ಕರ್ನಾಟಕಕ್ಕೆ ಬನ್ನಿ, ಗ್ಯಾರಂಟಿ ಸ್ಕೀಂ ನೋಡಿ: ಪಿಎಂ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

‘ಚುನಾವಣಾ ಗ್ಯಾರಂಟಿ’ಗಳನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಕರ್ನಾಟಕ, ತೆಲಂಗಾಣ ಅಥವಾ ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆ ವೇಳೆ ನೀಡಿದ ಪ್ರತಿ ಭರವಸೆಯನ್ನು ಪಕ್ಷವು ಈಡೇರಿಸಿದೆ.

Rahul Gandhi Slams On Pm Modi Over Karnataka Guarantee Schemes gvd

ನವದೆಹಲಿ (ನ.10): ‘ಚುನಾವಣಾ ಗ್ಯಾರಂಟಿ’ಗಳನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಕರ್ನಾಟಕ, ತೆಲಂಗಾಣ ಅಥವಾ ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆ ವೇಳೆ ನೀಡಿದ ಪ್ರತಿ ಭರವಸೆಯನ್ನು ಪಕ್ಷವು ಈಡೇರಿಸಿದೆ. ಆದರೆ ಈ ವಿಷಯದಲ್ಲಿ ಮೋದಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಕರ್ನಾಟಕಕ್ಕೆ ಬಂದು ಖುದ್ದು ಮೋದಿಯವರೇ ಬಂದು ಗ್ಯಾರಂಟಿಗಳು ಹೇಗೆ ಈಡೇರಿವೆ ಎಂದು ನೋಡಲಿ.. ತನಿಖೆ ಮಾಡಲಿ’ ಎಂದು ಸವಾಲು ಎಸೆದಿದ್ದಾರೆ.

ಅಲ್ಲದೆ, ‘ಇಂಡಿಯಾ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ತನ್ನ ಭರವಸೆಯ ‘5 ಗ್ಯಾರಂಟಿ’ಗಳೊಂದಿಗೆ ಮಹಾರಾಷ್ಟ್ರದಲ್ಲೂ ಬದಲಾವಣೆಗಳನ್ನು ತರಲಿದೆ’ ಎಂದು ಅವರು ಪುನರುಚ್ಚರಿಸಿದ್ದಾರೆ.
ಶನಿವಾರ ಸುದೀರ್ಘ ಟ್ವೀಟ್‌ ಮಾಡಿರುವ ರಾಹುಲ್‌, ‘ಜುಲೈ 2022ರಲ್ಲಿ ಮೋದಿ ಕಾಂಗ್ರೆಸ್‌ ಭರವಸೆಗಳನ್ನು ‘ಸುಳ್ಳು ಭರವಸೆ’ ಎಂದು ದೇಶದ ದಾರಿ ತಪ್ಪಿಸಿದ್ದರು. ಆದರೂ ಅವರು ನಮ್ಮ ಖಾತರಿಗಳ ಮೇಲೆ ತಮ್ಮ ಸ್ಲಿಪ್‌ ಅಂಟಿಸಿ ಪ್ರತಿ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೊಟ್ಟ ಭರವಸೆಗಳನ್ನು ಕಾಂಗ್ರೆಸ್‌ ಈಡೇರಿಸಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೋದಿ ಅವರೇ.. ಕರ್ನಾಟಕಕ್ಕೆ ಬನ್ನಿ, ತಿರುಗಾಡಿ ನೋಡಿ, ತನಿಖೆ ಮಾಡಿ.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಯೋಜನೆಗಳು ಕೋಟ್ಯಂತರ ಮಹಿಳೆಯರು, ಯುವಕರು, ರೈತರು ಮತ್ತು ಬಡವರ ಭವಿಷ್ಯವನ್ನು ಬದಲಿಸಿವೆ ಮತ್ತು ತೆಲಂಗಾಣ ಮತ್ತು ಹಿಮಾಚಲದಲ್ಲಿ ನಾವು ಭರವಸೆಗಳನ್ನು ಈಡೇರಿಸಿದ್ದೇವೆ’ ಎಂದಿದ್ದಾರೆ. ಇದಕ್ಕೆ ಕರ್ನಾಟಕದ ಉದಾಹರಣೆ ನೀಡಿರುವ ಅವರು, ‘ಇಂದು ಕರ್ನಾಟಕದ 1.21 ಕೋಟಿ ಮಹಿಳೆಯರು ಕಾಂಗ್ರೆಸ್‌ನ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದೇ ರೀತಿ 5 ಕಾಂಗ್ರೆಸ್‌ ಗ್ಯಾರಂಟಿಗಳು ಮಹಾರಾಷ್ಟ್ರದ ಪ್ರತಿ ವಿಭಾಗವನ್ನು ಅನ್ಯಾಯದ ಚಕ್ರವ್ಯೂಹದಿಂದ ಮುಕ್ತಗೊಳಿಸುತ್ತವೆ ಅವರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಡುತ್ತವೆ’ ಎಂದು ಹೇಳಿದ್ದಾರೆ.

ಹೆಣ ಹೂಳುವುದರಲ್ಲೂ ಬಿಜೆಪಿಗರು ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡುವ ಬಿಜೆಪಿಯವರು ಒಳಗೊಳಗೇ ನಮ್ಮ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ. ಜನಪರ ಯೋಜನೆಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದವರು ಕರ್ನಾಟಕಕ್ಕೆ ಬಂದು ನೋಡಲಿ.
- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Latest Videos
Follow Us:
Download App:
  • android
  • ios