ಜೈಪುರದ ಬಾಲಾಪರಾಧಿ ಜೈಲಿನಿಂದ 22 ಅಪ್ರಾಪ್ತ ಬಾಲಕರು ಎಸ್ಕೇಪ್, ಹುಡುಕಾಟ
ಜೈಪುರದ ಬಾಲಾಪರಾಧಿ ಜೈಲಿನಿಂದ 22 ಅಪ್ರಾಪ್ತ ಬಾಲಕರು ಕಿಟಕಿ ಒಡೆದು ಪರಾರಿಯಾಗಿರುವ ಘಟನೆ ಫೆ.12ರಂದು ನಡೆದಿದೆ. ತಪ್ಪಿಸಿಕೊಂಡ ಬಾಲಕರ ಪೈಕಿ ಎಂಟು ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 13 ಮಂದಿ ಬಾಲಕರ ವಿರುದ್ಧ ಕೊಲೆ ಯತ್ನದ ತನಿಖೆ ನಡೆಯುತ್ತಿದೆ.
ಜೈಪುರದ ಬಾಲಾಪರಾಧಿ ಜೈಲಿನಿಂದ 22 ಅಪ್ರಾಪ್ತ ಬಾಲಕರು ಕಿಟಕಿ ಒಡೆದು ಪರಾರಿಯಾಗಿರುವ ಘಟನೆ ಫೆ.12ರಂದು ನಡೆದಿದೆ. ತಪ್ಪಿಸಿಕೊಂಡ ಬಾಲಕರ ಪೈಕಿ ಎಂಟು ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 13 ಮಂದಿ ಬಾಲಕರ ವಿರುದ್ಧ ಕೊಲೆ ಯತ್ನದ ತನಿಖೆ ನಡೆಯುತ್ತಿದೆ. ಮತ್ತೋರ್ವ ಅಪ್ರಾಪ್ತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ತಪ್ಪಿಸಿಕೊಂಡ ಪ್ರತಿಯೊಬ್ಬರ ವಯಸ್ಸು 12 ರಿಂದ 16 ವರ್ಷಗಳು ಎಂದು ತಿಳಿದುಬಂದಿದೆ.
ಜೈಪುರದ ಸೇಥಿ ಕಾಲೋನಿಯಲ್ಲಿರುವ ಬಾಲಾಪರಾಧಿ ಗೃಹದಲ್ಲಿ ಈ ಘಟನೆ ನಡೆದಿದೆ. ಸಿಬ್ಬಂದಿಯಿಂದ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದಿದ್ದು ಅಪ್ರಾಪ್ತರಿಗಾಗಿ ಹುಡುಕಾಟ ನಡೆಸಿದ್ದಾರೆ.
ನಟ ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆ ಖರೀದಿಸಿದ 24 ಹರೆಯದ ಸೋಷಿಯಲ್ ...
ಬೆಳಿಗ್ಗೆ 4 ರಿಂದ 5 ರ ನಡುವೆ ಹುಡುಗರು ಕಿಟಕಿಯ ಬಲೆ ಕತ್ತರಿಸಿ ಪರಾರಿಯಾಗಿದ್ದಾರೆ. ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಾಪರಾಧಿ ಗೃಹದಿಂದ ಅಪ್ರಾಪ್ತ ಮಕ್ಕಳ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಪ್ರಾಪ್ತರು ಬಾಲಾಪರಾಧಿಗೃಹದಿಂದ ಒಟ್ಟಿಗೆ ಪರಾರಿಯಾಗಿರುವುದು ಇದೇ ಮೊದಲಾಗಿದೆ. ಕೆಲವು ಹೊರಗಿನವರು ಅಪ್ರಾಪ್ತರನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಓಡಿಹೋದ ಮಕ್ಕಳು ಸುಮಾರು ಎರಡು ವರ್ಷಗಳಿಂದ ಬಾಲಾಪರಾಧಿಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅತ್ಯಂತ ಹೆಚ್ಚು ಆದಾಯವಿರೋ ಕಂಪನಿಗಳ ಪಟ್ಟಿ ಬಿಡುಗಡೆ, ರಿಲಯನ್ಸ್ ಟಾಪ್, ಕರ್ನಾಟಕದ ನವೋದ್ಯಮವೇ ಪ್ರಾಬಲ್ಯ!
ಮೊದಲು ಅಪ್ರಾಪ್ತರು ಕಿಟಕಿಯ ಬಲೆಯನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಬಳಿಕ ಒಡೆದು ಓಡಿ ಹೋಗಿದ್ದಾರೆ. ಹಿರಿಯ ಅಧಿಕಾರಿಗಳು ಪೊಲೀಸ್ ತಂಡ ರಚಿಸಿ ಅಪ್ರಾಪ್ತರ ಮನೆಗಳಿಗೆ, ಕೆಲ ಅಡಗುತಾಣಗಳಿಗೆ ಕಳುಹಿಸಿದ್ದು, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇವೆಲ್ಲದ ಮಧ್ಯೆ ಕರ್ತವ್ಯದಲ್ಲಿದ್ದ ಬಾಲಾಪರಾಧಿ ಗೃಹದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾಕೆಂದರೆ ಗ್ಯಾಸ್ ಕಟರ್‌ನಿಂದ ಕಿಟಕಿಯ ಸರಳು ಕಟ್ ಮಾಡಿದ್ದು, ಕಾಂದ ಕೈಯ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.