ಮಹಾತ್ಮಾ ಗಾಂಧಿ ಕಾಂಗ್ರೆಸ್‌ಗೂ ರಾಹುಲ್ ಕಾಂಗ್ರೆಸ್‌ಗಿರುವ ವ್ಯತ್ಯಾಸ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್!

ಈಗಿನ ರಾಹುಲ್ ಕಾಂಗ್ರೆಸ್ ಪಕ್ಷದ ನಿರ್ಧಾರ, ಅಭಿಪ್ರಾಯ, ಹೇಳಿಕೆ ನೋಡಿದರೆ ಮಹಾತ್ಮಾ ಗಾಂಧಿ ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಎಕೆ ವಿಸರ್ಜಿಸಬೇಕು ಅನ್ನೋದು ಸ್ಪಷ್ಟವಾಗುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Rajeev chandrasekhar slams congress over Divisive politics and crooked Dynasties ckm

ನವದೆಹಲಿ(ಡಿ.26) ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಈಗನ ರಾಹುಲ್ ಕಾಂಗ್ರೆಸ್ ಪಕ್ಷವನ್ನು ತಿವಿದಿದ್ದಾರೆ. ರಾಹುಲ್ ಕಾಂಗ್ರೆಸ್ ಪಕ್ಷದ ನಿರ್ಧಾರ ಈಗ ಅಚ್ಚರಿ ಹುಟ್ಟಿಸುವಂತಿದೆ. ಈ ವಿಚಾರಗಳ ಬಗ್ಗೆ ಮಹಾತ್ಮ ಗಾಂಧಿಜಿ ಏನು ಹೇಳುತ್ತಿದ್ದರು ಅನ್ನೋದು ನನಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ. ಕಾರಣ ಈಗಿನ ಕಾಂಗ್ರೆಸ್ ಪಕ್ಷದ ಪ್ರಮುಖ ವಿಚಾರಗಳಲ್ಲಿ ಸಾರ್ವಜನಿಕ ಭೂ ಕಬಳಿಕೆ, ಸಾರ್ವಜನಿಕ ಹಣ ಲೂಟಿ, ಭ್ರಷ್ಟಾಚಾರ, ಸುಳ್ಳು ಭರವಸೆ, ವಿಭಜನೆ ರಾಜಕೀಯ, ರಾಜವಂಶ ಆಡಳಿತ ನೋಡಿದರೆ ಜಾರ್ಜ್ ಸೊರೋಸ ಕೈಗೊಂಬೆಯಾಗಿರುವುದು ಸ್ಪಷ್ಟ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಮಹಾತ್ಮಾ ಗಾಂಧಿ ಅಂದು ತೆಗೆದುಕೊಂಡ ನಿರ್ಣಯ ನಿರ್ಧಾರಗಳು ದೇಶದ ಹಿತದೃಷ್ಠಿಯಿಂದ ಇದ್ದರೆ ಇಂದಿನ ರಾಹುಲ್ ಕಾಂಗ್ರೆಸ್ ನಿರ್ಧಾರಗಳು ಜನರ ಒಳಿತು, ದೇಶದ ಒಳಿತಿಗಾಗಿ ಇಲ್ಲ ಎಂದು ಪರೋಕ್ಷವಾಗಿ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಕಪಟ ನಾಟಕದ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಈಗಿನ ಕಾಂಗ್ರೆಸ್ ಪಕ್ಷದ ನಿರ್ಧಾರಗಳ ಬಗ್ಗೆ ದೂರದೃಷ್ಟಿ ಇದ್ದ ಕಾರಣ ಮಹಾತ್ಮಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಯಾಕೆ ವಿಸರ್ಜಿಸಬೇಕು ಅನ್ನೋದು ಅರ್ಥವಾಗುತ್ತದೆ. ಈಗಿನ ಕಾಂಗ್ರೆಸ್ ನಡೆಯಿಂದ ಖಂಡಿತ ಮಹಾತ್ಮಾ ಗಾಂಧಿ ದುಃಖಿತಗೊಳ್ಳುತ್ತಾರೆ. ಜೊತೆಗೆ ನಿರಾಶಾರಾಗುವುದು ಖಚಿತ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಯಾಕೆ ವಿಸರ್ಜಿಸಬೇಕು ಅನ್ನೋದು ನೆನಪಿಸುತ್ತಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಕೇರಳದ ಮಾರ್ಕ್ಸಿಸ್ಟ್ ಗೂಂಡಾ ದಿವ್ಯಾಗೆ ಕಠಿಣ ಶಿಕ್ಷೆಯಾಗಬೇಕು, ರಾಜೀವ್ ಚಂದ್ರಶೇಖರ್ ಆಗ್ರಹ!

ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿದೆ. ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕೇಂದ್ರ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಕೊಂಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದರು. 39ನೇ ಕಾಂಗ್ರೆಸ್ ಅಧಿವೇಶನ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿತ್ತು. ಇದೇ ಸಭೆಯಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡನೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರ ಜೊತೆಗೆ ಹಲವು ನಿರ್ಣಯಗಳು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

 

 

ಪ್ರಿಯಾಂಕ್ ಖರ್ಗೆ ಹೇಳಿದ ಇದೇ ಹೇಳಿಕೆಗಳಿಗೆ ಟ್ವೀಟ್ ಮೂಲಕ ನೀಡಿರುವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದರೆ.  
 

Latest Videos
Follow Us:
Download App:
  • android
  • ios