ರಾಜಸ್ಥಾನದ ಚಿತ್ತೋರಗಢದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯ ಚಕ್ಕಂದದ ವಿಡಿಯೋ ವೈರಲ್ ಆಗಿದ್ದು, ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಶಾಲಾ ಕಚೇರಿಯಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

ಜೈಪುರ (ಜ.20): ರಾಜಸ್ಥಾನದ ಚಿತ್ತೋರಗಢದಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ, ಶಾಲೆಯ ಚೇಂಬರ್‌ನಲ್ಲೇ ಪ್ರಿನ್ಸಿಪಾಲರು ಶಿಕ್ಷಕಿಯೊಬ್ಬಳ ಜತೆ ಚಕ್ಕಂದ ನಡೆಸಿ ಮುಖ ಮೈಥುನ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ. 

ಇದರ ಬೆನ್ನಲ್ಲೇ ಇಬ್ಬರನ್ನೂ ಅಮಾನತು ಮಾಡಲಾಗಿದದೆ ಹಾಗೂ ತನಿಖೆಗೆ 3 ಅಧಿಕಾರಿಗಳ ತಂಡ ರಚಿಸಲಾಗಿದೆ.ಚಿತ್ತೋರ್‌ಗಢ ಜಿಲ್ಲೆಯ ಗಂಗ್ರಾರ್ ಬ್ಲಾಕ್‌ನ ಅಜೋಲಿಯಾ ಕಾ ಖೇಡಾ ಪ್ರದೇಶದ ಸಲೇರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಚಾರ್ಯ ಮತ್ತು ಶಿಕ್ಷಕಿಯ ನಡುವೆ ಹಲವು ದಿನದಿಂದ ಸಂಬಂಧ ಇತ್ತು ಎನ್ನಲಾಗಿದೆ. 

ಇದರ ನಡುವೆ ಇಬ್ಬರೂ ಚಕ್ಕಂದ ಆಡುತ್ತಿದ್ದು, ಶಿಕ್ಷಕಿಯು, ಪ್ಯಾಂಟ್‌ ಜಿಪ್ ತೆಗೆದ ಶಿಕ್ಷಕನ ಮುಖಮೈಥುನ ಮಾಡಿದ್ದಾರೆ. ಅನೇಕ ಬಾರಿ ಒಬ್ಬರಿಗೊಬ್ಬರು ಮುದ್ದಾಡುವ ದೃಶ್ಯವೂ ಸೆರೆಯಾಗಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಗಂಡನಿಗೆ ನಿದ್ರೆ ಮಾತ್ರೆ ಹಾಕಿ ಬಾಯ್‌ಫ್ರೆಂಡ್ ಜತೆ ಚಕ್ಕಂದ; ಆಮೇಲೆ ಆಡಿದ ಆಟ ಒಂದೆರಡಲ್ಲ!

ಶಾಲಾ ಕಚೇರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಹಲವು ವಿಡಿಯೋಗಳು ವೈರಲ್ ಆಗಿದ್ದು, ಇದರಲ್ಲಿ ಆರೋಪಿ ಶಿಕ್ಷಕ ಮತ್ತು ಶಿಕ್ಷಕಿ ಬೇರೆ ಬೇರೆ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಕ್ಕಂದ ಆಡಲೆಂದೇ ಒಳಗೆ ಬಂದಿದ್ದಾರೆ. ಕೆಲವೊಮ್ಮೆ ಅವರು ಒಂದು ಮೂಲೆಯಲ್ಲಿ ಮತ್ತು ಕೆಲವೊಮ್ಮೆ ಇನ್ನೊಂದು ಮೂಲೆಯಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸುತ್ತಾರೆ. ಇತರ ಮಹಿಳಾ ಶಿಕ್ಷಕರು ಅಲ್ಲಿಗೆ ಬಂದಾಗ ಅವರು ನಿಲ್ಲಿಸುತ್ತಾರೆ ಮತ್ತು ಹಿಂಜರಿಯುತ್ತಾರೆ, ಆದರೆ ಆ ಶಿಕ್ಷಕಿ ಹೋದ ತಕ್ಷಣ, ಅವರು ಮತ್ತೆ ಚಕ್ಕಂದ ಆಡುವುದು ವಿಡಿಯೋದಲ್ಲಿ ದಾಖಲಾಗಿದೆ.

ಪ್ರಾಚಾರ್ಯ-ಶಿಕ್ಷಕಿ ಇಬ್ಬರೂ ಅಮಾನತು:

ಶಾಲಾ ಕಚೇರಿಯಲ್ಲಿ ಶಿಕ್ಷಕ ಮತ್ತು ಶಿಕ್ಷಕ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು ಬೆಳಕಿಗೆ ಬಂದ ನಂತರ ಶಿಕ್ಷಣ ಇಲಾಖೆ ಇಬ್ಬರನ್ನೂ ಅಮಾನತುಗೊಳಿಸಿದೆ. ಈ ವೈರಲ್ ವೀಡಿಯೊವನ್ನು ಅಮಾನತುಗೊಳಿಸುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರ ಸತ್ಯಾಸತ್ಯತೆ ದೃಢೀಕರಿಸಲಾಗಿಲ್ಲ. ಆದರೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಂಡು ಘಟನೆಯ ತನಿಖೆ ಆರಂಭಿಸಿದೆ.

ಮಹಿಳಾ ಪೊಲೀಸ್ ಜೊತೆ ಇನ್ಸ್‌ಪೆಕ್ಟರ್ ಪತಿಯ ರಾಸಲೀಲೆ ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ, ದೃಶ್ಯ ಸೆರೆ!

ಗ್ರಾಮಸ್ಥರು ಆಕ್ರೋಶ:

ಈ ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ರೊಚ್ಚಿಗೆದ್ದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಠಾಣೆ ಪ್ರಭಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಇಂತಹ ಘಟನೆಗಳಿಂದ ಶಿಕ್ಷಣದ ವಾತಾವರಣ ಹಾಗೂ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಕೂಡಲೇ ಶಿಕ್ಷಕ ಮತ್ತು ಶಿಕ್ಷಕರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು.