Asianet Suvarna News Asianet Suvarna News

ಇಂದು ರಾಜಸ್ಥಾನ ಸಿಎಂ ಆಯ್ಕೆ: ಹೊಸಬರಿಗೆ ಮಣೆ, ವಸುಂಧರಾ ರಾಜೆಗೆ ಕೊಕ್‌?

ರಾಜಸ್ಥಾನದಲ್ಲಿ ಈಗಾಗಲೇ ಯೋಗಿ ಬಾಲಕನಾಥ್‌, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೇಖಾವತ್‌, ಅರ್ಜುನ್‌ ರಾಮ್‌ ಮೇಘ್ವಾಲ್‌, ಜೈಪುರದ ರಾಣಿ ದಿಯಾ ಕುಮಾರಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ.

rajasthan cm may be named today as bjp plans legislative party meet ash
Author
First Published Dec 12, 2023, 10:03 AM IST

ಜೈಪುರ (ಡಿಸೆಂಬರ್ 12, 2023): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ 3 ರಾಜ್ಯಗಳಲ್ಲಿ 2 ರಾಜ್ಯಗಳಲ್ಲಿ ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದೆ. ಮಂಗಳವಾರ ರಾಜಸ್ಥಾನದಲ್ಲೂ ಶಾಸಕಾಂಗ ಸಭೆ ನಡೆಯಲಿದ್ದು, ಇಲ್ಲೂ ಹೊಸ ಮುಖಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮೂಲಕ 2 ಬಾರಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರನ್ನು ಕೈಬಿಡಬಹುದು ಎಂದು ಹೇಳಲಾಗಿದೆ. 

ರಾಜಸ್ಥಾನದಲ್ಲಿ ಈಗಾಗಲೇ ಯೋಗಿ ಬಾಲಕನಾಥ್‌, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೇಖಾವತ್‌, ಅರ್ಜುನ್‌ ರಾಮ್‌ ಮೇಘ್ವಾಲ್‌, ಜೈಪುರದ ರಾಣಿ ದಿಯಾ ಕುಮಾರಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ.

ಇದನ್ನು ಓದಿ: ಶಿವರಾಜ್‌ಸಿಂಗ್ ರಾಜ್ಯ ರಾಜಕೀಯ ಅಂತ್ಯ? ಮಧ್ಯ ಪ್ರದೇಶದಲ್ಲಿ ಅಚ್ಚರಿ ಆಯ್ಕೆ

ಈ ಮೊದಲು ಛತ್ತೀಸ್‌ಗಢದಲ್ಲಿ ವಿಷ್ಣುದೇವ್‌ ಮತ್ತು ಮಧ್ಯ ಪ್ರದೇಶದಲ್ಲಿ ಮೋಹನ್ ಯಾದವ್‌ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಬಿಜೆಪಿ ಘೋಷಣೆ ಮಾಡಿತ್ತು. ಈ 2 ರಾಜ್ಯಗಳಲ್ಲಿ ಹೊಸಬರನ್ನು ಮುಖ್ಯಮಂತ್ರಿ ಮಾಡಿರುವುದರಿಂದ ರಾಜಸ್ಥಾನದಲ್ಲೂ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ರಾಜಸ್ಥಾನ ಬಿಜೆಪಿಯಲ್ಲಿ ಕ್ಷಿಪ್ರ ಕ್ರಾಂತಿ ಸುಳಿವು, ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಬಿಗಿಗೊಳಿಸಿದ್ರಾ ರಾಜೆ?

Follow Us:
Download App:
  • android
  • ios