ಸಾಲು ಸಾಲು ಹಬ್ಬಗಳ ಋತು ಆರಂಭಗೊಳ್ಳುತ್ತಿದೆ. ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಬಹುತೇಕರಿಕಾಗಿ ಭಾರತೀಯ ರೈಲ್ವೇ ಇದೀಗ ಗುಡ್ ನ್ಯೂಸ್ ನೀಡಿದೆ. ಹಬ್ಬದ ಸೀಸನ್‌ಗೆ ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆಗೆ ಟಿಕೆಟ್ ಬುಕಿಂಗ್‌ನಲ್ಲಿ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿದೆ.

ನವದೆಹಲಿ (ಆ.09) ಗಣೇಶ ಹಬ್ಬ, ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳ ಸೀಸನ್ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಭಾರತೀಯ ರೈಲ್ವೇ ಇದೀಗ ಪ್ರಯಾಣಿಕರಿಗೆ ರೌಂಡ್ ಟ್ರಿಪ್ ಪ್ಯಾಕೇಜ್ ಘೋಷಿಸಿದೆ. ವಿಶೇಷ ಅಂದರೆ ಪ್ಯಾಕೇಜ್ ಜೊತೆಗೆ ಟಿಕೆಟ್ ಬುಕಿಂಗ್ ವೇಳೆ ಶೇಕಡಾ 20 ರಷ್ಟು ಡಿಸ್ಕೌಂಟ್ ಆಫರ್ ನೀಡಲಾಗಿದೆ. ರೈಲ್ವೇ ಇಲಾಖೆಯ ಈ ಮಹತ್ವದ ಘೋಷಣೆಯಿಂದ ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುವ ಜನರಿಗೆ ಈ ಆಫರ್ ಪ್ರಯೋಜನವಾಗಲಿದೆ. ಇಷ್ಟೇ ಅಲ್ಲ ಹಬ್ಬದ ಸೀಸನ್ ವೇಳೆ ಹೆಚ್ಚುವರಿ ರೈಲು ಸೇವೆಯನ್ನು ನೀಡಲಾಗುತ್ತದೆ.

ಟಿಕೆಟ್ ಬುಕಿಂಗ್‌ನಲ್ಲಿ ಶೇಕಡಾ 20 ರಷ್ಟು ಡಿಸ್ಕೌಂಟ್

ಈ ವಿಶೇಷ ಆಫರ್ ಮೂಲಕ ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಶೇಕಡಾ 20 ರಷ್ಟು ಡಿಸ್ಕೌಂಟ್ ಸಿಗಲಿದೆ. ಇದಕ್ಕಾಗಿ ಪ್ರಯಾಣಿಕರು ರಿಟರ್ನ್ ಟಿಕೆಟ್ ಬುಕಿಂಗ್ ಮಾಡಿದವರಿಗೆ ಡಿಸ್ಕೌಂಟ್ ಅನ್ವಯವಾಗಲಿದೆ. ಆರಂಭಿಕ ಟಿಕೆಟ್ ಬುಕಿಂಗ್ ಮಾಡುವ ವೇಳೆಯೇ ರಿಟರ್ನ್ ಟಿಕೆಟ್ ಬುಕಿಂಗ್ ಮಾಡಿದವರಿಗೆ ಡಿಸ್ಕೌಂಟ್ ಸಿಗಲಿದೆ.

ಯಾವಾಗ ಈ ಆಫರ್ ಲಭ್ಯ

ಫೆಸ್ಟಿವಲ್ ಸೀಸನ್ ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆಗೆ ಡಿಸ್ಕೌಂಟ್ ಆಫರ್ ಆಗಸ್ಟ್ 14ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 13 ರಿಂದ ಅಕ್ಟೋಬರ್ 26ರ ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರು, ಅಥವಾ ಈ ದಿನಾಂಕದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕು ಟಿಕೆಟ್ ಬುಕಿಂಗ್ ಮಾಡುವಾಗ ಈ ಆಫರ್ ಲಭ್ಯವಾಗಲಿದೆ. ಎರಡನೇ ಹಂತದ ಆಫರ್ ಪ್ರಯೋಜ ನವೆಂಬರ್ 17 ರಿಂದ ಡಿಸೆಂಬರ್ 1ರ ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೌಂಡ್ ಟ್ರಿಪ್ ಹಾಗೂ ಡಿಸ್ಕೌಂಟ್ ಆಫರ್ ಲಭ್ಯವಾಗಲಿದೆ. ಈ ನಿಗದಿತ ಪ್ರಯಾಣದ ವೇಳೆ ಪ್ರಾಯಣ ಮಾಡಲು ಇಚ್ಚಿಸುುವ ಪ್ರಯಾಣಿಕರು ಆಗಸ್ಟ್ 14ರಿಂದ ಟಿಕೆಟ್ ಬುಕಿಂಗ್ ಮಾಡಬಹುದು.

ಯಾವ ರೈಲುಗಳಿಗೆ ಈ ಆಫರ್ ಅನ್ವಯ

ವಿಶೇಷ ಅಂದರೆ ಎಲ್ಲಾ ರೈಲುಗಳಿಗೆ ಈ ಆಫರ್ ಅನ್ವಯವಾಗಲಿದೆ. ಎಲ್ಲಾ ಕ್ಲಾಸ್ ಹಾಗೂ ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ. ಡಿಸ್ಕೌಂಟ್ ಆಫರ್ ಪಡೆಯಲು ರಿಟರ್ನ್ ಕೂಡ ಸೇಮ್ ಕ್ಲಾಸ್ ಬುಕಿಂಗ್ ಮಾಡಬೇಕು. ರೈಲ್ವೇ ಪಾಸ್, ಕೂಪನ್ ಹಾಗೂ ವೌಚರ್‌ಗೂ ಈ ಆಫರ್ ಅನ್ವಯವಾಗಲಿದೆ.

ರೌಂಡ್ ಟ್ರಿಪ್ ಪ್ಯಾಕೇಜ್ ಮೂಲಕ ಪ್ರಯಾಣಿಕರು ಡಿಸ್ಕೌಂಟ್ ಜೊತೆಗೆ ಹಬ್ಬಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಪ್ರಯಾಣ ಮಾಡಬಹುದು. ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇಷ್ಟೇ ಅಲ್ಲ ಟಿಕೆಟ್ ಸಿಗದೆ ಹಲವರು ಪರದಾಡುತ್ತಾರೆ. ಹೀಗಾಗಿ ಈ ಸಮಸ್ಯೆಗಳನ್ನು ಪರಿಹರಿಸಲು ರೈಲ್ವೇ ಇಲಾಖೆ ಇದೀಗ ಮೊದಲೇ ಬುಕಿಂಗ್ ಸೌಲಭ್ಯ ನೀಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ಡಿಸ್ಕೌಂಟ್ ಲಭ್ಯವಾದರೆ, ಸಂಚಾರ ದಟ್ಟಣೆ, ಟಿಕೆಟ್ ಇಲ್ಲದೆ ಪ್ರಯಾಣ, ಅಂತಿಮ ಹಂತದಲ್ಲಿನ ಗೊಂದಲವೂ ನಿವಾರಣೆಯಾಗಲಿದೆ.

ಪ್ರತಿ ಹಬ್ಬದ ಸೀಸನ್‌ಗಳಲ್ಲಿ ಪ್ರಯಾಣ ದುಸ್ತರವಾಗುತ್ತದೆ. ಬಸ್ ಸೇರಿದಂತೆ ಇತರ ಪ್ರಯಾಣ ಬಲು ದುಬಾರಿಯಾಗುತ್ತದೆ. ಹಬ್ಬದ ಸೀಸನ್‌ಗಳಲ್ಲಿ ಬಸ್ ದರ ಏರಿಕೆ ಮಾಡಲಾಗುತ್ತದೆ. ಹೀಗಾಗಿ ಬಹುತೇಕರು ಭಾರತೀಯ ರೈಲ್ವೇ ಮೂಲಕ ಪ್ರಯಾಣ ಮಾಡುತ್ತಾರೆ. ಆರಾಮಾದಾಯಕ ಪ್ರಯಾಣ ಮಾತ್ರವಲ್ಲ, ಅಗ್ಗದ ಬೆಲೆಯಲ್ಲೂ ಪ್ರಯಾಣ ಮಾಡಲು ಸಾಧ್ಯವಿದೆ. ಹೀಗಾಗಿ ಈಗಲೂ ಭಾರತದಲ್ಲಿ ರೈಲ್ವೇ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬಹುತೇಕರು ಪ್ರಯಾಣಕ್ಕಾಗಿ ರೈಲ್ವೇ ಅವಲಂಬಿಸಿದ್ದಾರೆ. ದೂರ ಪ್ರಯಾಣವೇ ಇರಲಿ, ಹತ್ತಿರದ ಪ್ರಯಾಣವೇ ಇರಲಿ, ರೈಲು ಪ್ರಯಾಣ ಸುಲಭ ಹಾಗೂ ಅರಾಮದಾಯಕವಾಗಿದೆ.