ಮಹಾಕುಂಭ ಮೇಳದ ವೇಳೆ ಉಚಿತ ರೈಲು ಪ್ರಯಾಣ, ರೈಲ್ವೇಸ್‌ ಸ್ಪಷ್ಟೀಕರಣ ಇಲ್ಲಿದೆ!

ಮಹಾಕುಂಭ ಮೇಳದಲ್ಲಿ ಉಚಿತ ರೈಲು ಪ್ರಯಾಣದ ಸುದ್ದಿಗಳನ್ನು ರೈಲ್ವೆ ಅಲ್ಲಗೆಳೆದಿದೆ. ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ ಅಂತ ರೈಲ್ವೆ ಸ್ಪಷ್ಟಪಡಿಸಿದೆ.

Indian Railways Debunks Free Travel Rumors for Maha Kumbh Mela 2025 san

ನವದೆಹಲಿ (ಡಿ.19): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಲಿದೆ. ರೈಲ್ವೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದೆ ಅಂತ ಸುದ್ದಿ ಹಬ್ಬುತ್ತಿತ್ತು. ಜನರಲ್‌ ಬೋಗಿಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಬಹುದು, 200-250 ಕಿ.ಮೀ. ದೂರದ ಪ್ರಯಾಗ್‌ರಾಜ್‌ಗೆ ಟಿಕೆಟ್‌ ಬೇಕಿಲ್ಲ ಅಂತೆಲ್ಲಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ರೈಲ್ವೆ ಇಲಾಖೆ ಬುಧವಾರ ಹೇಳಿಕೆ ಬಿಡುಗಡೆ ಮಾಡಿ ಸತ್ಯವನ್ನು ತಿಳಿಸಿದೆ. ಇಂಥ ವರದಿಗಳನ್ನು "ಸುಳ್ಳು" ಎಂದು ತಿಳಿಸಿದೆ. ಮಹಾಕುಂಭ ಮೇಳದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇಲ್ಲ ಅಂತ ಸ್ಪಷ್ಟಪಡಿಸಿದೆ.

ಉಚಿತ ಪ್ರಯಾಣದ ಸುದ್ದಿ ಸುಳ್ಳು: ಕೆಲವು ಮಾಧ್ಯಮಗಳಲ್ಲಿ ಮಹಾಕುಂಭ ಮೇಳದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇದೆ ಅಂತ ಸುದ್ದಿ ಹಬ್ಬಿಸುತ್ತಿವೆ. ಭಾರತೀಯ ರೈಲ್ವೆ ಈ ಸುದ್ದಿಗಳನ್ನು ತಳ್ಳಿ ಹಾಕುತ್ತದೆ. ಇವು ಸಂಪೂರ್ಣ ಸುಳ್ಳು ಮತ್ತು ತಪ್ಪು ಮಾಹಿತಿಗಳು ಅಂತ ರೈಲ್ವೆ ಹೇಳಿದೆ.

ಮಹಾಕುಂಭ ಮೇಳದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇಲ್ಲ: ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ. ಮಹಾಕುಂಭ ಮೇಳ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇಲ್ಲ ಅಂತ ರೈಲ್ವೆ ಸಚಿವಾಲಯ ಹೇಳಿದೆ. ಮಹಾಕುಂಭ ಮೇಳಕ್ಕೆ ಬರುವ ಯಾತ್ರಿಗಳಿಗೆ ಸುಗಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಬರುವ ನಿರೀಕ್ಷೆ ಇದೆ. ಹೀಗಾಗಿ ವಿಶೇಷ ವೇಟಿಂಗ್‌ ಏರಿಯಾ, ಹೆಚ್ಚುವರಿ ಟಿಕೆಟ್‌ ಕೌಂಟರ್‌ಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಅಂತ ರೈಲ್ವೆ ತಿಳಿಸಿದೆ.

ಫೆಬ್ರವರಿಯಲ್ಲೂ ಭೂಮಿಗೆ ಬರೋದಿಲ್ಲ ಸುನೀತಾ ವಿಲಿಯಮ್ಸ್‌, ಖಚಿತಪಡಿಸಿದ ನಾಸಾ!

ಮಹಾಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಬಾರಿ ಕೋಟ್ಯಂತರ ಜನರು ಪ್ರಯಾಗ್‌ರಾಜ್‌ಗೆ ಬರುವ ನಿರೀಕ್ಷೆ ಇದೆ. ಈ ಮೇಳ ಜನವರಿ 14 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮವಾಗುತ್ತವೆ.

ಟೊಯೋಟಾಗೆ ಟಕ್ಕರ್‌ ನೀಡಲು ವಿಲೀನವಾಗಲಿದ್ಯಾ ವಿಶ್ವಪ್ರಸಿದ್ಧ ಕಾರ್‌ ಬ್ರ್ಯಾಂಡ್‌ಗಳಾದ ಹೊಂಡಾ-ನಿಸ್ಸಾನ್‌-ಮಿತ್ಸುಬಿಷಿ?

Latest Videos
Follow Us:
Download App:
  • android
  • ios