2025ರ ಬಜೆಟ್‌ನಲ್ಲಿ ಒಟ್ಟು ₹2,65,200 ಕೋಟಿ ಹಣವನ್ನು ರೈಲ್ವೆಸ್‌ಗೆ ಮೀಸಲಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ ₹23,778ಕೋಟಿ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶಗಳಿಗೆ ನಂತರದ ಸ್ಥಾನ ಸಿಕ್ಕಿದೆ.
ರೈಲ್ವೆ ಬಜೆಟ್ 2025: 2025-26ರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಈವರೆಗಿನ ಅತಿ ಹೆಚ್ಚು ಹಣ ಮೀಸಲಿಡಲಾಗಿದೆ. ಈ ವರ್ಷ ₹2,65,200 ಕೋಟಿ ರೂಪಾಯಿಗಳನ್ನು ರೈಲ್ವೆಗೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ, ಕವಚ್ ATP (ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ), ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣ, ದೇಶದ ಮೂಲೆ ಮೂಲೆಗಳಿಗೆ ರೈಲು ಸಂಪರ್ಕ ವಿಸ್ತರಣೆ ಮುಂತಾದವುಗಳಿಗೆ ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
ರಾಜ್ಯವಾರು ಹಣಕಾಸು ಹಂಚಿಕೆ: ಸೋಮವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 2025ರ ರೈಲ್ವೆ ಬಜೆಟ್‌ನ ರಾಜ್ಯವಾರು ಹಂಚಿಕೆಯನ್ನು ಘೋಷಿಸಿದರು. ರೈಲ್ವೆ ನಿಲ್ದಾಣಗಳ ಆಧುನೀಕರಣ, ವಿದ್ಯುದ್ದೀಕರಣ, ರೈಲು ಮಾರ್ಗಗಳನ್ನು ಡಬಲ್ ಮಾಡುವುದು ಮತ್ತು ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಹಣವನ್ನು ಬಳಸಲಾಗುವುದು ಎಂದು ಅವರು ತಿಳಿಸಿದರು. ಭಾರತೀಯ ರೈಲ್ವೆಯನ್ನು ವಿಶ್ವದರ್ಜೆಯ ಸಾರಿಗೆ ಜಾಲವನ್ನಾಗಿ ಮಾಡುವುದು ಸರ್ಕಾರದ ಗುರಿ ಎಂದು ರೈಲ್ವೆ ಸಚಿವರು ಹೇಳಿದರು. ಇದು ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತದೆ.
ಮಹಾಕುಂಭ ಮೇಳದ ವೇಳೆ ಉಚಿತ ರೈಲು ಪ್ರಯಾಣ, ರೈಲ್ವೇಸ್ ಸ್ಪಷ್ಟೀಕರಣ ಇಲ್ಲಿದೆ!
ರಾಜ್ಯಗಳಿಗೆ ರೈಲ್ವೆ ಬಜೆಟ್‌ನಿಂದ ಹಂಚಿಕೆಯಾದ ಹಣದಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಹಣ ಸಿಕ್ಕಿದೆ. ಇಲ್ಲಿ ₹23,778 ಕೋಟಿ ರೂಪಾಯಿಗಳನ್ನು ರೈಲ್ವೆ ಖರ್ಚು ಮಾಡಲಿದೆ. ನಂತರ ಉತ್ತರ ಪ್ರದೇಶ (₹19,858 ಕೋಟಿ), ಗುಜರಾತ್ (₹17,155 ಕೋಟಿ) ಮತ್ತು ಮಧ್ಯಪ್ರದೇಶ (₹14,745 ಕೋಟಿ) ಸ್ಥಾನ ಪಡೆದಿವೆ.
ಕರಾವಳಿಗೆ ಬಿಗ್ ನ್ಯೂಸ್. ಭಾರತೀಯ ರೈಲ್ವೇಸ್‌ನೊಂದಿಗೆ ಕೊಂಕಣ್ ರೈಲ್ವೇ ವಿಲೀನಕ್ಕೆ ಕರ್ನಾಟಕ ಸರ್ಕಾರ ಒಪ್ಪಿಗೆ
ರೈಲ್ವೆ ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ಎಷ್ಟು ಹಣ?
ಉತ್ತರ ಪ್ರದೇಶ – 19,858 ಕೋಟಿ ರೂ.
ಗುಜರಾತ್ – 17,155 ಕೋಟಿ ರೂ.
ಪಶ್ಚಿಮ ಬಂಗಾಳ – 13,955 ಕೋಟಿ ರೂ.
ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು – 10,440 ಕೋಟಿ ರೂ.
ಜಮ್ಮು ಮತ್ತು ಕಾಶ್ಮೀರ – 844 ಕೋಟಿ ರೂ.
ಆಂಧ್ರಪ್ರದೇಶ – 9,417 ಕೋಟಿ ರೂ.
ಬಿಹಾರ – 10,066 ಕೋಟಿ ರೂ.
ಛತ್ತೀಸ್‌ಗಢ – 6,925 ಕೋಟಿ ರೂ.
ದೆಹಲಿ – 2,593 ಕೋಟಿ ರೂ.
ಗೋವಾ – 482 ಕೋಟಿ ರೂ.
ಹರಿಯಾಣ – 3,416 ಕೋಟಿ ರೂ.
ಹಿಮಾಚಲ ಪ್ರದೇಶ – 2,716 ಕೋಟಿ ರೂ.
ಜಾರ್ಖಂಡ್ – 7,302 ಕೋಟಿ ರೂ.
ಕೇರಳ – 3,042 ಕೋಟಿ ರೂ.
ಮಧ್ಯಪ್ರದೇಶ – 14,745 ಕೋಟಿ ರೂ.
ಒಡಿಶಾ – 10,559 ಕೋಟಿ ರೂ.
ಪಂಜಾಬ್ – ರು. 5,421 ಕೋಟಿ
ರಾಜಸ್ಥಾನ – 9,960 ಕೋಟಿ ರೂ
ತಮಿಳುನಾಡು – 6,626 ಕೋಟಿ ರೂ
ತೆಲಂಗಾಣ – 5,337 ಕೋಟಿ ರೂ
ಉತ್ತರಾಖಂಡ – 4,641 ಕೋಟಿ ರೂ
