ನವದೆಹಲಿ(ಜ.08): ಕಳೆದ ವರ್ಷದ ಕೊರೋನಾ ಲಾಕ್‌ಡೌನ್‌ ವೇಳೆ ರೈಲು ಸಂಚಾರ ಸ್ತಬ್ಧವಾದ ಮಾರ್ಚ್ 21ರಿಂದ ಜೂ.31ರ ಅವಧಿಯಲ್ಲಿ ಕಾಯ್ದಿರಿಸಿ ರದ್ದುಗೊಳಿಸಲಾದ ರೈಲ್ವೆ ಟಿಕೆಟ್‌ನ ಪೂರ್ತಿ ಹಣದ ಹಿಂಪಡೆತಕ್ಕೆ ಇದ್ದ 6 ತಿಂಗಳ ಮಿತಿಯನ್ನು ಇದೀಗ ಕೇಂದ್ರ ಸರ್ಕಾರ ಮತ್ತೆ 3 ತಿಂಗಳಿಗೆ ವಿಸ್ತರಣೆ ಮಾಡಿದೆ. 

ರೈಲ್ವೆ ಕೌಂಟರ್‌ಗಳಲ್ಲಿ ರದ್ದುಗೊಳಿಸಿದ ರೈಲ್ವೆ ಟಿಕೆಟ್‌ನ ಹಣ ಮರುಪಾವತಿಗೆ ಗ್ರಾಹಕರು ಮುಗಿಬೀಳುತ್ತಿದ್ದು, ಇದರಿಂದ ಕೊರೋನಾ ವೇಗವಾಗಿ ಹಬ್ಬುವ ಭೀತಿಯಿದೆ. ಹೀಗಾಗಿ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಜನರ ಸರತಿ-ಸಾಲು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೊರೋನಾ ಅವಧಿಯಲ್ಲಿ ರೈಲ್ವೆ ಟಿಕೆಟ್‌ ಹಣ ಹಿಂಪಡೆತಕ್ಕೆ ಇದ್ದ 3 ದಿನಗಳ ಮಿತಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿತ್ತು.

ಇಂದಿನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ..!

ಇನ್ನು ಒಂದು ವೇಳೆ 139 ನಂಬರ್‌ಗೆ ಕರೆ ಮಾಡಿ ಟಿಕೆಟ್‌ ರದ್ದು ಪಡಿಸಿದ್ದರೆ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ರದ್ದು ಪಡಿಸಿದ್ದರೆ, ಹಣ ವಾಪಾಸ್‌ ಪಡೆಯಲು, 9 ತಿಂಗಳುಗಳ ಕಾಲ ಅವಕಾಶ ನೀಡಲಾಗಿದೆ. ಅಂದರೆ ಪ್ರಯಾಣಕ್ಕೆ ಗೊತ್ತು ಮಾಡಿದ ದಿನದಿಂದ 9 ತಿಂಗಳೊಳಗಾಗಿ ರಿಸರ್ವೇಸನ್‌ ಕೌಂಟರ್‌ಗೆ ತೆರಳಿ ಹಣವನ್ನು ವಾಪಾಸ್ ಪಡೆಯಬಹುದಾಗಿದೆ.