ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್‌ ಕೋರ್ಟ್‌

ಸೂರತ್‌ ಸೆಷನ್ಸ್‌ ಕೋರ್ಟ್‌ನ ದ್ವಿಸದಸ್ಯ ಪೀಠ ರಾಹುಲ್‌ ಗಾಂಧಿಗೆ ಯಾವುದೇ ರಿಲೀಫ್‌ ನೀಡಿಲ್ಲ. ಬದಲಾಗಿ ಮಾಜಿ ಸಂಸದನಿಗೆ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಕಾಂಗ್ರೆಸ್‌ ನಾಯಕನಿಗೆ ಮತ್ತೆ ಮಖಭಂಗವಾಗಿದೆ. 

rahul gandhi to remain disqualified as mp big set back by surat sessions court ash

ಸೂರತ್‌ (ಏಪ್ರಿಲ್ 20, 2023): ಕಾಂಗ್ರೆಸ್‌ ನಾಯಕ ಹಾಗೂ ವಯನಾಡು ಮಾಜಿ ಸಂಸದ ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆಯಾಗಿದೆ.  ಮೋದಿ ಸರ್‌ ನೇಮ್‌ ಪ್ರಕರಣದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಜೈಲು ಶಿಕ್ಷೆಗೆ ತಡೆ ನೀಡುವಂತೆ ಸೂರತ್‌ ಸೆಷನ್ಸ್‌ ಕೋರ್ಟ್‌ಗೆ ಮೇಲ್ಮನವಿ ಹೋಗಿದ್ರು. ಆದರೆ, ಸೆಷನ್ಸ್‌ ಕೋರ್ಟ್‌ನ ದ್ವಿಸದಸ್ಯ ಪೀಠ ರಾಹುಲ್‌ ಗಾಂಧಿಗೆ ಯಾವುದೇ ರಿಲೀಫ್‌ ನೀಡಿಲ್ಲ. ಬದಲಾಗಿ ಮಾಜಿ ಸಂಸದನಿಗೆ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಕಾಂಗ್ರೆಸ್‌ ನಾಯಕನಿಗೆ ಮತ್ತೆ ಮಖಭಂಗವಾಗಿದೆ. 

ರಾಹುಲ್‌ ಗಾಂಧಿಗೆ ಸೂರತ್‌ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ವಯನಾಡು ಸಂಸದನ ಸ್ಥಾನವನ್ನೂ ಕಳೆದುಕೊಂಡ್ರು. ಸೂರತ್‌ ಸೆಷನ್ಸ್‌ ಕೋರ್ಟ್‌ ಈಗ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ಅವರು ಸದ್ಯಕ್ಕೆ ಸಂದರಾಗಲೂ ಸಾಧ್ಯವಿಲ್ಲ. ಸೂರತ್‌ ಕೋರ್ಟ್‌ನಲ್ಲಿ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ರಾಹುಲ್‌ ಗಾಂಧಿ ಈಗ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.  

ಇದನ್ನು ಓದಿ: ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!

ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೂರತ್‌ ನ್ಯಾಯಾಲಯ ಗುರುವಾರ ನಡೆಸಿದೆ. ಅಲ್ಲದೇ ಇದೇ ವೇಳೆ ರಾಹುಲ್‌ ಗಾಂಧಿ ಶಿಕ್ಷೆ ತಡೆಗೆ ಶಾಸಕ ಪೂರ್ಣೇಶ್‌ ಮೋದಿ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸಹ ವಿಚಾರಣೆ ನಡೆಸಿದೆ ಒಂದು ವೇಳೆ ಆಕ್ಷೇಪಣಾ ಅರ್ಜಿ ವಿಚಾರಣೆ ಬಳಿಕ ರಾಹುಲ್‌ ಶಿಕ್ಷೆಗೆ ತಡೆ ಕೋರ್ಟ್‌ ತಡೆ ನೀಡಿದ್ದರೆ ರಾಹುಲ್‌ ಗಂಧಿ ಲೋಕಸಭಾ ಸದಸ್ಯತ್ವದ ಅನರ್ಹತೆಯಿಂದ ತಕ್ಷಣಕ್ಕೆ ಪಾರಾಗುತ್ತಿದ್ದರು ಹೀಗಾಗಿ ಗುರುವಾರದ ಕೋರ್ಟ್‌ ನಡೆ ಕುತೂಹಲಕ್ಕೆ ಕಾರಣವಾಗಿತ್ತು. 

ರಾಹುಲ್‌ ಶಿಕ್ಷೆಗೆ ತಡೆ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಪೂರ್ಣೇಶ್‌ ಮೋದಿ, ರಾಹುಲ್‌ ಗಾಂಧಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಮಾನಹಾನಿಯಾಗುವಂತೆ ಮಾತಾನಾಡುವುದನ್ನು ಅವರು ಹವ್ಯಾಸ ಮಾಡಿಕೊಂಡಂತಿದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಶಿಕ್ಷೆ ನೀಡುವ ಸಮಯದಲ್ಲಿ ನ್ಯಾಯಾಧೀಶರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ಕಡಿವಾಣ ಹಾಕಬೇಕು. ಹಾಗಾಗಿ ರಾಹುಲ್‌ ಗಾಂಧಿ ಶಿಕ್ಷೆಗೆ ತಡೆ ನೀಡಬಾರದು ಎಂದು ಕೋರಿದ್ದರು.

ಇದನ್ನೂ ಓದಿ: ಸಂಸದ ಸ್ಥಾನದಿಂದ ತೆಗೆದು, ಪ್ರಶ್ನೆ ಕೇಳದಂತೆ ಹೆದರಿಸಲಾಗದು: ರಾಹುಲ್‌ ಗಾಂಧಿ; ನಾಳೆ ಮಾನನಷ್ಟ ಮೊಕದ್ದಮೆ ಕೇಸ್‌ ವಿಚಾರಣೆ

‘ಮೋದಿ ಎಂಬ ಸರ್‌ನೇಮ್‌ ಉಳ್ಳವರೆಲ್ಲ ಕಳ್ಳರು’ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೋಲಾರದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಬಿಹಾರದಲ್ಲೂ ಸಹ ಈಗಾಗಲೇ ಮಾನನಷ್ಟ ಪ್ರಕರಣದ ವಿಚಾರಣೆ ಆರಂಭವಾಗಿದೆ.  

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಹೂಡಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ರಾಹುಲ್ ಗಾಂಧಿ ಕಳೆದ ವಾರ ಗೈರಾಗಿದ್ದರು. ಅವರ ವಕೀಲರು ‘ರಾಹುಲ್‌ ಸೂರತ್‌ ಕೋರ್ಟ್‌ ವಿಧಿಸಿದ 2 ವರ್ಷಗಳ ಜೈಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಲ್ಲಿ ಬ್ಯುಸಿಯಿದ್ದಾರೆ. ಹೀಗಾಗಿ ಇನ್ನೊಂದು ದಿನಾಂಕ ನೀಡಬೇಕು’ ಎಂದು ಕೋರಿದ್ದರು. ಅದನ್ನು ಪರಿಗಣಿಸಿದ ಕೋರ್ಟ್‌ ಏಪ್ರಿಲ್‌ 25ರಂದು ರಾಹುಲ್‌ ಖುದ್ದಾಗಿ ಹಾಜರಾಗಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶದಲ್ಲಿ ಭೇಟಿಯಾಗೋ ಉದ್ಯಮಿಗಳು ಯಾರು..? ಬಿಜೆಪಿ ಪ್ರಶ್ನೆ

Latest Videos
Follow Us:
Download App:
  • android
  • ios