ಚೆನ್ನೈ (ಫೆ.21): ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಟ ರಜನೀಕಾಂತ್‌ ಅವರು ಶನಿವಾರ ನಟ ಹಾಗೂ ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್‌ ಹಾಸನ್‌ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ. ಇದು ಕಮಲ್‌ ಅವರಿಗೆ ರಜನಿ ಬೆಂಬಲ ನೀಡಬಹುದು ಎಂಬ ಗುಸುಗುಸು ಏಳಲು ಕಾರಣವಾಗಿದೆ.

ರಜನೀಕಾಂತ್‌ ಈ ಹಿಂದೆ ರಾಜಕೀಯಕ್ಕೆ ಧುಮುಕುವುದಾಗಿ ಹೇಳಿದ್ದರೂ, ಕಳೆದ ತಿಂಗಳು ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದರು. ರಾಜಕೀಯಕ್ಕೆ ಬರುವುದಿಲ್ಲ ಎಂಬ ಘೋಷಣೆ ಮಾಡಿದ್ದರು. ಆದರೂ ರಜನಿ ಅವರು ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ರಜನಿ ರಾಜಕೀಯ ಮತ್ತೆ ಸಸ್ಪೆನ್ಸ್‌: ಭಾರೀ ಸಂಚಲನ ಮೂಡಿಸಿದೆ ಆಪ್ತನ ಹೇಳಿಕೆ! ..

ಇದರ ನಡುವೆ, ಕಮಲ್‌ ಹಾಗೂ ರಜನಿ ಶನಿವಾರ ಭೇಟಿ ಮಾಡಿ 30 ನಿಮಿಷ ಮಾತುಕತೆ ನಡೆಸಿದ್ದಾರೆ. ಭಾನುವಾರ ಕಮಲ್‌ ಅವರು ಅಧಿಕೃತ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ. ಈ ಕಾರಣದಿಂದ ರಜನಿ ಆಶೀರ್ವಾದ ಪಡೆಯಲು ಹೋಗುವೆ ಎಂದು ಈ ಹಿಂದೆಯೇ ಕಮಲ್‌ ಹೇಳಿದ್ದರು.