ರಾಹುಲ್‌ ಗಾಂಧಿಗೆ 2 ಗಂಟೆ ಕಾಯವ ಶಿಕ್ಷೆ: ಮೋದಿ ಕಾಪ್ಟರ್‌ಗೆ ಅವಕಾಶ ನೀಡಲು ಈ ಕ್ರಮ?

ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್ ಟೇಕಾಫ್‌ಗೆ ಅನುಮತಿ ನಿರಾಕರಿಸಿದ ಘಟನೆ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ರ್ಯಾಲಿ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Rahul Gandhi s chopper take-off delayed Congress urges Election Commission to ensure fair campaigning  mrq

ರಾಂಚಿ: ಟೇಕಾಫ್‌ಗೆ ಅನುಮತಿ ಇಲ್ಲದ ಕಾರಣ ಜಾರ್ಖಂಡ್‌ನ ಗೊಡ್ಡಾದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಸುಮಾರು 2 ಗಂಟೆಗಳ ಕಾಲ ನಿಂತ ಘಟನೆ ಶುಕ್ರವಾರ ನಡೆದಿದೆ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಚುನಾವಣಾ ಆಯೋಗಕ್ಕೆ ದೂರಿದೆ. 

ಜಾರ್ಖಂಡ್ ಪಕ್ಕದಲ್ಲೇ ಇರುವ ಬಿಹಾರದ ಜಮೂಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ಶುಕ್ರವಾರ ಆಯೋಜನೆ ಆಗಿತ್ತು. ಅವರು ಜಾರ್ಖಂಡ್‌ನ ದೇವಗಢಕ್ಕೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ಜಮೂಯಿಗೆ ತೆರಳಿದ್ದರು ಹಾಗೂ ವಾಪಸು ದೇವಗಢದಿಂದ ವಿಮಾನದಲ್ಲಿ ದಿಲ್ಲಿಗೆ ತೆರಳುವವರಿದ್ದರು. ಆದರೆ ಮೋದಿ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದ ಕಾರಣ 2 ತಾಸು ಜಾರ್ಖಂಡ್‌ನ ಕೆಲ ಭಾಗಗಳಲ್ಲಿ ವಾಯುಸಂಚಾರ ನಿರ್ಬಂಧಿಸಲಾಗಿತ್ತು. 

ಹೀಗಾಗಿ ರಾಹುಲ್ ಕಾಪ್ಟರ್‌ನಲ್ಲೇ ಮೊಬೈಲ್ ನೋಡುತ್ತ ಕೂತಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ಆಕ್ಷೇಪಿಸಿದ್ದು, 'ಮಧ್ಯಾಹ್ನ 1.15ಕ್ಕೆ ಗೊಡ್ಡಾದಿಂದ ಹೊರಡಲು ರಾಹುಲ್‌ಗೆ ಪೂರ್ವಾನುಮತಿ ಸಿಕ್ಕಿತ್ತು. ಆದರೆ ಕೊನೇ ಕ್ಷಣದಲ್ಲಿ ಇತರ ನಾಯಕರ ವಾಯುಸಂಚಾರ ಇದೆ ಎಂಬ ಕಾರಣ ನೀಡಿ ಅನುಮತಿ ತಡೆಹಿಡಿದಿದ್ದು ರಾಜಕೀಯ ಪ್ರೇರಿತ. ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಕ್ಕೆ ಅವಕಾಶ ನೀಡಬೇಕು' ಎದು ಚುನಾವಣಾ ಆಯೋಗಕ್ಕೆ ದೂರಿದೆ.

ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ
ದೇವಗಢ (ಜಾರ್ಖಂಡ್): ಜಾರ್ಖಂಡ್‌ನ ದೇವಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸಬೇಕಿದ್ದ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದ ಕಾರಣ ಅವರು 2 ತಾಸು ಕಾಲ ವಿಮಾನ ನಿಲ್ದಾಣದಲ್ಲೇ ಬಾಕಿ ಆದ ಘಟನೆ ನಡೆದಿದೆ. ಬಳಿಕ ಮತ್ತೊಂದು ವಿಮಾನದಲ್ಲಿ ದಿಲ್ಲಿಗೆ ಮರಳಿದ್ದಾರೆ. ದೇವಗಢದಿಂದ 80 ಕಿ.ಮೀ. ದೂರದಲ್ಲಿರುವ ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಅವರು ಜನಜಾತೀಯ ದಿವಸ ಸಮಾರಂಭಕ್ಕೆ ಆಗಮಿಸಿದ್ದರು. 

ಇದನ್ನೂ ಓದಿ:ಕೋವಿಡ್‌ ವೇಳೆ ನೆರವಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ!

ದೇವಗಢಕ್ಕೆ ದಿಲ್ಲಿಯಿಂದ ವಾಯುಪಡೆ ವಿಮಾನದಲ್ಲಿ ಬಂದಿಳಿದು, ಅಲ್ಲಿಂದ ಜಮೂಯಿಗೆ ಹೆಲಿಕಾಪ್ಟರಲ್ಲಿ ತೆರಳಿದ್ದರು. ಮರಳಿ ಹೆಲಿಕಾಪ್ಟರಲ್ಲಿ ದೇವಗಢಕ್ಕೆ ಬಂದು ವಾಯುಪಡೆ ವಿಮಾನ ಏರಿ ಕುಳಿತಿದ್ದರು. ಆಗ ವಿಮಾನದಲ್ಲಿ ದೋಷ ಪತ್ತೆಯಾದ ಕಾರಣ, ವಿಮಾನ ಮೇಲೇರಲಿಲ್ಲ. ಹೀಗಾಗಿ 2 ತಾಸು ದೇವಗಢದ ವಿಮಾನನಿಲ್ದಾಣದಲ್ಲೇ ಅವರು ಸಮಯ ಕಳೆದರು. ಈ ವೇಳೆ ಎಷ್ಟೇ ಪ್ರಯತ್ನ ಪಟ್ಟರೂ ವಿಮಾನ ದುರಸ್ತಿ ಆಗಲಿಲ್ಲ. ಹಾಗಾಗಿ 2 ತಾಸು ನಂತರ ಅವರು ನವದೆಹಲಿಯಿಂದ ಕಳುಹಿಸಲಾದ ಮತ್ತೊಂದು ಭಾರತೀಯ ವಾಯುಪಡೆ ವಿಮಾನದಲ್ಲಿ ದೆಹಲಿಗೆ ತೆರಳಿದರು. 

ಮೋದಿ ದೇವಗಢದಲ್ಲೇ ಸಿಲುಕಿದಾಗ 2 ತಾಸು ಜಾರ್ಖಂಡ್‌ನ ಕೆಲವೆಡೆ ವಾಯುಸಂಚಾರ ನಿಷೇಧಿಸಲಾಗಿತ್ತು ಎಂದು ದೇವಗಢ ಜಿಲ್ಲಾಧಿಕಾರಿ ವಿಶಾಲ್ ಸಾಗರ್ ಹೇಳಿದ್ದಾರೆ.

ಇದನ್ನೂ ಓದಿ: Breaking: ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಗೆ ಮರಳುವುದು ವಿಳಂಬ

 


ಠಾಕ್ರೆ ಬೆನ್ನಲ್ಲೇ ಶಾ ಹೆಲಿಕಾಪ್ಟರ್ ತಪಾಸಣೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್‌ ಹಾಗೂ ಅದರೊಳಗಿದ್ದ ಬ್ಯಾಗ್‌ಗಳನ್ನು ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಪಾಲನೆ ನಿಮಿತ್ತ ಹಿಂಗೋಲಿ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸಿದರು. ಇತ್ತೀಚೆಗೆ ಶಿವಸೇನೆ (ಯುಬಿಟಿ) ನೇತಾರ ಉದ್ಧವ ಠಾಕ್ರೆ ಅವರ ಕಾಪ್ಟರನ್ನು ಆಯೋಗ ಪರಿಶೀಲಿಸಿತ್ತು. ಇದಕ್ಕೆ ಕಿಡಿಕಾರಿದ್ದ ಠಾಕ್ರೆ, ‘ಬರೀ ನನ್ನ ಕಾಪ್ಟರ್‌ ಮಾತ್ರ ತಪಾಸಣೆ ಏಕೆ? ಮೋದಿ, ಶಾ ಕಾಪ್ಟರ್‌ ಏಕ ತಪಾಸಿಸುತ್ತಿಲ್ಲ?’ ಎಂದಿದ್ದರು.

ಇದರ ಬೆನ್ನಲ್ಲೇ ಶುಕ್ರವಾರ ಶಾ ಕಾಪ್ಟರ್ ಹಾಗೂ ಅದರಲ್ಲಿನ ಚೀಲಗಳನ್ನು ಹಿಂಗೋಲಿಯಲ್ಲಿ ಪ್ರಚಾರಕ್ಕೆ ಬಂದಾಗ ಆಯೋಗದ ಅಧಿಕಾರಿಗಳು ತಪಾಸಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾ, ‘ಬಿಜೆಪಿ ನ್ಯಾಯಯುತ ಮತ್ತು ಆರೋಗ್ಯಕರ ಚುನಾವಣೆ ಬಯಸುತ್ತದೆ. ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಬಿಜೆಪಿ ಪಾಲಿಸುತ್ತದೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios