ಕೋಟಾ[ಡಿ.28]: 48 ಗಂಟೆಗಳ ಅವಧಿಯಲ್ಲಿ 10 ನವಜಾತ ಶಿಶುಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾ ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಜೆ.ಕೆ. ಲೋನ್‌ ಆಸ್ಪತ್ರೆಯಲ್ಲಿ ಡಿ.23ರಿಂದ ಡಿ.24ರ ಅವಧಿಯಲ್ಲಿ ನವಜಾತ ಶಿಶುಗಳು ಸಾವನ್ನಪ್ಪಿವೆ. ಸಾವಿಗೀಡಾದ 4 ಮಕ್ಕಳು 1ರಿಂದ 4 ದಿನದವಾಗಿದ್ದರೆ, ಮೂರು ಮಕ್ಕಳು 1 ರಿಂದ 5 ತಿಂಗಳ ಒಳಗಿನದ್ದಾಗಿವೆ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ವೈದ್ಯಕೀಯ ನಿರ್ಲಲ್ಷ್ಯದಿಂದ ಮಕ್ಕಳು ಸಾವಿಗೀಡಾಗಿವೆ ಎಂಬ ಆರೋಪವನ್ನು ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ.