫೋನ್, ವೆಬ್‌ಕ್ಯಾಮ್, ಬ್ಲೂಟೂತ್ ಹೆಡ್‌ಸೆಟ್/ಏರ್‌ಪಾಡ್‌ಗಳು ಕೂಡ ಸಿಗಲಿವೆ.

ರಾಜ್ಯಸಭಾ ಸದಸ್ಯರ ಕಂಪ್ಯೂಟರ್ ಉಪಕರಣಗಳ ಆರ್ಥಿಕ ಅರ್ಹತೆಯ ಯೋಜನೆಯ ಅಡಿಯಲ್ಲಿ ಮೇ 23ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಗ್ಯಾಜೆಟ್‌ಗಳ ಖರೀದಿಗಾಗಿ ಸದಸ್ಯರಿಗೆ ಹಣಕಾಸಿನ ನೆರವು ಸಿಗಲಿದೆ. ಖರೀದಿಯ ಬಳಿಕ ರಸೀದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.3 ವರ್ಷಕ್ಕೂ ಅಧಿಕ ಅವಧಿಗೆ ರಾಜ್ಯಸಭಾ ಸದಸ್ಯರಾಗುವವರಿಗೆ 2 ಲಕ್ಷ ರು., ಉಪಚುನಾವಣೆ ಮೂಲಕ ಗೆದ್ದವರಿಗೆ 1.5 ಲಕ್ಷ ರು., ಲಭಿಸಲಿದೆ. 3 ವರ್ಷದ ಅವಧಿ ಮುಗಿದ ಬಳಿಕ ಹಾಗೂ ಕನಿಷ್ಠ 6 ತಿಂಗಳ ಅವಧಿ ಉಳಿದಿರುವ ಸದಸ್ಯರಿಗೆ ಹೆಚ್ಚುವರಿ 1 ಲಕ್ಷ ರು. ನೀಡಲು ತೀರ್ಮಾನಿಸಲಾಗಿದೆ.