Asianet Suvarna News Asianet Suvarna News

Rajasthan Cabinet Reshuffle ಮಂತ್ರಿಗಳ ಪ್ರಮಾಣವಚನ, ಉಭಯ ಬಣಗಳ ಕೋಪ ಶಮನ

  • ರಾಜಸ್ಥಾನ ಸಚಿವ ಸಂಪುಟ ಪುನಾರಚನೆ, 15 ಸಚಿವರು ಪ್ರಮಾಣ ವಚನ
  • ಸಚಿನ್ ಬಣದಿಂದ ಐವರಿಗೆ ಸ್ಥಾನ, ಎರಡೂ ಬಣದಲ್ಲಿ ಸಮಾಧಾನ
  • ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ 12 ಹೊಸ ಮುಖಗಳಿಗೆ ಅವಕಾಶ
     
Rajasthan Cabinet Reshuffle 15 New Ministers Take Oath strike a balance between Gehlot and pilot camps ckm
Author
Bengaluru, First Published Nov 21, 2021, 6:18 PM IST
  • Facebook
  • Twitter
  • Whatsapp

ಜೈಪುರ(ನ.21):  ರಾಜಸ್ಥಾನದಲ್ಲಿನ(Rajasthan) ಸಚಿವ ಸಂಪುಟ ಪುನಾರಚನೆಗೆ( Cabinet Reshuffle)ಕಸರತ್ತಿಗೆ ಒಂದು ಹಂತದ ಫುಲ್‌ಸ್ಟಾಪ್ ಬಿದ್ದಿದೆ. ಸಿಎಂ ಅಶೋಕ್ ಗೆಹ್ಲೋಟ್(Ahok gehlot) ಹಾಗೂ ಸಚಿನ್ ಪೈಲೆಟ್(Sachin Pilot ) ಬಣಗಳ ತಿಕ್ಕಾಟಕ್ಕೆ ಕಾರಣವಾಗಿದ್ದ ಸಂಪುಟ ಸರ್ಜರಿಯನ್ನು ಕಾಂಗ್ರೆಸ್ ಯಶಸ್ವಿಯಾಗಿ ಮಾಡಿದೆ. ಸಚಿನ್ ಬಣದ ಐವರಿಗೆ ಸ್ಥಾನ ನೀಡುವ ಮೂಲಕ ಗೆಹ್ಲೋಟ್ ಹಾಗೂ ಸಚಿನ್ ಬಣವನ್ನು ತಣ್ಣಗಾಗಿಸುವಲ್ಲಿ ಕಾಂಗ್ರೆಸ್(Congress) ಸೈ ಎನಿಸಿಕೊಂಡಿದೆ. ಸಂಪುಟ ಪುನಾರಚನೆಯಲ್ಲಿ ಸ್ಥಾನ ಪಡೆದ 15 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ(oath) ಸಮಾರಂಭದಲ್ಲಿ 15 ಮಂತ್ರಿಗಳು ಅಶೋಕ್ ಗೆಹ್ಲೋಟ್ ಸಂಪುಟ ಸೇರಿಕೊಂಡಿದ್ದಾರೆ. ವಿಶೇಷ ಅಂದರೆ ಸಚಿನ್ ಪೈಲೆಟ್ ಬಣದ ಐವರು ಸೇರಿ 12 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.  ಪ್ರಮಾಣ ವಚನ ಸ್ವೀಕರಿಸಿ ಗೆಹ್ಲೋಟ್ ಸಂಪುಟ ಸೇರಿಕೊಂಡವರ ಪೈಕಿ ಮೂವರು ಮಹಿಳೆರಿಗೆಯ ಸ್ಥಾನ ನೀಡಲಾಗಿದೆ. 2018ರಲ್ಲಿ ಅಧಿಕಾರಕ್ಕೇರಿದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೇ ಮೊದಲ ಬಾರಿಗೆ ಸಂಪುಟ ಪುನಾರಚನೆ ಕಾಣುತ್ತಿದೆ. 

Rajasthan Politics:ಸಂಪುಟ ಪುನಾರಚನೆ ಕಸರತ್ತು, ರಾಜಸ್ಥಾನದ ಎಲ್ಲಾ ಸಚಿವರು ರಾಜೀನಾಮೆ!

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕರನ್ನುದ್ದೇಶಿಸಿ ಸಿಎಂ ಅಶೋಕ್ ಗೆಹ್ಲೋಟ್ ಮಾತನಾಡಿದ್ದಾರೆ. ಸಚಿವ ಸ್ಥಾನ ಸಿಗದ ಶಾಸಕರು ಸ್ಥಾನ ಸಿಕ್ಕ ಮಂತ್ರಿಗಳಿಗೆ ಸಮಾನಾಗಿದ್ದಾರೆ. ಅವರಂತೆ ಕೆಲಸ ಮಾಡಲಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ತರಲಿದ್ದೇವೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಹಿರಿಯ ಸಚಿವರಾದ ಹರೀಶ್ ಚೌದರಿ, ರಘು ಶರ್ಮಾ ಹಾಗೂ ಗೋವಿಂದ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಈಗಾಗಲೇ ಗುಜರಾತ್‌ ಕಾಂಗ್ರೆಸ್ ಉಸ್ತುವಾರಿ ಸಚಿವ ರಘು ಶರ್ಮಾ, ಪಂಜಾಬ್ ಉಸ್ತುವಾರಿ ಸಚಿವ ಹರೀಶ್ ಸಿಂಗ್ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ಅವರು ಈಗಾಗಲೇ ಒಂದೊಂದು ಹುದ್ದೆಯಲ್ಲಿರುವ ಕಾರಣ ಸಂಪುಟದಿಂದ ಕೈಬಿಡಲಾಗಿದೆ. ನಿನ್ನೆ(ನ.20) ಈ ಮೂವರು ರಾಜೀನಾಮೆ ಸಲ್ಲಿಸಿದ್ದರು.

30 ಸಚಿವರನ್ನು ಹೊಂದಿದ ಅಶೋಕ್ ಗೆಹ್ಲೋಟ್ ಸರ್ಕಾರ ರಾಜಸ್ಥಾನದಲ್ಲಿ ಮತ್ತಷ್ಟು ಚುರುಕಿನಿಂದ ಕೆಲಸ ಮಾಡಲಿದೆ. ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಸಂಪುಟ ಪುನಾರಚನೆ ನಡೆದಿದೆ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ಬಣ ರಾಜಕೀಯದಿಂದ ರಾಜಸ್ಥಾನ ಕಾಂಗ್ರೆಸ್ ಬಡವಾಗಿತ್ತು. ಸಿಕ್ಕ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿತ್ತು. ಹೀಗಾಗಿ ಎರಡೂ ಬಣವನ್ನು ಸಮಾಧಾನ ಪಡಿಸುವ ಸಂಪುಟ ರಚನೆ ಮಾಡಲಾಗಿದೆ.ಸಂಪುಟ ಪುನಾರಚನೆ ಕಾರಣ ನಿನ್ನೆ ಎಲ್ಲಾ ಸಚಿವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಲ್ಲಿ 18 ಮಂದಿ ಮತ್ತೆ ಸಂಪುಟ ಸೇರಿಕೊಂಡಿದ್ದಾರೆ.

Rajasthan Congress| ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು! 

ಸಂಪುಟ ಪುನಾರಚನೆ ಕುರಿತು ಸಚಿನ್ ಪೈಲೆಟ್ ಸಂಚಸ ವ್ಯಕ್ತಪಡಿಸಿದ್ದಾರೆ. ಸಮಾನತೆ ಬೇಕು ಅನ್ನೋದು ನಮ್ಮ ಆಗ್ರವಾಗಿತ್ತು. ಇದನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿದೆ. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುನ್ನಡೆಯಬೇಕು. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ತಾಳ್ಮೆಯಂದ ಸಚಿವರನ್ನು ಆಯ್ಕೆ ಮಾಡಿದೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.

ಸಂಪುಟ ಪುನಾರಚನೆಯಲ್ಲಿ ಮೂವರು ಮಹಿಳೆಯರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಆದರೆ ಪ್ರಮಾಣ ಕಡಿಮೆಯಾಗಿದೆ ಅನ್ನೋ ಕೂಗು ಕೇಳಿಬಂದಿದೆ. ಶೇಕಾಡ 33 ರಷ್ಟು ಮಹಿಳಾ ಮೀಸಲಾತಿ ಸಿಕ್ಕಿಲ್ಲ. ಈ ಮೂಲಕ ರಾಜಸ್ಥಾನ ಸಚಿವ ಸಂಪುಟ ಮಹಿಳೆಯರ ವಿಚಾರದಲ್ಲಿ ಸಮತೋಲ ಕಾಪಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ದಿಯಲ್ಲಿ ಮಹಿಳಾ ಸಚಿವರ ಪಾತ್ರ ಪ್ರಮುಖವಾಗಿದೆ. ಆದರೆ ಇದನ್ನು ಅಶೋಕ್ ಗೆಹ್ಲೋಟ್ ಸರ್ಕಾರ ಕಡೆಗಣಿಸಿದಂತಿದೆ ಅನ್ನೋ ಮಾತುಗಳು ಕೇಳಿಬಂದಿದೆ.
 

Follow Us:
Download App:
  • android
  • ios