ಜೈಪುರ(ಅ.10): ದೇವಾಲಯದ ಭೂಮಿಯ ಮೇಲಿನ ಆಸೆಗೆ ಐವರು ದುರುಳರು ಅರ್ಚಕರೊಬ್ಬರನ್ನು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದಿರುವ ಭೀಕರ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ

ಸುಟ್ಟಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ಬುಕ್ನಾ ಗ್ರಾಮದಲ್ಲಿರುವ ರಾಧಾಕೃಷ್ಣ ದೇವಾಲಯದ ಅರ್ಚಕ ಬಾಬುಲಾಲ್‌ ವೈಷ್ಣವ್‌ ಚಿಕಿತ್ಸೆ ಫಲಿಸದೇ ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ.

"

ದೇವಾಲಯಕ್ಕೆ ಸಂಬಂಧಿಸಿದ 5.2 ಎಕರೆ ಜಮೀನನ್ನು ಬಾಬುಲಾಲ್‌ ನೋಡಿಕೊಳ್ಳುತ್ತಿದ್ದರು. ಈ ಜಮೀನಿನ ಪಕ್ಕದಲ್ಲಿ ತಮಗಾಗಿ ಒಂದು ಸಣ್ಣ ಮನೆ ನಿರ್ಮಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಈ ಜಮೀನನ್ನು ಅತಿಕ್ರಮಿಸಲು ಅದೇ ಗ್ರಾಮದ ಇನ್ನೊಂದು ಗುಂಪು ಬಯಸಿತ್ತು. ಈ ಕಾರಣಕ್ಕೆ ಕಲಹ ಏರ್ಪಟ್ಟಿತ್ತು. ಬುಧವಾರ ಐವರು ಆರೋಪಿಗಳು ಅರ್ಚಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು.

ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ನಿಧನರಾಗಿದ್ದಾರೆ. ಘಟನೆ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.