Asianet Suvarna News Asianet Suvarna News

ತಾಯಿಯಾಗಲು ಬಯಸಿದ ಮಹಿಳೆ, ಗಂಡನಿಗೆ 15 ದಿನದ ಪರೋಲ್ ಕೊಟ್ಟು ಕಳುಹಿಸಿದ ಹೈಕೋರ್ಟ್‌

* ರಾಜಸ್ಥಾನದಲ್ಲಿ ಪೆರೋಲ್‌ಗೆ ಸಂಬಂಧಿಸಿದಂತೆ ವಿಚಿತ್ರ ಪ್ರಕರಣ

* ಮಗು ಬೇಕೆಂದು ಕೋರಿ ಪತ್ನಿ ಸಲ್ಲಿಸಿದ್ದ ಮನವಿ

* ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ರಾಜಸ್ಥಾನ ಹೈಕೋರ್ಟ್ ಪೆರೋಲ್

Rajasthan High Court grants 15 days parole to a man whose wife wanting a baby pod
Author
Bangalore, First Published Apr 8, 2022, 10:38 AM IST

ಜೈಪುರ(ಏ.08): ರಾಜಸ್ಥಾನದಲ್ಲಿ ಪೆರೋಲ್‌ಗೆ ಸಂಬಂಧಿಸಿದಂತೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಗು ಬೇಕೆಂದು ಕೋರಿ ಪತ್ನಿ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ರಾಜಸ್ಥಾನ ಹೈಕೋರ್ಟ್ ಪೆರೋಲ್ ನೀಡಿದೆ. ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರ ವಿಭಾಗೀಯ ಪೀಠವು ಭಿಲ್ವಾರಾ ಜಿಲ್ಲೆಯ ನಿವಾಸಿ ನಂದಲಾಲ್‌ಗೆ 15 ದಿನಗಳ ಪೆರೋಲ್ ನೀಡಿದೆ.

ಜೈಲುಪಾಲಾಗಿದ್ದ ಪತಿಯಿಂದ ಮಗು ಪಡೆಯಬೇಂದು ಬಯಸಿದ ಮಹಿಳೆ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಪೆರೋಲ್‌ಗಾಗಿ ಕೋರಿದ್ದರು. ಆದರೆ ಜಿಲ್ಲಾಧಿಕಾರಿ ತನ್ನ ಮನವಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಪತ್ನಿಯ ವಾದವನ್ನು ಆಲಿಸಿದ ನ್ಯಾಯಾಲಯ ಮಾನವೀಯ ನೆಲೆಯಲ್ಲಿ ಪತಿಗೆ 15 ದಿನಗಳ ಕಾಲ ಪೆರೋಲ್ ಮೇಲೆ ತೆರಳುವಂತೆ ಆದೇಶ ನೀಡಿದೆ. ಇನ್ನು, ಸುಮಾರು ಹನ್ನೊಂದು ತಿಂಗಳ ಹಿಂದೆ ನಂದಲಾಲ್ 20 ದಿನಗಳ ಪೆರೋಲ್ ಪಡೆದಿದ್ದರು ಎಂಬುವುದು ಗಮನಿಸಬೇಕಾದ ವಿಚಾರ.

Shakti Mills gangrape case: 3 ರೇಪಿಸ್ಟ್‌ಗಳ ಗಲ್ಲು ಶಿಕ್ಷೆ, ಜೀವಾವಧಿಯಾಗಿ ಬದಲು!

ಶಿಕ್ಷೆ ಪಡೆದು ಜೈಲು ಸೇರುವ ಕೆಲ ಸಮಯದ ಹಿಂದಷ್ಟೇ ನಂದಲಾಲ್ ವಿವಾಹವಾಗಿದ್ದರು. ಅವರು ಫೆಬ್ರವರಿ 6, 2019 ರಿಂದ ಅಜ್ಮೀರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಅವರಿಗೆ ಮೊದಲ ಬಾರಿ ಪೆರೋಲ್ ನೀಡಲಾಯಿತು. ಏತನ್ಮಧ್ಯೆ, ಕೊರೋನಾ ವೈರಸ್ ಮತ್ತು ಇತರ ಕಾರಣಗಳಿಂದ, ನಂದಲಾಲ್ ಅವರ ಪತ್ನಿ ಮತ್ತು ಕುಟುಂಬದೊಂದಿಗೆ ಸುಮಾರು ಎರಡು ವರ್ಷಗಳವರೆಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ.

ಹೀಗಿರುವಾಗ ಪತ್ನಿ ತನ್ನ ಅರ್ಜಿಯೊಂದಿಗೆ ಜೈಲು ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದರು. ಕೆಲ ದಿನಗಳ ಹಿಂದೆ ವಕೀಲರ ಜತೆ ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ ತಾನು ತಾಯಿಯಾಗಲು ಬಯಸುವುದಾಗಿ ಹೇಳಿದ್ದಳು. ತನ್ನ ಹಕ್ಕನ್ನು ಈಡೇರಿಸಲು ತನ್ನ ಪತಿಯನ್ನು ಕೆಲವು ದಿನಗಳ ಕಾಲ ಪೆರೋಲ್ ಮೇಲೆ ಬಿಡುವಂತೆ ಒತ್ತಾಯಿಸಿದಳು. ಕಾರಾಗೃಹದ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇರುವುದರಿಂದ ಜಿಲ್ಲಾಧಿಕಾರಿ ಬಳಿ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸದೆ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. 

ಜಿಲ್ಲಾಧಿಕಾರಿಯ ಅನುಮತಿಗೆ ಕಾದು ಬೇಸತ್ತ ಮಹಿಳೆ ನೇರವಾಗಿ ಹೈಕೋರ್ಟ್‌ಗೆ ತೆರಳಿ ನ್ಯಾಯಾಧೀಶರ ಮುಂದೆ ತನ್ನ ಮನವಿ ಸಲ್ಲಿಸಿದ್ದಾಳೆ. ತನ್ನ ಪತಿ ಉದ್ದೇಶಪೂರ್ವಕವಾಗಿ ಅಪರಾಧ ಮಾಡಿದ್ದಲ್ಲ, ಅವನು ವೃತ್ತಿಪರ ಅಪರಾಧಿಯಲ್ಲ ಎಂದು ಉಲ್ಲೇಖಿಸಿದ್ದಾರೆ. ತನ್ನ ಪತಿ ಎಲ್ಲಾ ಜೈಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಬೆಳಗಾವಿ: ಪೆರೋಲ್‌ ಮೇಲೆ ಹೋದ ಇಬ್ಬರು ಕೈದಿಗಳು ನಾಪತ್ತೆ

ಪೆರೋಲ್ ಸಮಯದಲ್ಲಿ ಮಗುವಿನ ಜನನಕ್ಕೆ ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ವಿಭಾಗೀಯ ಪೀಠವು ಗಮನಿಸಿದೆ, ಆದರೆ ವಂಶಾವಳಿಯನ್ನು ಸಂರಕ್ಷಿಸುವ ಉದ್ದೇಶದಿಂದ ಮಕ್ಕಳನ್ನು ಹೊಂದುವುದು ಧಾರ್ಮಿಕ ತತ್ವಶಾಸ್ತ್ರ, ಭಾರತೀಯ ಸಂಸ್ಕೃತಿ ಮತ್ತು ವಿವಿಧ ನ್ಯಾಯಾಂಗ ಘೋಷಣೆಗಳ ಮೂಲಕ ಗುರುತಿಸಲ್ಪಟ್ಟಿದೆ. ನ್ಯಾಯಾಧೀಶರು ಋಗ್ವೇದ ಮತ್ತು ವೈದಿಕ ಸ್ತೋತ್ರಗಳ ಉದಾಹರಣೆಯನ್ನು ನೀಡಿ, ಮಗುವಿನ ಜನನವನ್ನು ಮೂಲಭೂತ ಹಕ್ಕು ಎಂದು ಕರೆದಿದ್ದಾರೆ.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ, ವಿವಾಹವಾದಾಗಿನಿಂದ ಇಲ್ಲಿಯವರೆಗೆ ದಂಪತಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ತೀರ್ಪು ನೀಡಿತು. ಹಿಂದೂ ತತ್ವಶಾಸ್ತ್ರದ ಪ್ರಕಾರ, ಪರಿಕಲ್ಪನೆಯು 16 ಸಂಸ್ಕಾರಗಳ ಮೇಲ್ಭಾಗದಲ್ಲಿದೆ, ಆದ್ದರಿಂದ ಈ ಮನವಿ ಮೇರೆಗೆ ಪರೋಲ್ ನೀಡಬಹುದು ಎಂದಿದೆ. 

Follow Us:
Download App:
  • android
  • ios