ಕೇರಳದ ಮಾರ್ಕ್ಸಿಸ್ಟ್ ಗೂಂಡಾ ದಿವ್ಯಾಗೆ ಕಠಿಣ ಶಿಕ್ಷೆಯಾಗಬೇಕು, ರಾಜೀವ್ ಚಂದ್ರಶೇಖರ್ ಆಗ್ರಹ!
ನವೀನ್ ಬಾಬು ದುರಂತ ಅಂತ್ಯಕ್ಕೆ ನ್ಯಾಯ ಸಿಗಬೇಕು. ಈ ಸಾವಿನ ಹಿಂದಿರುವ ಆರೋಪಿ, ಕೇರಳದ ಮಾರ್ಕ್ಸ್‌ವಾದದ ಗೊಂಡೂ ಪಿಪಿ ದಿವ್ಯಾಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದರೆ. ಏನಿದು ಪ್ರಕರಣ?
ತಿರುವನಂತಪುರ(ಅ.29) : ಕೇರಳ ಆಡಳಿತರೂಢ ಸಿಪಿಎಂ ಸಂಕಷ್ಟ ಹೆಚ್ಚಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ದುರಂತ ಅಂತ್ಯದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ನವೀನ್ ಬಾಬು ಸಾವಿಗೆ ಕಾರಣರಾಗಿರುವ ಸಿಪಿಎಂ ನಾಯಕಿ ಪಿಪಿ ದಿವ್ಯ ಪೊಲೀಸರಿಗೆ ಶರಣಾಗಿದ್ದಾರೆ. ವರ್ಗಾವಣೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಆಗಮಿಸಿ ನವೀನ್ ಬಾಬು ಅಮಾನಿಸಿದ ಪಿಪಿ ದಿವ್ಯ ವಿರುದ್ದ ಕೇರಳ ಜನತೆ ತಿರುಗಿ ಬಿದ್ದಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆಗಳು ಹೋರಾಟಗಳು ತೀವ್ರಗೊಂಡಿದೆ. ಇತ್ತ ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಕರ್ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದ ಮಾರ್ಕಿಸ್ಟ್ ಗೂಂಡಾ ಪಿಪಿ ದಿವ್ಯಾಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ನವೀನ್ ಬಾಬು ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಎಡಿಎಂ ನವೀನ್ ಬಾಬು ಸಾವಿನ ಪ್ರಕರಣದ ಆರೋಪಿ, ಕಣ್ಣೂರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯ ಶರಣಾದ ಬಳಿಕ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಅಪಪ್ರಚಾರ, ಬೆದರಿಕೆ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳನ್ನ ಮಾಡಿದ್ದ ಕೇರಳದ ಮಾರ್ಕ್ಸಿಸ್ಟ್ ಗೂಂಡಾ ಪಿ.ಪಿ. ದಿವ್ಯಗೆ ಶಿಕ್ಷೆಯಾಗಲೇಬೇಕು ಅಂತ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ವಕ್ಫ್ ಬೋರ್ಡ್ ಜಿಪಿಸಿ ಸಭೆ ಬಹಿಷ್ಕರಿಸಿದ ವಿಪಕ್ಷಗಳ ಅಜೆಂಡಾ ಬಯಲು ಮಾಡಿದ ರಾಜೀವ್ ಚಂದ್ರಶೇಖರ್!
ಕೇರಳದ ಕಮ್ಯುನಿಸ್ಟರಿಗೆ ತಾವು ಕಾನೂನಿಗಿಂತ ಮೇಲಿದ್ದೀವಿ, ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಅನ್ನೋ ಭ್ರಮೆ ಹೋಗಬೇಕು. ಕಾನೂನನ್ನ ಸರಿಯಾಗಿ ಅನ್ವಯಿಸಿದ್ರೆ ಇದನ್ನ ಬದಲಾಯಿಸಬಹುದು ಅಂತ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸ್ವಾಭಿಮಾನಿಯೂ, ದುಡಿಮೆಯನ್ನೇ ನಂಬಿದ್ದ ನವೀನ್ ಬಾಬುರನ್ನ ಅವಮಾನಿಸಿ, ಸಾವಿಗೆ ದೂಡಿದ್ದಾರೆ. ಜೊತೆಗೆ ಅವರ ಕುಟುಂಬವನ್ನೇ ಶಾಶ್ವತವಾಗಿ ನಾಶಮಾಡಿದ್ದಾರೆ. ಆ ಕಷ್ಟ-ನೋವಿಗೆ ನ್ಯಾಯ ಸಿಗಲೇಬೇಕು ಅಂತ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತ ಶರಣಾದ ಪಿ.ಪಿ. ದಿವ್ಯಳನ್ನ ವಶಕ್ಕೆ ಪಡೆದ ತನಿಖಾ ತಂಡ ವಿಚಾರಣೆ ಮುಂದುವರಿಸಿದೆ. ಕಣ್ಣೂರು ಪೊಲೀಸ್ ಕಮಿಷನರ್ ಸೇರಿದಂತೆ ಕ್ರೈಂ ಬ್ರಾಂಚ್ ಅಧಿಕಾರಿಗಳು ದಿವ್ಯಳನ್ನ ವಿಚಾರಿಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆ ಬಳಿಕ ಬಂಧನ ದಾಖಲಿಸಿ ಇವತ್ತೇ ದಿವ್ಯಳನ್ನ ಕೋರ್ಟ್ ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನವೀನ್ ಬಾಬು ಸಾವಿನ ಪ್ರಕರಣದ ತನಿಖಾಧಿಕಾರಿ ಮುಂದೆ ಮಧ್ಯಾಹ್ನ ದಿವ್ಯ ಶರಣಾಗಿದ್ದರು. ಮುಂಗಡ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ದಿವ್ಯ ಶರಣಾಗಿದ್ದಾರೆ. ಪೊಲೀಸರು ಮತ್ತು ದಿವ್ಯ ನಡುವೆ ಒಪ್ಪಂದವಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಶರಣಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ದೃಶ್ಯಗಳು ಹೊರಬೀಳದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು. ಕಣ್ಣೂರು ಜಿಲ್ಲೆಯ ಕಣ್ಣಪುರದಲ್ಲಿ ದಿವ್ಯ ಮನೆ ಹತ್ತಿರದ ಒಂದು ಸ್ಥಳದಲ್ಲಿ ಶರಣಾಗಿದ್ದಾರೆ ಅನ್ನೋ ಮಾಹಿತಿ ಇದೆ.
ಭೂಮಿ ವಾಪಸ್ ಮಾಡಿ ಮಲ್ಲಿಕಾರ್ಜುನ ಖರ್ಗೆ ತಪ್ಪೊಪ್ಪಿಗೆ: ರಾಜೀವ್ ಚಂದ್ರಶೇಖರ್