ನವದೆಹಲಿ(ಏ. 13)  ಇವರು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿ.  ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಕೊರೋನಾ ಆತಂಕದ ನಡುವೆಯೂ ಒಂದು ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮಾರ್ಕಂಡೇಯ ಕಟ್ಜು' ಒಂದು ವೇಳೆ ದೇವರು ಇದ್ದರೆ ಅವನು ಕೊರೋನಾಕ್ಕೆ ಸುಮ್ಮನಿರು ಎಂದು ಯಾಕೆ ಹೇಳುತ್ತಿಲ್ಲ, ಅಥವಾ ಬೇಕಂತಲೇ ಜನರಿಗೆ ತೊಂದರೆ ಕೊಡುತ್ತಿದ್ದಾನೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಚೀನಾದಲ್ಲಿ ಮತ್ತೆ ಹೆಚ್ಛಾಯಿತು ಕೊರೋನಾ ಸೋಂಕು

ಮತ್ತೊಂದು ಟ್ವೀಟ್ ಮಾಡಿರುವ ಕಟ್ಜು, ನಾನು ತಮಾಷೆ ಮಾಡುತ್ತಿಲ್ಲ. ಗಂಭೀರವಾಗಿ  ಈ ಪ್ರಶ್ನೆ ಕೇಳುತ್ತಿದ್ದೇನೆ ಎನ್ನುತ್ತ ಬರರಗಾರ ಡೋಸ್ಟೋವಸ್ಕಿ ಸಾಲುಗಳನ್ನು ಉಲ್ಲೇಖ ಮಾಡಿದ್ದಾರೆ. 

ಕೊರೋನಾ ಆತಂಕದಲ್ಲಿ ಇಡೀ ಪ್ರಪಂಚ ಮತ್ತು ದೇಶ ಇರುವಾಗ ಇಂಥ ವಿವಾದಾತ್ಮಕ ಸ್ಟೇಟ್ ಮೆಂಟ್ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಹತ್ತಿರಕ್ಕೆ ಬಂದಿದ್ದು ಲಾಕ್ ಡೌನ್ ಮತ್ತೆ ಮುಂದುವರಿಯುತ್ತೆ ಎಂದು  ಹೇಳಲಾಗುತ್ತಿದೆ.