Asianet Suvarna News Asianet Suvarna News

ರೈಲು ಬರುವ ವೇಳೆ ಹಳಿ ದಾಟುತ್ತಿದ್ದ ಇಬ್ಬರು ವೃದ್ಧೆಯರ ರಕ್ಷಣೆ: ವೈರಲ್ ವಿಡಿಯೋ

ರೈಲು ಬರುವ ವೇಳೆ ಹಳಿ ದಾಟುತ್ತಿದ್ದ ಇಬ್ಬರು ವೃದ್ಧರನ್ನು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನ ಹಾಗೂ ರೈಲ್ವೆ ಪೊಲೀಸರು ರಕ್ಷಿಸಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Railway police saved two elderly women in Hoshangabad railway station in Madhya Pradesh watch viral video akb
Author
First Published Dec 22, 2022, 3:15 PM IST

ಭೋಪಾಲ್: ರೈಲು ಬರುತ್ತಿರುವ ವೇಳೆ ಹಳಿ ದಾಟಬೇಡಿ, ಹಳಿಗಳ ಮೇಲೆ ಓಡಾಡಬೇಡಿ, ಚಲಿಸುವ ರೈಲನ್ನು ಏರಲು ಇಳಿಯಲು ಹೋಗಬೇಡಿ ಹೀಗೆ ರೈಲ್ವೆ ಇಲಾಖೆ ಎಲ್ಲಾ ರೈಲು ನಿಲ್ದಾಣಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿರುತ್ತದೆ. ಇದರ ಜೊತೆ ಮೈಕ್‌ಗಳಲ್ಲಿಯೂ ಘೋಷಣೆ ಮಾಡುತ್ತಿರುತ್ತದೆ. ಹೀಗಿದ್ದೂ ಕೂಡ ಅನೇಕರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಹೋಗಿ ಅನಾಹುತ ಸೃಷ್ಟಿಸಿಕೊಂಡವರಿದ್ದಾರೆ. ಹೀಗೆ ದುರಂತದಲ್ಲಿ ಸಿಲುಕಿಕೊಂಡ ಅನೇಕರನ್ನು ಕೊನೆ ಕ್ಷಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ಅದೇ ರೀತಿ ರೈಲು ಈಗ ರೈಲು ಬರುವ ವೇಳೆ ಹಳಿ ದಾಟುತ್ತಿದ್ದ ಇಬ್ಬರು ವೃದ್ಧರನ್ನು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನ ಹಾಗೂ ರೈಲ್ವೆ ಪೊಲೀಸರು ರಕ್ಷಿಸಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ (Madhya Pradesh) ಹೊಶಂಗಾಬಾದ್ (Hoshangabad) ರೈಲು ನಿಲ್ದಾಣದಲ್ಲಿ (Railway Station) ಈ ಘಟನೆ ನಡೆದಿದ್ದು, ಈ ವಿಡಿಯೋವನ್ನು ಭಾರತೀಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸುರಕ್ಷತೆಯೇ ಮೊದಲ ಆದ್ಯತೆ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಮಹಿಳೆಯರು ರೈಲು ಹಳ್ಳಿಯನ್ನು ದಾಟುತ್ತಾ ಫ್ಲಾಟ್‌ಫಾರ್ಮ್‌ನತ್ತ ಬರುತ್ತಿದ್ದಾರೆ ಅಷ್ಟರಲ್ಲಿ ದೂರದಲ್ಲಿ ರೈಲು ಬರುವುದು ಕಾಣಿಸುತ್ತಿದೆ. ಈ ವೃದ್ಧ ಜೀವಗಳನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಓಡಿ ಹೋಗಿ ಅವರನ್ನು ಓಡಿ ಬರುವಂತೆ ಹೇಳಿದ್ದಲ್ಲದೇ ನಂತರ ಅವರನ್ನು ಹಳಿಯಿಂದ ಮೇಲೆತ್ತಿ ಫ್ಲಾಟ್‌ಫಾರ್ಮ್‌ಗೆ ಏರಿಸುತ್ತಾರೆ. 

ಈ ರೈಲ್ವೆ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಭಾರತೀಯ ರೈಲ್ವೆ ಸಚಿವಾಲಯ ಶ್ಲಾಘಿಸಿದ್ದು, ಸುರಕ್ಷತೆಯೇ ಮೊದಲ ಆದ್ಯತೆ, ಆರ್‌ಪಿಎಫ್ (RPF) ಹಾಗೂ ಜಿಆರ್‌ಪಿ (GRP)ಸಿಬ್ಬಂದಿ ಇಬ್ಬರು ವೃದ್ಧ ಮಹಿಳೆಯರನ್ನು ರಕ್ಷಿಸಿದ್ದಾರೆ. ಇಬ್ಬರು ಮಹಿಳೆಯರು ಹೊಶಂಗಬಾದ್ ರೈಲ್ವೆ ಸ್ಟೇಷನ್‌ನಲ್ಲಿ ರೈಲು ಹಳಿಯನ್ನು ದಾಟುತ್ತಿದ್ದರು.  ರೈಲು ನಿಲ್ದಾಣದಲ್ಲಿ ಒಂದು ಫ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಫ್ಲಾಟ್‌ಫಾರ್ಮ್‌ಗೆ (platform)ತೆರಳುವಾಗ ಹಳಿಯ ಬದಲು ರೈಲ್ವೆ ಮೇಲ್ಸೇತುವೆಯನ್ನು ಬಳಸಿ  ಎಂದು ಅವರು ಮನವಿ ಮಾಡಿದ್ದಾರೆ . 

ಈ ವಿಡಿಯೋವನ್ನು 52 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಚಲಿಸುತ್ತಿರುವ ರೈಲು ಏರಲು ಹೋಗಿ ಅಮ್ಮ ಮಗಳಿಬ್ಬರು ರೈಲಿನಿಂದ ಫ್ಲಾಟ್‌ಫಾರ್ಮ್‌ಗೆ ಬಿದ್ದಿದ್ದರು. ಕೂಡಲೇ ರೈಲ್ವೆ ಸಿಬ್ಬಂದಿ ಹಾಗೂ ಅಲ್ಲಿದ್ದ ಕೆಲ ಪ್ರಯಾಣಿಕರು ಓಡಿ ಹೋಗಿ ತಾಯಿ ಮಗಳನ್ನು ಪಾರು ಮಾಡಿದ್ದರು. ಮುಂಬೈನ ವಾಸಿ ರಸ್ತೆ ರೈಲ್ವೆ ನಿಲ್ದಾಣದಲ್ಲಿ ( Vasai Road Station) ಡಿಸೆಂಬರ್ 13 ರಂದು ಈ ಘಟನೆ ನಡೆದಿತ್ತು. ಈ ಅಪಾಯಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ವಾರೆ ವ್ಹಾ ಬೆಂಗಳೂರು-ಉಡುಪಿ ರೈಲುಮಾರ್ಗ ಎಷ್ಟು ಚೆಂದ, ಡ್ರೋನ್ ಸೆರೆಹಿಡಿದ ವಿಡಿಯೋ ವೈರಲ್

ಈ ವಿಡಿಯೋವನ್ನು ಬಳಸಿಕೊಂಡು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮತ್ತೆ ಜಾಗೃತಿ ಮೂಡಿಸುತ್ತಿದೆ. ಅನೇಕರು ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಏಕೆ ಅಷ್ಟೊಂದು ಆತುರ ಎಂದು ಪ್ರಶ್ನಿಸಿದ್ದರು. ಜೀವವನ್ನು ಅಪಾಯಕ್ಕಿಟ್ಟು ರೈಲೇರುವ ಸಾಹಸವೇಕೆ ಎಂದು ಕೆಲವರು ಕೇಳಿದ್ದರು. ಇಂತಹ ಸಾಹಸ ಮಾಡುವ ಮೊದಲು ತಮ್ಮ ದೈಹಿಕ ಸ್ಥಿರತೆಯ ಬಗ್ಗೆ ಗಮನಹರಿಸಬೇಕು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅನೇಕರು ಅಮ್ಮ ಮಗಳನ್ನು ರಕ್ಷಿಸಿದ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಕೆಲ ಪ್ರಯಾಣಿಕರ ಕಾರ್ಯವನ್ನು ಶ್ಲಾಘಿಸಿದ್ದರು.

ಮುಂದಿನ ವರ್ಷ ದೇಶದ ಮೊದಲ ಹೈಡ್ರೋಜನ್‌ ಚಾಲಿತ ರೈಲಿಗೆ ಚಾಲನೆ

ಕೆಲದಿನಗಳ ಹಿಂದೆ ಮಹಾರಾಷ್ಟ್ರದ(Maharashtra) ಗೊಂಡಿಯಾ (Gondia) ರೈಲು ನಿಲ್ದಾಣದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯಲು ಹೋಗಿ ಕೆಳಗೆ ಬಿದ್ದಿದ್ದರು, ಕೂಡಲೇ ಅಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಮಹಿಳೆ ಹಳಿಗೆ ಬೀಳುವ ಮೊದಲು ಆಕೆಯನ್ನು ಪಕ್ಕಕ್ಕೆ ಎಳೆದು ರಕ್ಷಣೆ ಮಾಡಿದ್ದರು.               
 

Follow Us:
Download App:
  • android
  • ios