ಇಂದಿನಿಂದ ಪಿಎಂ ಮೋದಿ ವಿರುದ್ಧ 3 ದಿನ ಅವಿಶ್ವಾಸ ನಿರ್ಣಯ ಚರ್ಚೆ, ಭಾರಿ ಮಾತಿನ ಸಮರ ಪಕ್ಕಾ

ಇಂದಿನಿಂದ 3 ದಿನ ಅವಿಶ್ವಾಸ ನಿರ್ಣಯ ಚರ್ಚೆ.  ಪಿಎಂ ಮೋದಿ ಉತ್ತರ ಬಳಿಕ ಮತದಾನ ಇಂದು ನಿರ್ಣಯದ ಮೇಲೆ ರಾಹುಲ್‌ ಗಾಂಧಿ ಭಾಷಣ.

Rahul Gandhi To Begin No-Trust Debate  against PM narendra Modi gow

ನವದೆಹಲಿ (ಆ.8): ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಮಂಗಳವಾರದಿಂದ ಲೋಕಸಭೆಯಲ್ಲಿ ಚರ್ಚೆ ಆರಂಭವಾಗಲಿದೆ. ಆ.10ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದು, ಬಳಿಕ ಮತದಾನ ನಡೆಯಲಿದೆ. ಅವಿಶ್ವಾಸ ನಿರ್ಣಯ ಚರ್ಚೆ ಭಾರಿ ಕಾವೇರುವ ಸಾಧ್ಯತೆ ಇದ್ದು, ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಭಾರಿ ಮಾತಿನ ಸಮರ ನಡೆಯುವ ಎಲ್ಲ ಲಕ್ಷಣಗಳಿವೆ. ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅವಿಶ್ವಾಸ ನಿರ್ಣಯದ ಬಗ್ಗೆ ಭಾಷಣ ಮಾಡಲಿದ್ದಾರೆ. ಅವರ ಅನರ್ಹತೆ ರದ್ದಾದ ಬಳಿಕ ಮೊದಲ ಲೋಕಸಭಾ ಭಾಷಣ ಇದಾಗಲಿದ್ದು, ಸರ್ಕಾರದ ವಿರುದ್ಧ ಪ್ರಹಾರ ನಡೆಸಲಿದ್ದಾರೆ.

ಸಂಸತ್ ಸದಸ್ಯತ್ವ ಮರಳಿ ಪಡೆದ ರಾಹುಲ್ ಗಾಂಧಿಗೆ ತಂಗಲು ಅದೇ ಮನೆ ಸಿಗುತ್ತಾ? ಇಲ್ಲಿದೆ ನಿಯಮ!

ಅವಿಶ್ವಾಸ ನಿರ್ಣಯ ಏಕೆ?: ವಿಪಕ್ಷಗಳ ಬಳಿ ಬಲಾಬಲವಿಲ್ಲ. ಆದರೆ ಎನ್‌ಡಿಎ ಬಳಿ 340 ಸಂಸದರಿದ್ದು, ವಿಪಕ್ಷ ‘ಇಂಡಿಯಾ’ ಕೂಟದ ಬಳಿ ಕೇವಲ 140 ಸಂಸದರಿದ್ದಾರೆ. ಇನ್ನು 60 ಸಂಸದರು ತಟಸ್ಥರಾಗಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತವಾಗಿದೆ. ಇದು ಗೊತ್ತಿದ್ದರೂ ವಿಪಕ್ಷಗಳು ಅವಿಶ್ವಾಸ ನಿಲುವಳಿ ಮಂಡಿಸಿದ್ದರ ಹಿಂದೆ ಬೇರೆಯದ್ದೇ ಲೆಕ್ಕಾಚಾರವಿದೆ. ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಈವರೆಗೂ ಸಂಸತ್ತಿನಲ್ಲಿ ಹೇಳಿಕೆ ನೀಡಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅವರು ಭಾಷಣ ಮಾಡಲೇಬೇಕಾಗುತ್ತದೆ. ಮೋದಿ ಅವರನ್ನು ಹೇಗಾದರೂ ಮಾಡಿ ಸಂಸತ್ತಿನಲ್ಲಿ ಭಾಷಣ ಮಾಡಿಸಬೇಕೆಂದು ವಿಪಕ್ಷಗಳು ಈ ನಿಲುವಳಿ ಮಂಡಿಸಿವೆ. ಮೋದಿ ಗುರುವಾರ ಸದನದಲ್ಲಿ ಮಾತನಾಡಲಿದ್ದು, ಮಣಿಪುರ ವಿಷಯವನ್ನೂ ಪ್ರಸ್ತಾಪಿಸುವ ಸಾಧ್ಯತೆ ಇದೆ.

4 ತಿಂಗಳ ನಂತರ ಮತ್ತೆ ಸಂಸತ್‌ ಭವನಕ್ಕೆ ಕಾಲಿಟ್ಟ ರಾಹುಲ್‌ ಗಾಂಧಿ: ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್‌ಗೆ ಮತ್ತಷ್ಟು ಬಲ!

ಇದು 2018ರ ಜು.20ರ ನಂತರ ಲೋಕಸಭೆ ಕಾಣಲಿರುವ ಮೊದಲ ಅವಿಶ್ವಾಸ ನಿಲುವಳಿ ಆಗಿದೆ. ಆಗ ನಿರ್ಣಯ ಮತಕ್ಕೆ ಹಾಕಿದಾಗ ಎನ್‌ಡಿಎಗೆ 325 ಹಾಗೂ ವಿಪಕ್ಷಗಳಿಗೆ ಕೇವಲ 126 ಮತ ಬಿದ್ದಿದ್ದವು.

ಸದನದ ಬಲಾಬಲ ಎಷ್ಟು?

ಲೋಕಸಭೆ ಒಟ್ಟು ಬಲಾಬಲ: 543

ಈಗಿರುವ ಸ್ಥಾನ: 540

ಬಹುಮತಕ್ಕೆ: 271

ಎನ್‌ಡಿಎ: 330

ಇಂಡಿಯಾ ಕೂಟ: 140

ಇತರರು: 60

Latest Videos
Follow Us:
Download App:
  • android
  • ios