ರಾಜಸ್ಥಾನ(ಏ. 13)  ನೋಟುಗಳಿಗೆ ಎಂಜಲು ಹಚ್ಚುವುದು, ಕಂಡಕಂಡಲ್ಲಿ ಉಗಿಯುವುದು ದೊಡ್ಡ ಸುದ್ದಿಯಾಗಿತ್ತು. ಈಗ ಅಂಥದ್ದೇ  ಇಂದು ಘಟನೆ ವರದಿಯಾಗಿದೆ. 

ರಾಜಸ್ಥಾನದ ಕೋಟಾ ವಲ್ಲಾಭಾವಡಿ ಏರಿಯಾದಿಂದ ಈ ಸುದ್ದಿ ಬಂದಿದೆ. ಮಹಿಳೆಯೊಬ್ಬರು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಉಗಿದು ಎಂಜಲನ್ನು ಕೆಲವರ ಮನೆ ಮುಂದೆ ಉದ್ದೇಶಪೂರ್ವಕವಾಗಿ ಹಾಕಿದ್ದು ಕೊರೋನಾ ಸಮಯದಲ್ಲಿ ಆತಂಕ ಹೆಚ್ಚಿದೆ.

'ದೇವರು ಇದ್ದಿದ್ದೇ ಆದರೆ ಕೊರೋನಾಕ್ಕೆ ಸುಮ್ಮನಿರಲು ಯಾಕೆ ಹೇಳ್ತಿಲ್ಲ'

ಪ್ರಕರಣ ಗೊತ್ತಾದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಪರಿಸರವನ್ನು ಸಾನಿಟೈಸ್ ಮಾಡಿದ್ದಾರೆ.   ಕೋಟಾ ಭಾಗದಲ್ಲಿ ಮಹಿಳೆಯೊಬ್ಬರು ಎಂಜಲು ತುಂಬಿದ ಬ್ಯಾಗ್ ಎಸೆಯುತ್ತಿರುವ ಬಗ್ಗೆ ನಮಗೆ ದೂರು ಬಂತು. ಇದಾದ ತಕ್ಷಣ ಸಾನಿಟೈಸ್ ಮಾಡುವ ತೀರ್ಮಾನ ಕೈಗೊಂಡೆವು ಎಂದು ಗುಮಾನ್ ಪುರ್ ಠಾಣಾಧಿಕಾರಿ ಮನೋಜ್ ಸಿಕ್ ವಾರ್ ತಿಳಿಸಿದ್ದಾರೆ.

ಮಹಿಳೆಯರಿಬ್ಬರು ಇಂಥ ಕುತಂತ್ರದ ಕೆಲಸ ಮಾಡಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಭಾನುವಾರ ಬೆಳಗ್ಗೆ 5-6 ಜನ ಮಹಿಳೆಯರು ಏರಿಯಾದಲ್ಲಿ ಸುತ್ತಾಡಿ ಇಂಥ  ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ಮಹಾರಾಷ್ಟ್ತ ಮತ್ತು ತಮಿಳುನಾಡು ಕೊರೋನಾ ಅಟ್ಟಹಾಸಕ್ಕೆ ಸಿಲುಕಿ ನರಳುತ್ತಿವೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 9152ಕ್ಕೆ ತಲುಪಿದೆ.