ರೈಲಿನಲ್ಲಿ ಪ್ರಯಾಣಿಕರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಘಟನೆ, ಚಲಿಸುತ್ತಿದ್ದ ಸ್ಕೂಟರ್ ಮೇಲೆ ಕರೆಂಟ್ ಕಂಬ ಬಿದ್ದ ಘಟನೆ ಹಾಗೂ ಪಂಜಾಬ್‌ನಲ್ಲಿ ನೀರಿನಲ್ಲಿ ಕೊಚ್ಚಿಹೋದ ಯುವಕರು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೆಲ ಘಟನೆಗಳ ವೀಡಿಯೋ ಇಲ್ಲಿದೆ ನೋಡಿ.

ದೆಹಲಿ/ಪಂಜಾಬ್‌/ಬಿಹಾರ: ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಹೊರಗೆ ನಿಂತು ಕೋಲಿನಿಂದ ಹಲ್ಲೆ ಮಾಡಿದ ಇಬ್ಬರು ದುರುಳರನ್ನು ಪೊಲೀಸರು ಬಂಧಿಸಿದ್ದಾರೆ. ರೀಲ್ಸ್‌ಗಾಗಿ ಆರೋಪಿಗಳು ಈ ಕೃತ್ಯವೆಸಗಿದ್ದು, ರೀಲ್ಸ್ ನೋಡಿದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ಕಂಬಿ ಹಿಂದೆ ಕೂರಿಸಿದ್ದಾರೆ. ಬಿಹಾರದ ಭೋಜ್‌ಪುರ ಜಿಲ್ಲೆಯ ನಗ್ರಿ ಹಾಲ್ಟ್‌ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದ ಜನರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅದನ್ನು ರೆಕಾರ್ಡ್ ಮಾಡಿ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿತ್ತು.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡು ರೈಲ್ವೆ ರಕ್ಷಣಾ ಪಡೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರ ಗುರುತು ಪತ್ತೆ ಮಾಡಿಲ್ಲ. ಈ ಬಗ್ಗೆ ರೈಲ್ವೆ ರಕ್ಷಣಾ ಪಡೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ರೈಲಿನ ಪ್ರಯಾಣಿಕರ ಮೇಲೆ ದಾಳಿ ಮಾಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಬಿಹಾರದ ನಗ್ರಿಹಾಲ್ಟ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ರೈಲು ಸಾಗುತ್ತಿದ್ದಾಗ ಆರೋಪಿಗಳು ಪ್ರಯಾಣಿಕರ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವೀಡಿಯೋ ಸಹಿತ ಆರ್‌ಪಿಎಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ವೈರಲ್ ಆದ ವೀಡಿಯೋದಲ್ಲಿ ಯುವಕನೋರ್ವ ರೈಲು ಚಲಿಸುತ್ತಿರುವಾಗ ರೈಲಿನ ಬಾಗಿಲಲ್ಲಿ ನಿಂತು ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೇಲೆ ಕೋಲಿನಿಂದ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ರೀಲ್ಸ್‌ಗಾಗಿಯೇ ಮಾಡಲಾಗಿದೆ. ಇಂತಹ ಕೃತ್ಯಗಳು ಇತರರ ಜೀವನಕ್ಕೆ ಹಾನಿ ಮಾಡುತ್ತದೆ ಇಂತಹ ಸಾಹಸಗಳನ್ನು ಪ್ರಯತ್ನಿಸದಂತೆ ರೈಲ್ವೆ ಇಲಾಖೆ ಹೇಳಿದೆ.

ಈ ವೀಡಿಯೋಗೆ ಭಾರಿ ಅಸಮಾಧಾನ ವ್ಯಕ್ತವಾಗಿದ್ದು, ಈ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೋಡುಗರು ಆಗ್ರಹಿಸಿದ್ದಾರೆ. ಕೆಲವು ಬಳಕೆದಾರರು ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹವರು ತಮ್ಮ ಮನೋರಂಜನೆಗಾಗಿ ಇತರ ಪ್ರಯಾಣಿಕರನ್ನು ಸಾಯಿಸಲುಬಹುದು. ಬೇರೆಯವರ ಪ್ರಾಣಕ್ಕೆ ಕಂಟಕ ತಂಡೊಡ್ಡುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚಲಿಸುತ್ತಿದ್ದ ಸ್ಕೂಟರ್ ಮೇಲೆ ಉರುಳಿ ಬಿದ್ದ ಕರೆಂಟ್ ಕಂಬ:

ಮತ್ತೊಂದು ವೈರಲ್ ಆದ ವೀಡಿಯೋದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಕರೆಂಟ್ ಕಂಬವೊಂದು ಬಿದ್ದಿದ್ದು, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆ ಕೂದಲೆಳೆ ಅಂತರದಿಂದ ಅನಾಹುತದಿಂದ ಪಾರಾಗಿದ್ದಾರೆ. ಪಶ್ಚಿಮ ದೆಹಲಿಯ ಟ್ಯಾಗೋರ್ ಗಾರ್ಡನ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕರೆಂಟ್ ಕಂಬ ಬೀಳುವುದಕ್ಕೂ ಮೊದಲು ಸ್ಕೂಟರ್ ಹಾಗೂ ಕಾರೊಂದು ಪಾಸಾಗಿ ಹೋಗಿದೆ. ಇವುಗಳ ಹಿಂದೆ ಬಂದ ಸ್ಕೂಟರ್ ಮೇಲೆ ಕರೆಂಟ್ ಕಂಬ ಬಿದ್ದಿದೆ. ಘಟನೆಯಲ್ಲಿ ಸ್ಕೂಟರ್ ಸವಾರಿ ಮಹಿಳೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಕರೆಂಟ್ ಕಂಬ ಸ್ಕೂಟರ್ ಕಂಬದ ಮೇಲೆ ಬಿದ್ದ ಕೂಡಲೇ ಅಲ್ಲಿದ್ದ ಸ್ತಳೀಐರು ಓಡಿ ಬಂದು ಮಹಿಳೆಯನ್ನು ಕರೆಂಟ್ ತಾಗದಂತೆ ರಕ್ಷಣೆ ಮಾಡಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋದ ಯುವಕರು

ಹಾಗೆಯೇ ಪಂಜಾಬ್‌ನಲ್ಲಿ ನಡೆದ ಮತ್ತೊಂದು ಮಳೆ ಸಂಬಂಧಿ ಘಟನೆಯ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಲುವೆಯೊಂದರ ಮೇಲಿನ ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಬೈಕ್‌ ಸವಾರರಿಬ್ಬರು ಅದನ್ನು ದಾಟುವುದಕ್ಕೆ ಹೋಗಿದ್ದಾರೆ. ಆದರೆ ಬೈಕ್ ನಡುವೆಯೇ ನಿಯಂತ್ರಣ ಕಳೆದುಕೊಂಡಿದ್ದು, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಬೈಕ್ ಸವಾರರ ರಕ್ಷಣೆಗೆ ಓಡಿ ಬಂದಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಘಟನೆ ನಡೆದಿದ್ದು, ಘಟನೆಯ ವೀಡಿಯೋವು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Scroll to load tweet…


View post on Instagram



View post on Instagram