ನವದೆಹಲಿ(ಸೆ.20): ಕೃಷಿ ಮಸೂದೆ ಮಂಡನೆ ವೇಳೆ ರಾಜ್ಯಸಭೆಯಲ್ಲಿ ವಿಪಕ್ಷಗಳು ತೋರಿದ ನಡೆ ಅಮಾನವೀಯ. ರೈತರಲ್ಲಿ ಗೊಂದಲ ಸೃಷ್ಟಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿದೆ. ಇಂತಹ ನಡವಳಿಕೆಯನ್ನು ಖಂಡಿಸುವುದಾಗಿ ರಕ್ಷಣಾ ಸಚಿವವ ರಾಜನಾಥ್ ಸಿಂಗ್ ಹೇಳಿದ್ದಾರೆ.  ದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜನಾಥ್ ಸಿಂಗ್ ವಿರೋಧ ಪಕ್ಷಗಳ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೃಷಿ ಮಸೂದೆ ಕೋಲಾಹಲ; ವಿಪಕ್ಷ ಸಂಸದರ ವರ್ತನೆಗೆ ರಾಜೀವ್ ಚಂದ್ರಶೇಖರ್ ಆಕ್ರೋಶ

ಕೃಷಿ ಮಸೂದೆಗಳನ್ನು ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ  ನಡೆಸಿದ ದಾಳಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಈ ನಾಟಕದ ಮೂಲಕ ರೈತರನ್ನು ಗೊಂದಲಗೊಳಿಸುವ ಪ್ರಯತ್ನ ಮಾಡುತ್ತಿದೆ  ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಾನೋರ್ವ ರೈತ. ರೈತರ ಸಂಕಷ್ಟ ನಿವಾರಿಸಲು ಕೃಷಿ ಮಸೂದೆ ಮಂಡಿಸಲಾಗಿದೆ. ಹೀಗಿರುವಾಗ ರೈತರಿ ನೋವು ತರುವ ಯಾವ ಮಸೂದೆಗಳನ್ನು ಸರ್ಕಾರ ಮಂಡಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

 

ರಾಜ್ಯಸಭೆಯಲ್ಲಿ ರೂಲ್ ಬುಕ್ ಹರಿದು ಸಂಸದರ ಕೋಲಾಹಲ!

ಸುದ್ದಿಗೋಷ್ಠಿಯಲ್ಲಿ ರಾಜನಾಥ್ ಸಿಂಗ್ ಜೊತೆ ಪ್ರಕಾಶ್ ಜಾವೇಡ್ಕರ್, ಪಿಯೂಷ್ ಗೋಯೆಲ್, ಥವರ್ ಚಂದ್ ಗೆಹ್ಲೋಟ್ , ಮುಕ್ತಾರ್ ಅಬ್ಬಾಸ್ ನಖ್ವಿ ಹಾಗೂ ಪ್ರಹ್ಲಾದ್ ಜೋಶಿ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿ ಕೃಷಿ ಮಸೂದೆ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ರೈತರ ಸಬಲೀಕರಣ ಮತ್ತು ಸಂರಕ್ಷಣೆ, ರೈತರ ವ್ಯಾಪರ ಮತ್ತು ವಾಣಿಜ್ಯ ಕುರಿತು ಕೃಷಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ್ದರು. ಈ ವೇಳೆ ಕೇಂದ್ರ ಸರ್ಕಾರದ 2 ಪ್ರಮುಖ ಮಸೂದೆಗಳನ್ನು ಪ್ರತಿ ಪಕ್ಷ ತೀವ್ರವಾಗಿ ವಿರೋಧಿಸಿತು. ಇಷ್ಟೇ ಅಲ್ಲ ಹೆಚ್ಚಿನ ಚರ್ಚೆಗಾಗಿ ಮಸೂದೆಯನ್ನು ಆಯ್ಕೆ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿತ್ತು.

ಪ್ರತಿಭಟನೆ, ಪ್ರತಿಪಕ್ಷಗಳ ಆಕ್ರೋಶದ ನಡುವೆ ಉಪಸಭಾಪತಿ ಹರಿವಂಶ್ ಧ್ವನಿ ಮಸೂದೆ ಮೂಲಕ ಮಸೂದೆ ಅಂಗೀಕರಿಸಲು ಸೂಚಿಸಿದ್ದರು. ಈ ವೇಳ ಆಕ್ರೋಶಗೊಂಡ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಡರೆಕ್ ಒಬ್ರಿಯನ್ ಉಪಸಭಾಪತಿ ಕುಳಿದ್ದಲ್ಲಿಗೆ ಆಗಮಿಸಿ ರೂಲ್ ಪುಸ್ತಕ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇಷ್ಟೇ ಅಲ್ಲ ವಿರೋಧ ಕೂಡ ವ್ಯಕ್ತವಾಗಿತ್ತು.

ಈ ಘಟನೆ ಕುರಿತು ಇದೀಗ ರಾಜನಾಥ್ ಸಿಂಗ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ಘಟನೆ ಅಮಾನವೀಯ ಹಾಗೂ ನಾಚಿಕೆಗೇಡು  ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.