ಕೋಟಾ(ಡಿ.28): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 10 ನವಜಾತ ಶಿಶುಗಳ ಅಕಾಲಿಕ ಮರಣದ ಕುರಿತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ 'ಹುವಾ ತೋ ಹುವಾ'(ಆಗಿದ್ದಾಯ್ತು) ಎಂದು ಉಡಾಫೆಯ ಪ್ರತಿಕ್ರಿಯೆ ನೀಡಿದ್ದಾರೆ.

ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 10ಕ್ಕೂ ಅಧಿಕ ನವಜಾತ ಶಿಶುಗಳು ಮರಣ ಹೊಂದಿದ್ದು, ಇದಕ್ಕೆ ರಾಜಸ್ಥಾನ ಸಿಎಂ ನೀಡಿರುವ ಪ್ರತಿಕ್ರಿಯೆ ತೀವ್ರ ವಿವಾದ ಸೃಷ್ಟಿಸಿದೆ.

'ಮಕ್ಕಳು ಪ್ರತಿವರ್ಷ ಸಾಯುತ್ತಾರೆ ಇದರಲ್ಲೇನು ವಿಶೇಷ..' ಎಂದು ಸಿಎಂ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ರಾಜಸ್ಥಾನದ ಆಸ್ಪತ್ರೇಲಿ 48 ಗಂಟೆಯಲ್ಲಿ 10 ನವಜಾತ ಮಕ್ಕಳ ಸಾವು!

ಇನ್ನು ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಅಮಾನವೀಯ ಹೇಳಿಕೆ ಎಂದು ಕಿಡಿಕಾರಿದೆ.

ಸದ್ಯ ಘಟನೆಯ ಕುರಿತು ವಿಸ್ತೃತ ತನಿಖೆಗೆ ಆದೇಶ ನೀಡಿರುವ ಅಶೋಕ್ ಗೆಹ್ಲೋಟ್, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.