* ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಮಹತ್ವದ ಘೋಷಣೆ* ಆಜಾನ್ ಕೇಳಿದರೆ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ * ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ಸರ್ಕಾರಕ್ಕೆ ಗಡುವು ನೀಡಿದ್ದ ಠಾಕ್ರೆ
ಮುಂಬೈ(ಮೇ.04): ಮೇ 4ರಿಂದ ಯಾವ ಮಸೀದಿಗಳ ಮೇಲೆ ಲೌಡ್ ಸ್ಪೀಕರ್‌ಗಳ ಮೂಲಕ ಆಜಾನ್ ಕೂಗಲಾಗುತ್ತದೆಯೋ ಅಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ಮಹಾರಾಷ್ಟ್ರ ನವನಿರ್ಮಾನ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಮೇ 4ರೊಳಗೆ ಮಸೀದಿಗಳ ಮೇಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ಅವರು ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಬೆಂಬಲಿಗರಿಗೆ ಈ ಕರೆ ನೀಡಿದ್ದಾರೆ.
‘ಲೌಡ್ ಸ್ಪೀಕರ್‌ಗಳಲ್ಲಿ ಆಜಾನ್ ಕೇಳಿಸಿದರೆ, ಆ ಪ್ರದೇಶಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪ್ರಸಾರ ಮಾಡಿ ಎಂದು ನಾನೂ ಹಿಂದೂಗಳಲ್ಲಿ ಮನವಿ ಮಾಡ್ತುತೇನೆ. ಆಗಷ್ಟೇ ಅವರಿಗೆ ಈ ಧ್ವನಿವರ್ಧಕಗಳ ಅಡಚಣೆ ಏನೆಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಲೌಡ್ ಸ್ಪೀಕರ್ ವಿವಾದ: ರಾಜ್ ಠಾಕ್ರೆ ವಿರುದ್ಧ ಪ್ರಕರಣ ದಾಖಲು
ಮೇ 4ರೊಳಗೆ ಮಸೀದಿಗಳ ಮೇಲಿನ ಲೌಡ್‌ಸ್ಪೀಕರ್ ತೆರವು ಮಾಡಬೇಕು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಎಂಎನ್‌ಎಸ್ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಔರಂಜಅಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ ಠಾಕ್ರೆ ಅವರ ವಿರುದ್ಧ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 (ದಂಗೆಗೆ ಉದ್ದೇಶಪೂರ್ವಕ ಪ್ರಚೋದನೆ), 116(ಅಪರಾಧಕ್ಕೆ ಪ್ರಚೋದನೆ), 117 (10ಕ್ಕಿಂತ ಹೆಚ್ಚು ಜನರಿಂದ ಅಪರಾಧಕ್ಕೆ ಕುಮ್ಮಕ್ಕು)ಗಳಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ರಾಜ್ ಠಾಕ್ರೆ ಅವರ ರಾರಯಲಿಯ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮೇ 1ರಂದು ನಡೆದ ರಾರಯಲಿಯಲ್ಲಿ, ಮೇ 4ರೊಳಗೆ ಮಸೀದಿಗಳ ಮೇಲಿಂದ ಲೌಡ್ ಸ್ಪೀಕರ್ ತೆಗೆಯದಿದ್ದರೆ, ಮಸೀದಿಗಳ ಎದುರು ಹನುಮಾನ್ ಚಾಲೀಸಾ ಪಠಣೆ ಮಾಡಿ ಎಂದು ಕರೆ ನೀಡಿದ್ದರು. ಈ ನಡುವೆ ರಾಜ್ ಠಾಕ್ರೆ ಅವರ ವಿರುದ್ಧ ಮುಂದಿನ ಕ್ರಮಗಳನ್ನು ತೆಗೆದುಕೊಂಡರೆ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಎಂಎನ್‌ಎಸ್ ಪಕ್ಷದ ನಾಯಕರು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ನಿಂಗ್
ಬೃಹತ್ ರಾರಯಲಿ ಉದ್ದೇಶಿಸಿ ಮಾತನಾಡಿದ ರಾಜ್‌ಠಾಕ್ರೆ, ‘ಮೇ. 3 ರ ನಂತರವೂ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸದಿದ್ದರೆ, ಮಸೀದಿಗಳ ಮೇಲೆಯೇ ಧ್ವನಿವರ್ಧಕದಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಎಲ್ಲ ಹಿಂದೂಗಳು ಹನುಮಾನ್ ಚಾಲೀಸಾವನ್ನು ನುಡಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ
‘ಧ್ವನಿವರ್ಧಕಗಳ ವಿವಾದವು ಧಾರ್ಮಿಕವಲ್ಲ, ಸಾಮಾಜಿಕ ವಿಚಾರವಾಗಿದೆ. ಮಸೀದಿಯ ಮೇಲಿರುವ ಎಲ್ಲ ಧ್ವನಿವರ್ಧಕಗಳು ಅಕ್ರಮವಾಗಿವೆ. ಅಲ್ಲೇನು ಸಂಗೀತ ಕಾರ್ಯಕ್ರಮ ನಡೆಯುತ್ತಿದೆಯೇ ಧ್ವನಿವರ್ಧಕಗಳನ್ನು ಹಚ್ಚಲು? ಉತ್ತರ ಪ್ರದೇಶದಲ್ಲಿ ಈಗಾಗಲೇ ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದಾರೆ. ಆದರೆ ಮಹಾರಾಷ್ಟ್ರದಲ್ಲೇಕೆ ಅಡ್ಡಿಯಾಗುತ್ತಿದೆ’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.
