ಸಚಿನ್ ಪೈಲಟ್ VS ಅಶೋಕ್ ಗೆಹ್ಲೋಟ್; ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರವೇನು?

ಜ್ಯೋತಿರಾದಿತ್ಯ ಸಿಂ​ಧಿಯಾರಂತೆ ಸಚಿನ್‌ ಪೈಲಟ್‌ ಕೂಡ ಯಾವಾಗ ಬೇಕಾದರೂ ರಾಹುಲ್‌ ಮತ್ತು ಸೋನಿಯಾರನ್ನು ಭೇಟಿ ಮಾಡಬಹುದಿತ್ತು. ಆದರೆ ರಾಜಸ್ಥಾನದ ಎಷ್ಟೋ ವಿಷಯಗಳನ್ನು ತುಘಲಕ್‌ ಕ್ರೆಸೆಂಟ್‌ಗೆ ಹೋಗಿ ಹೇಳಿದರೂ ರಾಹುಲ್‌ ಮಾತ್ರ ‘ಅಡ್ಜಸ್ಟ್‌ ಮಾಡಿಕೊಂಡು ಹೋಗು. ಈಗ ಏನೂ ಮಾಡಲು ಸಾಧ್ಯವಿಲ್ಲ’ ಎಂದೇ ಹೇಳುತ್ತಿದ್ದರು.

jyotiraditya scindia backs Sachin Pilot against Rajasthan CM Ashok Gehlot

ಜ್ಯೋತಿರಾದಿತ್ಯ ಸಿಂ​ಧಿಯಾರಂತೆ ಸಚಿನ್‌ ಪೈಲಟ್‌ ಕೂಡ ಯಾವಾಗ ಬೇಕಾದರೂ ರಾಹುಲ್‌ ಮತ್ತು ಸೋನಿಯಾರನ್ನು ಭೇಟಿ ಮಾಡಬಹುದಿತ್ತು. ಆದರೆ ರಾಜಸ್ಥಾನದ ಎಷ್ಟೋ ವಿಷಯಗಳನ್ನು ತುಘಲಕ್‌ ಕ್ರೆಸೆಂಟ್‌ಗೆ ಹೋಗಿ ಹೇಳಿದರೂ ರಾಹುಲ್‌ ಮಾತ್ರ ‘ಅಡ್ಜಸ್ಟ್‌ ಮಾಡಿಕೊಂಡು ಹೋಗು. ಈಗ ಏನೂ ಮಾಡಲು ಸಾಧ್ಯವಿಲ್ಲ’ ಎಂದೇ ಹೇಳುತ್ತಿದ್ದರು.

ಪೊಲೀಸರ ಸಮನ್ಸ್‌ ಬಂದಾಗ ಸಚಿನ್‌ ಸ್ವತಃ ರಾಹುಲ್‌ ಬಳಿ ಹೇಳಿದರೂ ‘ಇದು ಸರಿಯಲ್ಲ, ಹಿಂದೆ ತೆಗೆದುಕೊಳ್ಳಿ’ ಎಂದು ಜಗಳ ಬಗೆಹರಿಸಲು ದಿಲ್ಲಿಯಿಂದ ಯಾರೂ ತಯಾರಾಗಲಿಲ್ಲ. ಆಗ ಸಚಿನ್‌ಗೆ ಫೋನ್‌ ಮಾಡಿದ ಜ್ಯೋತಿರಾದಿತ್ಯ ಮನೆಗೆ ಕರೆಸಿಕೊಂಡು 40 ನಿಮಿಷ ಮಾತನಾಡಿದ್ದಾರೆ. ಮೂಲಗಳು ಹೇಳುವ ಪ್ರಕಾರ, ಜ್ಯೋತಿರಾದಿತ್ಯ ಮನೆಯಿಂದ ಸಚಿನ್‌ ಪೈಲಟ್‌ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಜೊತೆ ಮಾತನಾಡಿದ್ದಾರೆ.

ಗೆಹ್ಲೋಟ್ ಖೆಡ್ಡಾಕ್ಕೆ ಬಿದ್ದ ಪೈಲಟ್; ಇಬ್ಬರ ಮಧ್ಯೆ ಆಗಿದ್ದೇನು?

ಕೂಡಲೇ ಸಚಿನ್‌ ಬಳಿ ಇದ್ದ 18 ಶಾಸಕರನ್ನು ಹರ್ಯಣದ ರೆಸಾರ್ಟ್‌ಗೆ ಕಳುಹಿಸಲಾಗಿದೆ. ಇದು ಗೊತ್ತಾಗುತ್ತಿದ್ದಂತೆ ಪ್ರಿಯಾಂಕಾ ಗಾಂ​ಧಿ ಮೂರು ಬಾರಿ ಸಚಿನ್‌ಗೆ ಫೋನ್‌ ಮಾಡಿದ್ದಾರೆ. ಆದರೆ ಸಚಿನ್‌ ಮಾತನಾಡಿಲ್ಲ. ಆದರೆ ಪೈಲಟ್‌ ಉಳಿದ ಶಾಸಕರಿಗೆ ಕೈಹಚ್ಚುವ ಮುಂಚೆಯೇ ಪೊಲಿಟಿಕಲ್‌ ಮ್ಯಾನೇಜ್ಮೆಂಟ್‌ ಗೊತ್ತಿರುವ ಅಶೋಕ್‌ ಗೆಹ್ಲೋಟ್‌ 109 ಶಾಸಕರನ್ನು ಒಟ್ಟಿಗೆ ಹೋಟೆಲ್‌ಗೆ ತಂದೇಬಿಟ್ಟಿದ್ದರು. ಹೀಗಾಗಿ ರಾಜಸ್ಥಾನಿ ಕುಸ್ತಿಯಲ್ಲಿ ರೌಂಡ್‌ ಒಂದರಲ್ಲಿ ಮಾತ್ರ ಅಶೋಕ್‌ ಗೆಹ್ಲೋಟ್‌ ಗೆದ್ದಿದ್ದರೆ, ಸಚಿನ್‌ ಚಿತ್‌ ಆಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Latest Videos
Follow Us:
Download App:
  • android
  • ios